ಟ್ವಿಟರ್‌ನ ಎಕ್ಸ್‌ಪ್ಲೋರ್ ಪುಟದಲ್ಲಿ ‘ಕ್ರಿಕೆಟ್’ ಎಂಬ ಹೊಸ ಟ್ಯಾಬ್ ನೋಡಿದ್ರಾ?

ಬೆಂಗಳೂರು: ದಿನನಿತ್ಯ ಐಪಿಎಲ್ ಟೂರ್ನಿ (ಕ್ರಿಕೆಟ್) ಕ್ಷಣ ಕ್ಷಣದ ಅಪ್‌ಡೇಟ್ಸ್ ಕುರಿತು ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ವಿಟರ್ ತನ್ನ ಎಕ್ಸ್‌ಪ್ಲೋರ್ ಪುಟದಲ್ಲಿ ‘ಕ್ರಿಕೆಟ್’ ಎಂಬ ಹೊಸ ಟ್ಯಾಬ್ ಅನ್ನು ಪರಿಚಯಿಸಿದೆ.
ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಟ್ವಿಟರ್ ಬಳಸುವ ಕೆಲವರಿಗೆ ಈ ಸೇವೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.
‘ಕ್ರಿಕೆಟ್’ ಟ್ಯಾಬ್‌ನಲ್ಲಿ #CricketTwitter ಕ್ರಿಕೆಟ್‌ಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು, ಸುದ್ದಿಗಳು, ಲೈವ್ ಸ್ಕೋರ್‌ಕಾರ್ಡ್, ಚರ್ಚೆಗಳು ಇತರೆ ಮಾಹಿತಿ ಲಭ್ಯವಾಗಲಿದೆ.
ಸ್ಟಾರ್ ಸ್ಪೋರ್ಟ್ಸ್, ಕ್ರಿಕ್‌ಬಝ್, ಬೊರಿಯಾ ಮಜುಂದಾರ್ ಸಹಯೋಗದೊಂದಿಗೆ ಕ್ರಿಕೆಟ್‌ಗೆ ಸಂಬಂಧಿಸಿದ ಹೊಸ ವಿಷಯಗಳನ್ನು ಒಂದೇ ಟ್ಯಾಬ್‌ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ವಿವರಿಸಿದೆ.
ಕ್ರಿಕೆಟ್ ಅಭಿಮಾನಿಗಳು ಇಂಗ್ಲಿಷ್, ತಮಿಳು, ಕನ್ನಡ, ತೆಲುಗು ಸೇರಿದಂತೆ ಆಯಾ ಸ್ಥಳೀಯ ಭಾಷೆಗಳಲ್ಲಿ ತಮ್ಮ ನೆಚ್ಚಿನ ತಂಡದ ಪರ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಬಹುದಾಗಿದೆ.
2021ರ ಜನವರಿಯಿಂದ 2022ರ ಜನವರಿವರೆಗೆ ಟ್ವಿಟರ್‌ನಲ್ಲಿ 4.4 ಮಿಲಿಯನ್ (44 ಲಕ್ಷ) ಭಾರತೀಯರು ಕ್ರಿಕೆಟ್‌ಗೆ ಸಂಬಂಧಿಸಿದಂತೆ 96.2 ಮಿಲಿಯನ್ (9.62 ಕೋಟಿ) ಟ್ವೀಟ್‍ಗಳನ್ನು ಹಂಚಿಕೊಂಡಿದ್ದಾರೆ.
ಇವನ್ನೂ ಓದಿ...
IPL 2022: ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ
IPL 2022 | RCB ಟ್ರೋಫಿ ಗೆದ್ದರೆ ಮೊದಲು ಮನಸ್ಸಿನಲ್ಲಿ ಮೂಡುವುದು ಎಬಿಡಿ: ಕೊಹ್ಲಿ
IPL 2022: ತಂಡದಲ್ಲಿ ಉಳಿಸಿಕೊಳ್ಳದ ‘ಆರ್ಸಿಬಿ’ ಬಗ್ಗೆ ಚಾಹಲ್ ಹೇಳಿದ್ದೇನು?
IPL: ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದೇನು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.