ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓನ್ಲಿಫ್ಯಾನ್ಸ್ ಸಿಇಒ ಆಗಿ ಭಾರತ ಮೂಲದ ಆಮ್ರಪಾಲಿ

Last Updated 23 ಡಿಸೆಂಬರ್ 2021, 10:59 IST
ಅಕ್ಷರ ಗಾತ್ರ

ಬೆಂಗಳೂರು: ವಯಸ್ಕರ ವಿಡಿಯೊ ಹಂಚಿಕೊಳ್ಳುವ ಸಾಮಾಜಿಕ ತಾಣ ‘ಓನ್ಲಿಫ್ಯಾನ್ಸ್‘ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂಬಯಿ ಮೂಲದ ಆಮ್ರಪಾಲಿ ‘ಅಮಿ‘ ಜನ್ ನೇಮಕವಾಗಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿರುವ ಅಮಿ ಅವರು, ಸಿಇಒ ಆಗಿ ನೇಮಕವಾಗುವುದಕ್ಕೂ ಮೊದಲು ಓನ್ಲಿಫ್ಯಾನ್ಸ್‌ನಲ್ಲಿ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ಸ್ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಓನ್ಲಿಫ್ಯಾನ್ಸ್‌ನಲ್ಲಿ ಖಾತೆ ಪಡೆಯಲು ಚಂದಾದಾರಿಕೆ ಆಯ್ಕೆ ಇದೆ. 2016ರಲ್ಲಿ ಓನ್ಲಿಫ್ಯಾನ್ಸ್ ಸ್ಥಾಪನೆಯಾಗಿದೆ.

ವಯಸ್ಕರ ಫೋಟೊ ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡಿ, ಚಂದಾದಾರರೊಡನೆ ಹಂಚಿಕೊಳ್ಳುವ ಆಯ್ಕೆಯನ್ನು ಓನ್ಲಿಫ್ಯಾನ್ಸ್ ಬಳಕೆದಾರರಿಗೆ ನೀಡುತ್ತದೆ.

ಓನ್ಲಿಫ್ಯಾನ್ಸ್ ಸ್ಥಾಪಕ ಟಿಮ್ ಸ್ಟಾಕ್ಲಿ ಅವರು ಹುದ್ದೆಯಿಂದ ಕೆಳಗಿಳಿದಿದ್ದು, ಆಮ್ರಪಾಲಿ ಅವರನ್ನು ಸಿಇಒ ಆಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT