ಟ್ವಿಟರ್‌ನಲ್ಲಿ #Loksabhaelections2019 ಬಳಸಿ 396 ದಶಲಕ್ಷ ಟ್ವೀಟ್!

ಗುರುವಾರ , ಜೂನ್ 27, 2019
29 °C

ಟ್ವಿಟರ್‌ನಲ್ಲಿ #Loksabhaelections2019 ಬಳಸಿ 396 ದಶಲಕ್ಷ ಟ್ವೀಟ್!

Published:
Updated:

ನವದೆಹಲಿ: 2019 ಜನವರಿ 1ರಿಂದ ಮೇ 23ರವರೆಗೆ ಟ್ವಿಟರ್‌ನಲ್ಲಿ  ಲೋಕಸಭಾ ಚುನಾವಣೆಗೆ ಸಂಬಂಧಿಸಿ 396 ದಶಲಕ್ಷ ಟ್ವೀಟ್‌ಗಳಾಗಿವೆ.ಅಂದರೆ #Loksabhaelections2019 ಹ್ಯಾಶ್‌ಟ್ಯಾಗ್ ಬಳಸಿದ ಟ್ವೀಟ್‌ಗಳು ಇವು. 2014ರ ಚುನಾವಣೆಗೆ ಹೋಲಿಸಿದರೆ ಈ ರೀತಿಯ ಸಂವಾದಗಳ ಸಂಖ್ಯೆ ಶೇ.600ರಷ್ಟು ಜಾಸ್ತಿಯಾಗಿದೆ.

ಚುನಾವಣೆಯ ಸಮಯದಲ್ಲಿ ಅತೀ ಹೆಚ್ಚು ಬಾರಿ ಟ್ವಿಟರ್‌ನಲ್ಲಿ ಮೆನ್ಶನ್ ಆದ ಹೆಸರು ನರೇಂದ್ರ ಮೋದಿ (@Narendra Modi) ಯವರದ್ದೇ ಆಗಿದೆ. ರಾಜಕೀಯ ಪಕ್ಷಗಳ ಬಗ್ಗೆ ಹೇಳುವುದಾದರೆ ಬಿಜೆಪಿ ( @BJP4India)ಅತೀ ಹೆಚ್ಚು ಬಾರಿ ಮೆನ್ಶನ್ ಆಗಿದೆ ಎಂದು ಟ್ವಿಟರ್ ಕಂಪನಿ ಹೇಳಿದೆ.

ಗುರುವಾರ ಮತ ಎಣಿಕೆ ಮುಗಿಯುತ್ತಾ ಬರುತ್ತಿದ್ದಂತೆ ಮೋದಿಯವರು #VijaiBharat ಬಳಸಿ ಟ್ವೀಟಿಸಿದ ಟ್ವೀಟ್‌ಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಅದೇ ವೇಳೆ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಲೈಕ್, ರೀಟ್ವೀಟ್ ಆದ ಟ್ವೀಟ್ ಇದಾಗಿದೆ.

 ಮತ ಎಣಿಕೆಯ ದಿನವೇ  3.2 ದಶಲಕ್ಷ ಟ್ವೀಟ್‌ಗಳಾಗಿವೆ. ಇದರಲ್ಲಿ ಸಂಜೆ 3 ಮತ್ತು 4 ಗಂಟೆಯ ನಡುವೆ ಅತೀ ಹೆಚ್ಚು ಟ್ವೀಟ್‌ಗಳಾಗಿವೆ.
 ಏಪ್ರಿಲ್‌11 ರಿಂದ ಮೇ 19ರವರೆಗೆ  ದೇಶದ ಭದ್ರತೆ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳೇ ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆಯಾಗಿದ್ದು. ಇನ್ನುಳಿದಂತೆ ಧರ್ಮ, ಕೆಲಸ ಮತ್ತು ಉದ್ಯೋಗ, ಕೃಷಿ ಮತ್ತು ನೋಟುರದ್ದತಿ ವಿಷಯಗಳು ಚರ್ಚೆಯಾಗಿವೆ.

#mainbhichowkidar ಮತ್ತು Nyay scheme - ವಿಷಯಗಳು ಮತದಾನದಿಂದ ಹಿಡಿದು  ಎತ ಎಣಿಕೆ ದಿನದವರೆಗೆ ಅತೀ ಹೆಚ್ಚು ಚರ್ಚೆಗೊಳಗಾದ ವಿಷಯಗಳಾಗಿವೆ. 
ಚುನಾವಣೆ ವಿಷಯಕ್ಕೆ ಸಂಬಂಧಿಸಿ ಎನ್‌ಡಿಎ ಸದಸ್ಯರ ಬಗ್ಗೆ ಟ್ವಿಟರ್‌ನಲ್ಲಿ ಶೇ. 53ರಷ್ಟು ಮೆನ್ಶನ್ ಆಗಿದ್ದು @INCIndia  ಮತ್ತು ಯುಪಿಎ ಮೈತ್ರಿಕೂಟದ ಇತರ ಸದಸ್ಯರ ಟ್ವಿಟರ್ ಹ್ಯಾಂಡಲ್‌ಗಳು ಶೇ. 37 ರಷ್ಟು ಮೆನ್ಶನ್ ಆಗಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !