ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾ, ಫೇಸ್‌ಬುಕ್‌ ಮೇಲೆ ಕಣ್ಗಾವಲು: ಪಾಲಕರಿಗೆ ಹೊಸ ಸಾಧನಗಳನ್ನು ನೀಡಿದ ಮೆಟಾ

Published 27 ಜೂನ್ 2023, 13:25 IST
Last Updated 27 ಜೂನ್ 2023, 13:25 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾ, ತನ್ನ ಈ ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲೆ ಪಾಲಕರು ಕಣ್ಗಾವಲು ಹೆಚ್ಚಿಸಲು ಅನುಕೂಲವಾಗುವಂತೆ ಮತ್ತಷ್ಟು ಸಾಧನಗಳನ್ನು ನೀಡಿದೆ.

ಈ ಸಾಮಾಜಿಕ ವೇದಿಕೆಗಳ ಬಳಕೆಯು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂಬ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಂಪನಿಯು ಈ ಕ್ರಮಗಳನ್ನು ಕೈಗೊಂಡಿದೆ.

ಆದರೆ, ಅಪ್ರಾಪ್ತ ವಯಸ್ಸಿನವರಾಗಲಿ ಹಾಗೂ ಅವರ ಪಾಲಕರೇ ಆಗಲಿ ಕಂಪನಿ ನೀಡಿರುವ ಹೊಸ ಸಾಧನಗಳ ಪೈಕಿ ಹಲವನ್ನು ಆಯ್ಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಹೀಗಾಗಿ, ದುರ್ಬಳಕೆ ತಡೆಯಲು ನೀಡಿರುವ ಹೊಸ ಸಾಧನಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಲ್ಲವು ಎಂಬ ಪ್ರಶ್ನೆಗಳು ಉದ್ಭವಿಸಿವೆ ಎಂದು ಮೂಲಗಳು ಹೇಳಿವೆ.

ಉದಾಹರಣೆಗೆ, ಒಬ್ಬ ಅಪ್ರಾಪ್ತ ವಯಸ್ಸಿನ ವ್ಯಕ್ತಿ ಯಾರನ್ನಾದರೂ ಬ್ಲಾಕ್‌ ಮಾಡಿದಲ್ಲಿ, ಈ ಬಗ್ಗೆ ಆತನ/ಆಕೆಯ ಪಾಲಕರಿಗೆ ಇನ್‌ಸ್ಟಾಗ್ರಾಮ್‌ ನೋಟಿಸ್‌ ರವಾನಿಸುತ್ತದೆ. ಪಾಲಕರು ತಮ್ಮ ಮಕ್ಕಳ ಖಾತೆಯ ಮೇಲ್ವಿಚಾರಣೆ ಮಾಡಲು ಅಥವಾ ಮಕ್ಕಳು ತಮ್ಮ ಪಾಲಕರ ಮಾರ್ಗದರ್ಶನ ಪಡೆಯಲು ಅನುಕೂಲವಾಗಲಿದೆ ಎಂದು ಮೆಟಾ ಹೇಳಿದೆ.

‘ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಎಷ್ಟು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಈ ಹೊಸ ಸಾಧನಗಳು ಪಾಲಕರಿಗೆ ನೆರವಾಗಲಿವೆ. ಆಫ್‌ಲೈನ್‌ನಲ್ಲಿಯೂ ಸಂವಹನ ನಡೆಸಲು ಕೂಡ ಸಹಕಾರಿಯಾಗಲಿವೆ’ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT