ಭಾನುವಾರ, ಆಗಸ್ಟ್ 14, 2022
28 °C

ಐಟಿ ನಿಯಮಗಳನ್ನು ಅನುಸರಿಸುವಲ್ಲಿ ಟ್ವಿಟರ್ ವಿಫಲ: ರವಿಶಂಕರ್ ಪ್ರಸಾದ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೊಸ ಮಾಹಿತಿ ತಂತ್ರಜ್ಞಾನ ನಿಯಮ ಅನುಸರಿಸುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಕೇಂದ್ರ ಸಂವಹನ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದ್ದು, ಅನೇಕ ಅವಕಾಶಗಳನ್ನು ನೀಡಿದರೂ ಉದ್ದೇಶಪೂರ್ವಕವಾಗಿ ಪಾಲಿಸದಿರುವ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋಮು ಸಂಘರ್ಷ ಸುದ್ದಿ ಬಿತ್ತರ ಆರೋಪ: ಟ್ವಿಟರ್‌, ಪತ್ರಕರ್ತರ ವಿರುದ್ಧ ಎಫ್‌ಐಆರ್‌

ಹೊಸ ಐಟಿ ನಿಯಮವನ್ನು ಟ್ವಿಟರ್ ಅನುಸರಿಸದ ವಿರುದ್ಧ ವಾಗ್ದಾಳಿ ನಡೆಸಿರುವ ರವಿಶಂಕರ್ ಪ್ರಸಾದ್, 'ವಾಕ್ ಸ್ವಾತಂತ್ರ್ಯದ ಧ್ವಜಧಾರಕ ಎಂದು ಬಿಂಬಿಸಿಕೊಳ್ಳುವ ಟ್ವಿಟರ್, ಮಧ್ಯವರ್ತಿ ಮಾಧ್ಯಮ ಮಾರ್ಗಸೂಚಿಗಳ ವಿಷಯಕ್ಕೆ ಬಂದಾಗ ಉದ್ದೇಶಪೂರ್ವಕವಾಗಿ ಧಿಕ್ಕರಿಸುವ ಮಾರ್ಗವನ್ನು ಆರಿಸಿರುವುದು ಆಶ್ಚರ್ಯಕರವೆನಿಸಿದೆ' ಎಂದು ಹೇಳಿದ್ದಾರೆ.

 

 

 

'ಸುರಕ್ಷಿತ ನಿಮಯಗಳಿಗೆ ಟ್ವಿಟರ್ ಅರ್ಹತೆ ಹೊಂದಿದೆಯೇ ಎಂಬುದರ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ವಿಷಯವಾಗಿ ಹೇಳಬೇಕೆಂದರೆ ಮೇ 26ರಿಂದ ಜಾರಿಗೆ ಬಂದ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ಟ್ವಿಟರ್ ವಿಫಲವಾಗಿದೆ' ಎಂದು ರವಿಶಂಕರ್ ತಿಳಿಸಿದ್ದಾರೆ.

 

ಟ್ವಿಟರ್‌ಗೆ ಹಲವಾರು ಅವಕಾಶಗಳನ್ನು ನೀಡಲಾಗಿತ್ತು. ಆದರೆ ಅವುಗಳನ್ನೆಲ್ಲ ಉದ್ದೇಶಪೂರ್ವಕವಾಗಿ ಧಿಕ್ಕರಿಸಿದೆ ಎಂದು ರವಿಶಂಕರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ನಿಯಮ ಪಾಲಿಸಲು ವಿಳಂಬ: ಕಾನೂನು ರಕ್ಷಣೆ ಕಳೆದುಕೊಳ್ಳಲಿದೆ ಟ್ವಿಟರ್ 

ಇಲ್ಲಿ ಗಮನಾರ್ಹ ಸಂಗತಿಯೆಂದರೆ ದೇಶದ ಕಾನೂನು ನಿರಾಕರಿಸುವ ಮೂಲಕ ಬಳಕೆದಾರರ ಕುಂದು ಕೊರತೆಗಳನ್ನು ಪರಿಹರಿಸಲು ಟ್ವಿಟರ್ ವಿಫಲವಾಗಿದೆ. ಅಲ್ಲದೆ ಮಾಧ್ಯಮವನ್ನು ದುರುಪಯೋಗಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು