ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೊ ಮಾಡಿ ಯುಟ್ಯೂಬ್‌ಗೆ ಹಾಕಿದ ಇನ್‌ಸ್ಪೆಕ್ಟರ್: ಕ್ರಮ

ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಯ ಪ್ರಭಾರಿ ಠಾಣಾಧಿಕಾರಿ ಮೇಲೆ ಕ್ರಮ
Published 10 ನವೆಂಬರ್ 2023, 12:39 IST
Last Updated 10 ನವೆಂಬರ್ 2023, 12:39 IST
ಅಕ್ಷರ ಗಾತ್ರ

ನೋಯ್ಡಾ: ಪೊಲೀಸ್ ಸಮವಸ್ತ್ರದಲ್ಲಿ ಜಾತಿವಾದವನ್ನು ಬಿಂಬಿಸುವ ಹಾಡಿನ ವಿಡಿಯೊ ಮಾಡಿದ್ದ ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿಯ ಮೇಲೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ನಿಯಮ ಉಲ್ಲಂಘನೆ ಆರೋಪದ ಮೇಲೆ ಪ್ರಭಾರ ಠಾಣಾಧಿಕಾರಿ ಅಜಯ್ ಸಿಂಗ್ ಚಹಾರ್ ಎನ್ನುವರನ್ನು ಬೇರೆಡೆ ವರ್ಗಾವಣೆ ಮಾಡಿರುವ ನೋಯ್ಡಾ ಪೊಲೀಸ್ ಆಯುಕ್ತ ಆನಂದ ಕುಲಕರ್ಣಿ, ಇಲಾಖೆ ವಿಚಾರಣೆಗೆ ಆದೇಶಿಸಿದ್ದಾರೆ.

ಕಳೆದ ಐದು ದಿನಗಳ ಹಿಂದೆ ಜಾತಿವಾದವನ್ನು ಬಿಂಬಿಸುವ ಐದು ನಿಮಿಷದ ವಿಡಿಯೊವನ್ನು ಅಜಯ್ ಸಿಂಗ್ ಮಾಡಿದ್ದರು. ಪೊಲೀಸ್ ಸಮವಸ್ತ್ರದಲ್ಲಿ ಹೊರಗಿನ ನಾಲ್ವರು ಯುವಕರ ಜೊತೆ ‘ಬಿಲ್ಡ್‌ಅಪ್ ಸಾಂಗ್’ ಮಾಡಿದ್ದರು. ಅಲ್ಲದೇ ನಿರ್ಧಿಷ್ಟ ಜಾತಿ ಒಂದರ ಬಗ್ಗೆ ಕೀಳಾಗಿ ಹಾಡಲಾಗಿತ್ತು.

ಅಲ್ಲದೇ ವಿಡಿಯೊವನ್ನು ಯುಟ್ಯೂಬ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ವಿವಾದವಾದ ಮೇಲೆ ಆ ವಿಡಿಯೊವನ್ನು ಅಳಿಸಿ ಹಾಕಲಾಗಿದೆ.

ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿ ಯಾವುದೇ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂಬ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಜಾರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT