ಗುರುವಾರ , ಆಗಸ್ಟ್ 18, 2022
24 °C

ಅಸ್ಸಾಮಿ ಭಾಷೆಯಲ್ಲಿ ಶುರುವಾದ ಕೂ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ (ಪಿಟಿಐ): ಸ್ವದೇಶಿ ಮೈಕ್ರೋ ಬ್ಲಾಗಿಂಗ್ ಮತ್ತು ಸಾಮಾಜಿಕ ಜಾಲತಾಣ ಕೂ ಅಸ್ಸಾಮಿ ಭಾಷೆಯಲ್ಲಿ ಆ್ಯಪ್‌ ಆರಂಭಿಸಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಕೂ ಆ್ಯಪ್‌ ಬಿಡುಗಡೆ ಮಾಡಿದರು.

ಅಸ್ಸಾಮೀಸ್‌ ಭಾಷೆಯಲ್ಲಿ ತಮ್ಮ ಸಂದೇಶವನ್ನು ಕ್ಯೂ ಆಪ್‌ನಲ್ಲಿ ರವಾನಿಸಿದ ಮುಖ್ಯಮಂತ್ರಿ ‘ನಾ ಕೂ ಆ್ಯಪ್ ಜಾಲತಾಣವನ್ನು ಸೇರುವ ಜತೆಗೆ ಈ ಆ್ಯಪ್‌ ಅನ್ನು ಅಸ್ಸಾಮೀಸ್ ಭಾಷೆಯಲ್ಲಿ ಬಿಡುಗಡೆ ಮಾಡಿರುವುದಯ ತುಂಬಾ ಸಂತೋಷ ನೀಡಿದೆ. ಅಸ್ಸಾಂನ ಜನರಿಗೆ ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಮಾತೃಭಾಷೆಯಲ್ಲಿ ಹಂಚಿಕೊಳ್ಳಲು ಈ ಅಪ್ಲಿಕೇಶನ್ ಅನುವು ಮಾಡಿಕೊಡಲಿದೆ’ ಎಂದು ಹೇಳಿದರು.

‘ಕೂ ಅಪ್ಲಿಕೇಶನ್‌ನಲ್ಲಿ ಜನರೊಂದಿಗೆ ಬೆರೆಯಲು ನಾನು ಎದುರು ನೋಡುತ್ತಿದ್ದೇನೆ.ಇಲ್ಲಿ ನನ್ನ ಅಭಿಪ್ರಾಯಗಳು, ಪ್ರಕಟಣೆಗಳು ಮತ್ತು ಇನ್ನೂ ಅನೇಕ ಹೊಸ ವಿಷಯಗಳನ್ನು ಕೂಯಿಂಗ್ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಕೂನಿಂದ ಅತ್ಯುತ್ತಮ ಸೌಲಭ್ಯ ಮತ್ತು ಸೇವೆ ಸಿಗಲಿದೆ’ ಎಂದು ಶರ್ಮಾ ವಿಶ್ವಾಸ ವ್ಯಕ್ತಪಡಿಸಿದರು.

ಕೂ ಸಹ ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ಕೂ ಜಾಲಾತಣಕ್ಕೆ ಮುಖ್ಯಮಂತ್ರಿ ಅಡಿ ಇಟ್ಟಿದ್ದು ನಮಗೆ ತುಂಬಾ ಸಂತೋಷವಾಗಿದೆ. ಅಸ್ಸಾಮಿ ಭಾಷೆಯ ಮೊದಲ ಕೂ ಅನ್ನು ಮುಖ್ಯಮಂತ್ರಿ ಪ್ರಾರಂಭಿಸಿರುವುದರಿಂದ ನಮಗೆ ಇನ್ನಷ್ಟು ಉತ್ಸಾಹ ಬಂದಿದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು