ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇಗೆ ರಾಹುಲ್ ಭೇಟಿ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಫೇಕ್ ಸುದ್ದಿಗಳಿವು!

Last Updated 14 ಜನವರಿ 2019, 6:32 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಯುಕ್ತ ಅರಬ್ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಭೇಟಿ ನೀಡಿದ್ದಾಗ ದುಬೈ ನಗರದಾದ್ಯಂತ ರಾಹುಲ್ ಪೋಸ್ಟರ್‌ಗಳು ರಾರಾಜಿಸುತ್ತಿರುವ ಫೋಟೊಗಳನ್ನು ಕಾಂಗ್ರೆಸ್ ಬೆಂಬಲಿಗರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.

ಆದರೆ ಈ ಚಿತ್ರಗಳುಫೇಕ್ ಎಂದು ಬೂಮ್‍ಲೈವ್ ಜಾಲತಾಣ ವರದಿ ಮಾಡಿದೆ.

ಇದೇ ರೀತಿಯ ಚಿತ್ರಗಳನ್ನು ಆಲ್ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್ ಅಧ್ಯಕ್ಷೆ ರುಕ್ಶ್ಮನಿ ಕುಮಾರಿ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‍ನಲ್ಲಿಯೂ ಶೇರ್ ಮಾಡಲಾಗಿತ್ತು.

Indian Overseas Congress UK ಟ್ವಿಟರ್ ಹ್ಯಾಂಡಲ್‍ನಲ್ಲಿಯೂ ಈ ಚಿತ್ರ ಶೇರ್ ಆಗಿತ್ತು.

ಟ್ವಿಟರ್ ಮಾತ್ರವಲ್ಲ ಫೇಸ್‍ಬುಕ್‍ನಲ್ಲಿಯೂ ಇಂಥದ್ದೇ ಚಿತ್ರ ಶೇರ್ ಆಗಿದೆ.

ನಿಜ ಸಂಗತಿಏನು?

ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್‌ಲೈವ್, ರಾಹುಲ್ ಗಾಂಧಿಯ ಚಿತ್ರಗಳನ್ನು ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ ಮಾಡಲಾಗಿದೆ ಎಂದು ವರದಿ ಮಾಡಿದೆ. Photofunia ಎಂಬ ಫೋಟೊ ಎಡಿಟಿಂಗ್ ವೆಬ್‍ಸೈಟ್‍/ ಆ್ಯಪ್ನಲ್ಲಿ ಹಲವಾರು ಟೆಂಪ್ಲೇಟ್ಸ್ ಲಭ್ಯವಾಗಿದ್ದು.ಇದರಲ್ಲಿ ಫೋಟೊಗಳನ್ನು ಎಡಿಟ್ ಮಾಡಬಹುದಾಗಿದೆ.ಜಾಹೀರಾತು ಫಲಕದಲ್ಲಿ ರಾಹುಲ್ ಗಾಂಧಿ ಚಿತ್ರ ಇದೇ ರೀತಿ ಎಡಿಟ್ ಮಾಡಿದ್ದಾಗಿದೆ.

Photofuniaಬಳಸಿ ಈ ರೀತಿ ಚಿತ್ರಗಳನ್ನು ಎಡಿಟ್ ಮಾಡಬಹುದು.

ಇದೆಲ್ಲದರ ಜತೆಗೆಬಸ್‍ನ ಹಿಂದೆ ರಾಹುಲ್ ಗಾಂಧಿಯ ಚಿತ್ರವಿರುವ ಪೋಸ್ಟ್ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು.

ಆದಾಗ್ಯೂ ಬೂಮ್ ಟೀಮ್ ಈ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಬಸ್‍ನಲ್ಲಿ ಇಂಥದ್ದೊಂದುಚಿತ್ರವಿಲ್ಲ ಎಂದು ಪತ್ತೆಯಾಗಿದೆ.

(ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸಿಕ್ಕಿದ ಫೋಟೊ)

ಎಲ್ಲವೂ ಫೇಕ್ ಅಲ್ಲ

ಎಸ್‍ಯುವಿ ಕಾರಿನಲ್ಲಿ ರಾಹುಲ್ ಗಾಂಧಿ ಪೋಸ್ಟರ್ ಇರುವ ಚಿತ್ರವೊಂದು ಟ್ವಿಟರ್ ಮತ್ತು ಫೇಸ್‍ಬುಕ್‍ನಲ್ಲಿ ಶೇರ್ ಆಗಿತ್ತು.

ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಸತ್ಯ ಎಂಬುದು ತಿಳಿದು ಬಂದಿದೆ. ಈ ವಿಡಿಯೊದಲ್ಲಿ ಎಸ್‍ಯುವಿ ಹಿಂದೆ ರಾಹುಲ್ ಗಾಂಧಿ ಚಿತ್ರವಿರುವುದನ್ನು ಕಾಣಬಹುದು.


ಬುರ್ಜ್ ಖಲೀಫಾದಲ್ಲಿ ರಾಹುಲ್ ಗಾಂಧಿ ಚಿತ್ರ? ಇದೂ ಫೇಕ್

ರಾಹುಲ್ ಗಾಂಧಿ ದುಬೈ‍ಗೆ ಭೇಟಿ ನೀಡುವ ಮುನ್ನ ಅವರಿಗೆಶುಭಕೋರಿ ಇಲ್ಲಿನ ಬುರ್ಜ್ ಖಲೀಫಾದಲ್ಲಿ ರಾಹುಲ್ ಗಾಂಧಿ ಚಿತ್ರ ಡಿಸ್‍ಪ್ಲೇ ಮಾಡಲಾಗಿದೆ ಎಂಬ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಜನವರಿ 11, 2019ರಂದು ರಾಹುಲ್ ದುಬೈಗೆ ಭೇಟಿ ನೀಡಿದ್ದರು.

ಬುರ್ಜ್ ಖಲೀಫಾದಲ್ಲಿ ರಾಹುಲ್ ಗಾಂಧಿ ಚಿತ್ರ ಎಂಬ ಶೀರ್ಷಿಕೆಯೊಂದಿಗೆ ಹಲವಾರು ಮಂದಿ ಟ್ವಿಟರ್, ಫೇಸ್‍ಬುಕ್‍ನಲ್ಲಿ ವಿಡಿಯೊ ಶೇರ್ ಮಾಡಿದ್ದರು.ಆದರೆ ಇದು ಫೇಕ್ !

ಸತ್ಯ ಸಂಗತಿ ಏನು?
ಈ ಬಗ್ಗೆ ಬೂಮ್ ಟೀಮ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಯಾವುದೇ ಫಲಿತಾಂಶ ಸಿಗಲಿಲ್ಲ.ಬುರ್ಜ್ ಖಲೀಫಾದಲ್ಲಿ ರಾಹುಲ್ ಚಿತ್ರ ಡಿಸ್‍ಪ್ಲೇ ಮಾಡಿರುವ ಬಗ್ಗೆ ದುಬೈ ಅಥವಾಭಾರತದಯಾವುದೇ ಪತ್ರಿಕೆಗಳು ವರದಿ ಮಾಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿರುವ ಈ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ Biugo ಎಂಬ ವಾಟರ್ ಮಾರ್ಕ್ ಕಾಣಬಹುದು.

Biugo ಎಂಬುದು ಫೋಟೊ ಮತ್ತು ವಿಡಿಯೊ ಎಡಿಟಿಂಗ್ ಆ್ಯಪ್ ಆಗಿದೆ.

ಈ ಆ್ಯಪ್‍ನಲ್ಲಿ ಹಲವಾರು ಟೆಂಪ್ಲೆಟ್‍ಗಳು ಇದ್ದು, ಬುರ್ಜ್ ಖಲೀಫಾ ಟೆಂಪ್ಲೆಟ್‍ ನಲ್ಲಿ ನಮಗಿಷ್ಟವಿರುವ ಚಿತ್ರವನ್ನು ಅಪ್‍ಲೋಡ್ ಮಾಡಿ. ವಿಡಿಯೊ ಎಡಿಟ್ ಮಾಡಬಹುದು.

ರಾಹುಲ್ ಗಾಂಧಿಯ ಬೇರೊಂದು ಚಿತ್ರಬುರ್ಜ್ ಖಲೀಫಾ ಟೆಂಪ್ಲೇಟ್ ಬಳಸಿ ಎಡಿಟ್ ಮಾಡಿದಾಗ
ರಾಹುಲ್ ಗಾಂಧಿಯ ಬೇರೊಂದು ಚಿತ್ರಬುರ್ಜ್ ಖಲೀಫಾ ಟೆಂಪ್ಲೇಟ್ ಬಳಸಿ ಎಡಿಟ್ ಮಾಡಿದಾಗ

ದುಬೈನಲ್ಲಿ ರಾಹುಲ್ ದುಬಾರಿ ಬ್ರೇಕ್‌ಫಾಸ್ಟ್?

ದುಬೈನ ಹಿಲ್ಟನ್ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಹುಲ್ ಗಾಂಧಿ 1500 ಪೌಂಡ್ (₹1,40 ಲಕ್ಷ) ಬೆಲೆಯಬ್ರೇಕ್‌ಫಾಸ್ಟ್ (ಉಪಹಾರ) ಸೇವಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.ಸ್ಯಾಮ್ ಪಿತ್ರೊಡಾ ಜತೆ ಡೈನಿಂಗ್ ಟೇಬಲ್ ಮುಂದೆ ರಾಹುಲ್ ಕುಳಿತಿರುವ ಚಿತ್ರದಲ್ಲಿ ಟೇಬಲ್ ಮೇಲೆ ವಿವಿಧ ಭಕ್ಷ್ಯಗಳನ್ನಿರಿಸಲಾಗಿದೆ. ಕೆಲವೊಂದು ಪೋಸ್ಟ್‌ಗಳಲ್ಲಿ ರಾಹುಲ್ ಭೋಜನದಲ್ಲಿ ಬೀಫ್ ಕೂಡಾ ಇದೆ ಎಂದು ವಾದಿಸಲಾಗಿದೆ.

ರಿಶಿ ಬಾಗ್ರಿ ಎಂಬವರು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿಯ ಭೋಜನದ ಫೋಟೊ ಶೇರ್ ಮಾಡಿದ್ದು,ರಾಹುಲ್ ಗಾಂಧಿಯವರು ಸ್ಯಾಮ್ ಪಿತ್ರೊಡಾ ನೇತೃತ್ವದ ಪ್ರತಿನಿಧಿಗಳನ್ನು ಭೇಟಿ ಮಾಡಿ ಹಿಲ್ಟನ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ 1500 ಪೌಂಡ್ ಬೆಲೆಯ ಬ್ರೇಕ್‌ಫಾಸ್ಟ್ ಸೇವಿಸುತ್ತಾ ಬಡತನದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ 2645 ಬಾರಿ ರೀಟ್ವೀಟ್ ಆಗಿದ್ದು 4, 167 ಮಂದಿ ಲೈಕ್ ಮಾಡಿದ್ದಾರೆ.

ಫೇಸ್‍ಬುಕ್‍ನಲ್ಲಿಯೂ ಇದೇ ರೀತಿಯ ಪೋಸ್ಟ್ ಶೇರ್ ಆಗಿದೆ.

ನಿಜ ಸಂಗತಿ ಏನು?

ರಾಹುಲ್ ಗಾಂಧಿ ದುಬೈಗೆ ಭೇಟಿ ನೀಡಿದ ಸುದ್ದಿಗಳನ್ನು ಚೆಕ್ ಮಾಡಿದಾಗ ರಾಹುಲ್ ಗಾಂಧಿಯ ಬ್ರೇಕ್‌ಫಾಸ್ಟ್ ಫೋಟೊ ಲಭಿಸಿದೆ ಎಂದು ಬೂಮ್ ಲೈವ್ ವರದಿ ಮಾಡಿದೆ. ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಟೀಮ್, ರಾಹುಲ್ ಗಾಂಧಿಯವರು ಬ್ರೇಕ್ ಫಾಸ್ಟ್ ಸೇವಿಸಿದ್ದು ಹಿಲ್ಟನ್ ಹೋಟೆಲ್‍ನಲ್ಲಿ ಅಲ್ಲ ಎಂದು ಹೇಳಿದೆ.ದುಬೈನ ಉದ್ಯಮಿ, GEMS ಎಡ್ಯುಕೇಶನ್ ಮತ್ತು ವರ್ಕಿ ಫೌಂಡೇಷನ್‍ನ ಸಂಸ್ಥಾಪಕ ಸನ್ನಿ ವರ್ಕಿ ಅವರ ಮನೆಯಲ್ಲಿ ರಾಹುಲ್‍ಗೆ ಆತಿಥ್ಯ ನೀಡಲಾಗಿದೆ.

ದುಬೈನ ಉದ್ಯಮಿ ಲುಲು ಗ್ರೂಪ್‍ನ ಯೂಸಫ್ ಅಲಿ ಎಂಎ, ಕಾಂಗ್ರೆಸ್ ನೇತಾರರಾದ ಸ್ಯಾಮ್ ಪಿತ್ರೊಡಾ ಮತ್ತು ಮಿಲಿಂದ್ ದಿಯೊರಾ ಕೂಡಾ ರಾಹುಲ್ ಜತೆ ವರ್ಕಿ ಅವರ ನಿವಾಸದಲ್ಲಿ ಬ್ರೇಕ್‍ ಫಾಸ್ಟ್ ಗೆ ಜತೆಯಾಗಿದ್ದಾರೆ.

ಈ ಬಗ್ಗೆ ಯೂಸಫ್ ಅಲಿ ಅವರ ಕಚೇರಿಯನ್ನು ಬೂಮ್ ಟೀಂ ಸಂಪರ್ಕಿಸಿದಾಗ ವರ್ಕಿ ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿತ್ತು ಎಂಬ ವಿಷಯ ನಿಜ ಎಂದು ತಿಳಿದು ಬಂದಿದೆ, ಯಾವುದೇ ಹೋಟೆಲ್‍ನಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿಲ್ಲ, ಅದು ನಡೆದಿದ್ದು ವರ್ಕಿ ಅವರ ಮನೆಯಲ್ಲಿ. ಎಂದು ಅಲಿಯವರ ಆಪ್ತರೊಬ್ಬರು ಹೇಳಿದ್ದಾರೆ, ಇದೇ ವಿಷಯವನ್ನು ಲುಲು ಗ್ರೂಪ್‍ನ ಸಂವಹನ ವ್ಯವಸ್ಥಾಪಕ ವಿ. ನಂದಕುಮಾರ್ ದೃಢೀಕರಿಸಿದ್ದಾರೆ.

ವರ್ಕಿ ಅವರ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದಿತ್ತು ಎಂದು ಕಾಂಗ್ರೆಸ್‍ನ ವಕ್ತಾರ ಹೇಳಿದ್ದು, ಕಾಂಗ್ರೆಸ್‍ನ ಅಧಿಕೃತ ಟ್ವಿಟರ್ ಹ್ಯಾಂಡಲ್‍ನಲ್ಲಿ ಫೋಟೊ ಟ್ವೀಟ್ ಮಾಡಲಾಗಿದೆ.

ಕಾಂಗ್ರೆಸ್‍ನ ಕೆಲವು ಕಾರ್ಯಕರ್ತರು ಕೂಡಾ ಇದೇ ಫೋಟೊವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.

ಭೋಜನದಲ್ಲಿ ಬೀಫ್?
ರಾಹುಲ್ ಗಾಂಧಿ ದುಬೈನಲ್ಲಿ ಬೀಫ್ (ದನದ ಮಾಂಸ)ಸೇವಿಸಿದ್ದಾರೆ ಎಂಬ ಪೋಸ್ಟ್ ಕೂಡಾ ಸಾಮಾಜಿಕ ತಾಣದಲ್ಲಿ ಹರಿದಾಡಿದೆ. ರಾಹುಲ್ ಗಾಂಧಿಯ ಮುಂದೆ ಇರುವ ಪಾತ್ರೆಯಲ್ಲಿ ಬೀಫ್ ಇರಿಸಲಾಗಿದೆ ಎಂದು ಕೆಲವರು ವಾದಿಸಿದ್ದು, ಇನ್ನು ಕೆಲವರು ರಾಹುಲ್ ತಟ್ಟೆಯಲ್ಲಿರುವುದು ಕೂಡಾ ಬೀಫ್ ಎಂದಿದ್ದಾರೆ.

ಶಾಶ್ ಎಂಬ ಟ್ವೀಟಿಗ ರಾಹುಲ್ ಗಾಂಧಿ ಫೋಟೊ ಶೇರ್ ಮಾಡಿ ಜನಿವಾರ ಧರಿಸಿದ ಬ್ರಾಹ್ಮಣ ಹಂದಿ ಮಾಂಸ ಸೇವಿಸುತ್ತಿದ್ದಾರೆಯೇ? ಯುಎಇ ಇಸ್ಲಾಮಿಕ್ ದೇಶ ಆಗಿರುವ ಕಾರಣ ಅದು ಹಂದಿ ಮಾಂಸ ಆಗಿರಲ್ಲ, ಅದು ಬೀಫ್ ಎಂದು ಟ್ವೀಟಿಸಿದ್ದರು.

ದತ್ತಾತ್ರೇಯ ಕೌಲ್ ಬ್ರಾಹ್ಮಣ ರಾಹುಲ್ ಗಾಂಧಿ ದುಬೈನಲ್ಲಿ ಬೀಫ್ ಸೇವಿಸುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೇ ಇದೇ ಚಿತ್ರ ಫೇಸ್‍ಬುಕ್ ಮತ್ತು ವಾಟ್ಸ್ಆ್ಯಪ್ ನಲ್ಲಿ ವೈರಲ್ ಆಗಿತ್ತು.


ಆ ಸುದ್ದಿ ಬಗ್ಗೆ ಬೂಮ್ ತಂಡ ಕಾಂಗ್ರೆಸ್ ವಕ್ತಾರರನ್ನು ಸಮೀಪಿಸಿದಾಗ, ಅವರು ಈ ಸುದ್ದಿ ಸತ್ಯಕ್ಕೆ ದೂರವಾದುದು.ಬ್ರೇಕ್‍ಫಾಸ್ಟ್ ನಲ್ಲಿ ಬೀಫ್ ನೀಡಲಾಗಿಲ್ಲ. ಚಿತ್ರದಲ್ಲಿರುವುದು ಬೀಫ್ ಅಲ್ಲ ಟರ್ಕಿ, ಬ್ರೇಕ್‌ಫಾಸ್ಟ್ ವೇಳೆ ರಾಹುಲ್ ಗಾಂಧಿ ಆರೆಂಜ್ ಜ್ಯೂಸ್ ಮತ್ತು ಮೊಟ್ಟೆ ಮಾತ್ರ ಸೇವಿಸಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT