ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Twitter Update | ಆಪ್ತ ಗೆಳೆಯರಿಗಾಗಿ ಸರ್ಕಲ್ ಪರಿಚಯಿಸಿದ ಟ್ವಿಟರ್

ಟ್ವಿಟರ್ ನೂತನ ಅಪ್‌ಡೇಟ್ ಬಳಕೆದಾರರಿಗೆ ಬಿಡುಗಡೆ ಮಾಡಿದೆ.
Last Updated 1 ಸೆಪ್ಟೆಂಬರ್ 2022, 9:42 IST
ಅಕ್ಷರ ಗಾತ್ರ

ಬೆಂಗಳೂರು: ಆಪ್ತ ಗೆಳೆಯರಿಗಾಗಿ ಮತ್ತು ಸಮಾನ ಮನಸ್ಕರ ವೇದಿಕೆ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ಟ್ವಿಟರ್, ಫ್ರೆಂಡ್ಸ್ ಸರ್ಕಲ್ ಆಪ್‌ಡೇಟ್ ಪರಿಚಯಿಸಿದೆ.

ಇದರ ಮೂಲಕ, ಬಳಕೆದಾರರು ತಮ್ಮ ಆಪ್ತ ವಲಯದ 150 ಮಂದಿಯನ್ನು ಟ್ವಿಟರ್‌ ಸರ್ಕಲ್‌ನಲ್ಲಿ ಸೇರಿಸಿಕೊಳ್ಳಬಹುದಾಗಿದೆ.

ಟ್ವಿಟರ್ ವೆಬ್, ಐಓಎಸ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೂತನ ಫ್ರೆಂಡ್ಸ್ ಸರ್ಕಲ್ ಅಪ್‌ಡೇಟ್ ದೊರೆಯಲಿದೆ.

ಫ್ರೆಂಡ್ಸ್ ಸರ್ಕಲ್ ಅಪ್‌ಡೇಟ್ ಒದಗಿಸುವಂತೆ ಬಳಕೆದಾರರು ಕಂಪನಿಯನ್ನು ಕೇಳಿಕೊಂಡಿದ್ದರು. ಅದರಂತೆ, ನೂತನ ಅಪ್‌ಡೇಟ್ ಬಳಕೆದಾರರಿಗೆ ಲಭ್ಯವಾಗಿದೆ.

ಟ್ವಿಟರ್‌ನಲ್ಲಿ ಹೊಸ ಪೋಸ್ಟ್ ಮಾಡುವ ಸಂದರ್ಭದಲ್ಲಿ ಮುಂದೆ ಎರಡು ಆಯ್ಕೆಗಳು ಇರಲಿದ್ದು, ಜನರಲ್ ಮತ್ತು ಕ್ಲೋಸ್ ಫ್ರೆಂಡ್ಸ್ ಎನ್ನುವಲ್ಲಿ, ನಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಂಡು ಟ್ವೀಟ್ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT