ಶುಕ್ರವಾರ, ಜೂನ್ 5, 2020
27 °C

ಮಕ್ಕಳ ಮೇಲೆ ಟಿಕ್‌ಟಾಕ್‌ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಕುಟುಂಬ ದಿನದ ಅಂಗವಾಗಿ ಕುಟುಂಬದೊಟ್ಟಿಗೆ ಮಕ್ಕಳು ಬೆರೆಯುವ ಮಹತ್ವ ಕುರಿತು ಟಾಪ್ ಪೇರೆಂಟ್  ಆ್ಯಪ್ ಮತ್ತು ಟಿಕ್‌ಟಾಕ್‌ನಿಂದ ಇತ್ತೀಚೆಗೆ ಜಂಟಿಯಾಗಿ ಆನ್‌ಲೈನ್‌ ವೆಬಿನಾರ್‌ ಆಯೋಜಿಸಲಾಗಿತ್ತು. 

ಮಕ್ಕಳ ರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಕುಟುಂಬದ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡೇ ಟಾಪ್‌ ಪೇರೆಂಟ್ ಆ್ಯಪ್ ಅಭಿವೃದ್ಧಿಯಾಗಿದೆ. ಈ ಆ್ಯಪ್‌ ಮಕ್ಕಳು ಶಾಲೆಗೆ ಹೋಗಲು ಬೇಕಾದ ಅಗತ್ಯ ಸಿದ್ಧತೆ ಸೇರಿದಂತೆ ಉತ್ತಮ ಗುಣಮಟ್ಟದ ಎಡ್ ಟೆಕ್ ಸಂಪನ್ಮೂಲವನ್ನು ಒದಗಿಸಲಿದೆ. 

ಯಾವುದೇ ಅಗತ್ಯ ಸಿದ್ಧತೆ ಇಲ್ಲದೇ ಲಕ್ಷಾಂತರ ಮಕ್ಕಳು ಶಾಲೆಗೆ ಸೇರಿಕೊಳ್ಳುತ್ತಾರೆ. ಕೆಲವು ಮಕ್ಕಳಿಗೆ ಮನೆಯಲ್ಲಿ ಸಮರ್ಪಕವಾದ ಬೆಂಬಲ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇರುವವರಿಗೆ ಈ ಆ್ಯಪ್ ನೆರವಾಗಲಿದೆ. ತಾಂತ್ರಿಕವಾಗಿ ಹಿಂದುಳಿದ ಮಕ್ಕಳು ಮತ್ತು ಪೋಷಕರನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 

ಇದೇ ಸಂದರ್ಭದಲ್ಲಿ ಟಿಕ್‌ಟಾಕ್‌ ಸೇಫ್ಟಿ ಸೆಂಟರ್‌ ಆಯ್ಕೆಯನ್ನೂ ಪರಿಚಯಿಸಲಾಗಿದೆ. ಇದು ಮಕ್ಕಳು ಬಳಸುವ ಟಿಕ್‌ಟಾಕ್‌ ಖಾತೆಯ ಮೇಲೆ ನಿಗಾ ಇಡಲಿದ್ದು ಅವರು, ಯಾವ ವಿಡಿಯೊಗಳನ್ನು ನೋಡುತ್ತಿದ್ದಾರೆ ಎಂಬ ಮಾಹಿತಿಯನ್ನು ಪೋಷಕರಿಗೆ ನೀಡುತ್ತದೆ. ಜೊತೆಗೆ, ಮಕ್ಕಳ ಖಾತೆಯನ್ನು ಪೋಷಕರ ಖಾತೆಯೊಂದಿಗೆ ಪೇರ್‌ ಮಾಡಿಕೊಳ್ಳುವ ಅವಕಾಶವೂ ಇದೆ. ಇದರಿಂದ ಪೋಷಕರ ಅನುಮತಿಯಿಲ್ಲದೆ ಮಕ್ಕಳು ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಿಲ್ಲ. ಮಕ್ಕಳ ಸುರಕ್ಷತೆಯ ಬಳಕೆಯ ದೃಷ್ಟಿಯಿಂದ ಈ ಆಯ್ಕೆಯನ್ನು ಟಿಕ್‌ಟಾಕ್‌ ಅಭಿವೃದ್ಧಿಪಡಿಸಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು