ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದಲ್ಲಿ ಟ್ವಿಟರ್ ನಿಷೇಧ, ಬೆಂಗಳೂರಿನ ‘ಕೂ’ ಆ್ಯಪ್ ಬಳಕೆಗೆ ಸಮ್ಮತಿ

ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕ ಮೂಲಕ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ನಿಷೇಧಿಸಿ ವಾರ ಕಳೆಯುವುದರೊಳಗೆ ನೈಜೀರಿಯಾ ದೇಶದಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿರುವ ‘ಕೂ’ ಆ್ಯಪ್ ಬಳಕೆಗೆ ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ.

ಈ ಹೊಸ ಬೆಳವಣಿಗೆ ಬಗ್ಗೆ ಕೂ ಸಹ ಸಂಸ್ಥಾಪಕ ಆರ್ ಅಪ್ರಮೇಯ ಸಂತಸ ವ್ಯಕ್ತಪಡಿಸಿದ್ದಾರೆ.

ಜೂನ್ 2 ರಂದು ಅವಹೇಳನಕಾರಿ ನಡವಳಿಕೆ ನೀತಿಯ ಉಲ್ಲಂಘನೆಯನ್ನು ಉಲ್ಲೇಖಿಸಿ ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರ ಟ್ವೀಟ್ ಅನ್ನು ಅಳಿಸಿದ ನಂತರ ನೈಜೀರಿಯಾ ಸರ್ಕಾರ ಟ್ವಿಟರ್ ಜೊತೆ ಸಂಘರ್ಷಕ್ಕಿಳಿದಿದ್ದು, ಅನಿರ್ದಿಷ್ಟಾವಧಿಗೆ ನಿಷೇಧ ಹೇರಿತ್ತು.

ಈ ಮಧ್ಯೆ, ಟ್ವಿಟರ್ ಈ ವಿಷಯವನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳಲು ಉನ್ನತ ಮಟ್ಟದ ಕಾರ್ಯಕಾರಿ ಸಭೆ ನಡೆಸಲು ಮುಂದಾಗಿದೆ ಎಂದು ನೈಜೀರಿಯಾದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಲೈ ಮೊಹಮ್ಮದ್ ಮಾಧ್ಯಮ ಸಂವಾದದಲ್ಲಿ ಬಹಿರಂಗಪಡಿಸಿದ್ದಾರೆ.

‘ಟ್ವಿಟರ್ ಮೊದಲು ನೈಜೀರಿಯಾದಲ್ಲಿ ಕಂಪನಿಯಾಗಿ ನೋಂದಾಯಿಸಿಕೊಳ್ಳಬೇಕು’ ಎಂದು ಸಚಿವರು ಸಂದರ್ಶನವೊಂದರಲ್ಲಿ ನಿಷೇಧವನ್ನು ತೆಗೆದುಹಾಕುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಆಗ ಅದು ಪ್ರಸಾರ ಆಯೋಗದಿಂದ ಪರವಾನಗಿ ಪಡೆಯುತ್ತದೆ ಮತ್ತು ನೈಜೀರಿಯಾದ ಸಾಂಸ್ಥಿಕ ಅಸ್ತಿತ್ವಕ್ಕೆ ವಿರುದ್ಧವಾದ ಚಟುವಟಿಕೆಗಳನ್ನು ಉತ್ತೇಜಿಸುವವರು ಅದರ ವೇದಿಕೆಯನ್ನು ಬಳಸಲು ಅನುಮತಿಸದಿರಲು ಒಪ್ಪಿಕೊಳ್ಳಬೇಕು’ ಎಂದು ನೈಜೀರಿಯಾದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಲೈ ಮೊಹಮ್ಮದ್ ಎಎಫ್‌ಪಿಗೆ ತಿಳಿಸಿದರು.

ಭಾರತದಲ್ಲಿಯೂ, ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸುವ ಕುರಿತಂತೆ ಟ್ವಿಟರ್ ಕೇಂದ್ರ ಸರ್ಕಾರದೊಂದಿಗೆ ತಿಕ್ಕಾಟದಲ್ಲಿ ತೊಡಗಿದೆ.

ದೇಶದಲ್ಲಿ ಕುಂದುಕೊರತೆ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಿಸುವಂತೆ ಸರ್ಕಾರ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಿತ್ತು.

ಟ್ವಿಟರ್ ಹೊರತುಪಡಿಸಿ, ಫೇಸ್‌ಬುಕ್, ವಾಟ್ಸ್‌ ಆ್ಯಪ್ ಮತ್ತು ಗೂಗಲ್ ಒಡೆತನದ ಎಲ್ಲ ಇತರ ಪ್ರಮುಖ ವೇದಿಕೆಗಳು 2021ರ ಹೊಸ ಐಟಿ ನಿಯಮಗಳನ್ನು ಪಾಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT