ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹೆಸರಿನಲ್ಲಿ ಮತ್ತೆ ಬರುತ್ತಿದೆ ಟಿಕ್ ಟಾಕ್?: ಇಲ್ಲಿದೆ ಮಾಹಿತಿ

ಅಕ್ಷರ ಗಾತ್ರ

ನವದೆಹಲಿ: ಕಿರು ವಿಡಿಯೊಗಳ ಮೂಲಕ ದೇಶದಲ್ಲಿ ಹೆಸರುವಾಸಿಯಾಗಿದ್ದ ಟಿಕ್‌ ಟಾಕ್ ಅಪ್ಲಿಕೇಶನ್ ಹೊಸ ಹೆಸರಿನೊಂದಿಗೆ ಭಾರತಕ್ಕೆ ಮರಳುತ್ತಿದೆಯೇ? ಹೌದು, ಇದಕ್ಕಾಗಿ ಬೈಟ್‌ ಡ್ಯಾನ್ಸ್ ಸಿದ್ಧವಾಗಿದೆ ಎನ್ನುತ್ತಿವೆ ಇತ್ತೀಚಿನ ವರದಿಗಳು.

2020 ರ ಮಧ್ಯಭಾಗದಲ್ಲಿ, ಬಳಕೆದಾರರ ಖಾಸಗಿತನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರವು ಟಿಕ್ ಟಾಕ್ ಸೇರಿ ಚೀನಾದ 58 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿತ್ತು.

ಈ ವರ್ಷದ ಜನವರಿಯಲ್ಲಿ, ಟಿಕ್‌ಟಾಕ್ ಮಾತೃ ಸಂಸ್ಥೆ ಬೈಟ್‌ಡ್ಯಾನ್ಸ್ ಭಾರತದಲ್ಲಿನ ಕಚೇರಿಯನ್ನು ಮುಚ್ಚಿತ್ತು. ಆದರೆ, ಆ್ಯಪ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಮುಂದುವರಿಸಿತ್ತು.

ಇದೀಗ, ಟ್ವಿಟರ್‌ನ ಟಿಪ್ ಸ್ಟಾರ್ ಮುಕುಲ್ ಶರ್ಮಾ ಅವರು ಚೀನಾದ ಕಂಪನಿಯು ಟಿಕ್ ಟಾಕ್ (TickTock)ಎಂಬ ಹೊಸ ಹೆಸರನ್ನು ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್‌ನಲ್ಲಿ ಹೊಸ ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್‌ನೊಂದಿಗೆ ನೋಂದಾಯಿಸಿದೆ ಎಂದು ಬಹಿರಂಗಪಡಿಸಿದ್ದಾರೆ.

ಈ ಹಿಂದೆ TikTok ಎಂದಿದ್ದ ಹೆಸರನ್ನು TickTock ಎಂದು ಬದಲಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ

ಶರ್ಮಾ ಅವರು ಅಪ್ಲಿಕೇಶನ್‌ (ಎಸ್‌ಎಲ್ ಸಂಖ್ಯೆ: 5033102)ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಜುಲೈ 6 ರಂದು ಟ್ರೇಡ್ ಮಾರ್ಕ್ ರೂಲ್ಸ್, 2002ರ ನಾಲ್ಕನೇ ಶೆಡ್ಯೂಲ್‌ನ 42 ನೇ ವಿಧಿ ಅಡಿಯಲ್ಲಿ ಇದನ್ನು ಸಲ್ಲಿಸಲಾಗಿದೆ. ಕಂಪನಿಯು ಹೊಸ ಸಾಫ್ಟ್‌ವೇರ್ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ವೆಬ್‌ಸೈಟ್ ಮೂಲಕ ಪ್ರಾರಂಭಿಸಲು ಉದ್ದೇಶಿಸಿದೆ. ಇದರಲ್ಲಿ ಮಲ್ಟಿಮೀಡಿಯಾ ಮನರಂಜನಾ ಕಂಟೆಂಟ್, ಚಿತ್ರಗಳು ಮತ್ತು ವಿಡಿಯೊಗಳನ್ನು ಸೇರಿಸುವ ಆಯ್ಕೆ ಇರಲಿದೆ ಎಂದು ತಿಳಿದು ಬಂದಿದೆ.

ಹೊಸದಾಗಿ ಜಾರಿಯಾಗಿರುವ ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು 2021 ರ ಕಾಯ್ದೆ ಅನ್ವಯ ಮತ್ತೆ ಕಾಲಿಡಲು ಬೈಟ್ ಡ್ಯಾನ್ಸ್ ಸಿದ್ಧವಾಗಿದೆ ಎಂದು ವ್ಯಾಪಕವಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT