ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ಮೇಲೆ ಎತ್ತಿನ ಸವಾರಿ: ವಿಡಿಯೊ ನೋಡಿ ಬೆರಗಾದ ನೆಟ್ಟಿಗರು..! 

Last Updated 14 ಸೆಪ್ಟೆಂಬರ್ 2022, 11:50 IST
ಅಕ್ಷರ ಗಾತ್ರ

ಜಾಗತಿಕವಾಗಿಇಂಟರ್ನೆಟ್ ಮಾಹಿತಿ ಹಾಗೂ ಮನರಂಜನೆ ನೀಡುವ ಉತ್ತಮ ವೇದಿಕೆಯಾಗಿದೆ. ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಇಂಟರ್‌ನೆಟ್‌ನಲ್ಲಿ ವೈರಲ್‌ ವಿಡಿಯೊಗಳು ಸಾಕಷ್ಟು ಸಿಗುತ್ತವೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಎತ್ತನ್ನು ತಮ್ಮ ಬೈಕಿನ ಹಿಂದಿನ ಸೀಟಿನಲ್ಲಿ ಕೂರಿಸಿ ಅದನ್ನು ಹಗ್ಗದಿಂದ ಕಟ್ಟಿದ್ದಾರೆ. ಎತ್ತಿನ ಜೊತೆಗೆ ವೇಗವಾಗಿ ಬೈಕ್‌ ಸವಾರಿ ಮಾಡಿದ್ದಾರೆ. ಈ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ವಿಡಿಯೊ ವೀಕ್ಷಣೆ ಮಾಡಿರುವ ನೆಟ್ಟಿಗರು ಬೆರಗಾಗಿದ್ದಾರೆ. ಸವಾರ ಬೈಕ್‌ ಬ್ಯಾಲೆನ್ಸ್‌ ಮಾಡಿದ ರೀತಿಗೆ ತಲೆದೂಗಿದ್ದಾರೆ.

ಅನಿಮಲ್ಸ್‌ಥೆನೇಚರ್‌ಟುಡೇ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈವಿಡಿಯೊ ಅಪ್‌ಲೋಡ್ ಆಗಿದೆ. ಇದಕ್ಕೆ ಲಕ್ಷಾಂತರ ಕಮೆಂಟ್‌ಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT