ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ಗೆ ದಿಢೀರ್‌ ಪೈಪೋಟಿ ನೀಡಿದ್ದ ಸಿಗ್ನಲ್‌ 'ಡೌನ್‌'

Last Updated 16 ಜನವರಿ 2021, 3:08 IST
ಅಕ್ಷರ ಗಾತ್ರ

ವಾಟ್ಸ್‌ಆ್ಯಪ್‌ಗೆ ದಿಢೀರ್‌ ಪೈಪೋಟಿ ನೀಡಿದ್ದ ಮೆಸೇಜಿಂಗ್‌ ಆ್ಯಪ್‌ 'ಸಿಗ್ನಲ್‌'ನ ಕಾರ್ಯಸ್ಥಗಿತಗೊಂಡಿದೆ.

ಬಳಕೆದಾರರ ಭದ್ರತೆ ಮತ್ತು ಗೋಪ್ಯತೆಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲಗಳಿಂದಾಗಿ ಭಾರತದಲ್ಲಿ ಸಿಗ್ನಲ್‌ ಆ್ಯಪ್‌ನ ಬಳಕೆದಾರರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿತ್ತು.

ಈ ಬಗ್ಗೆ ಶುಕ್ರವಾರ ರಾತ್ರಿ ಟ್ವೀಟ್‌ ಮಾಡಿರುವ ಸಿಗ್ನಲ್ ಕಂಪನಿಯು, 'ನಾವು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಸೇವೆಗೆ ಮರಳಲು ಶ್ರಮಿಸುತ್ತಿದ್ದೇವೆ.' ಎಂದು ತಿಳಿಸಿದೆ.

'ನಾವು ಹೆಚ್ಚುವರಿ ಸಾಮರ್ಥ್ಯ ಹೊಂದಿರುವ ಹೊಸ ಸರ್ವರ್‌ಗಳನ್ನು ತಡೆರಹಿತವಾಗಿ ಅಳವಡಿಸುತ್ತಿದ್ದೇವೆ. ಲಕ್ಷಾಂತರ ಹೊಸ ಬಳಕೆದಾರರು ಗೋಪ್ಯತೆಗೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನಿಮ್ಮ ತಾಳ್ಮೆಯನ್ನು ನಾವು ಪ್ರಶಂಸಿಸುತ್ತೇವೆ' ಎಂದು ಸಿಗ್ನಲ್‌ ಹೇಳಿದೆ.

ಖಾಸಗಿ ಮಾಹಿತಿ ಸುರಕ್ಷತೆ ಮತ್ತು ಗೋಪ್ಯತೆಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಬಗ್ಗೆ ಜಗತ್ತಿನಾದ್ಯಂತ ವಿವಾದ ಸೃಷ್ಟಿಯಾಗಿತ್ತು. ಅದರ ಬೆನ್ನಲ್ಲೇ ವಾಟ್ಸ್‌ಆ್ಯಪ್‌ ಬಳಕೆದಾರರು ಸ್ವಯಂ ಪ್ರೇರಿತರಾಗಿ ಸಿಗ್ನಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ಅದರಲ್ಲೂ ಭಾರತದಲ್ಲಿ ಹೆಚ್ಚು ಜನ 'ಸಿಗ್ನಲ್‌' ಬಳಕೆಯನ್ನು ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT