ಬೆಂಗಳೂರು: ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿದ್ದ ಟ್ವಿಟರ್, ವಿಶ್ವದ ಭೂಪಟದ ಚಿತ್ರವನ್ನು ತನ್ನ ಜಾಲತಾಣದಿಂದ ತೆಗೆದು ಹಾಕಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತ್ಯೇಕ ದೇಶಗಳು ಎಂದು ತೋರಿಸುತ್ತಿದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವಿಟರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಟ್ವಿಟರ್‌ನ ಕೆರಿಯರ್ ವಿಭಾಗದ ‘ಟ್ವೀಪ್ ಲೈಫ್’ನಲ್ಲಿ ಕಾರ್ಯನಿರ್ವಹಣಾ ಕಚೇರಿಗಳನ್ನು ಸೂಚಿಸುವ ಭೂಪಟದಲ್ಲಿ ತಪ್ಪಾಗಿರುವುದು ಗಮನಕ್ಕೆ ಬರುತ್ತಿದ್ದಂತೆ, ಟ್ವಿಟರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದರ ಬೆನ್ನಲ್ಲೇ ಸೋಮವಾರ ರಾತ್ರಿ ಟ್ವಿಟರ್ ಭೂಪಟವನ್ನು ತೆಗೆದು ಹಾಕಿದೆ. ಸದ್ಯಕ್ಕೆ ತನ್ನ ಕಚೇರಿಗಳಿರುವ ದೇಶಗಳ ಹೆಸರುಗಳನ್ನಷ್ಟೇ ಪ್ರಕಟಿಸಿದೆ.

ಇದನ್ನೂ ಓದಿ– ಜಮ್ಮು-ಕಾಶ್ಮೀರ, ಲಡಾಕ್ ಪ್ರತ್ಯೇಕ ದೇಶ: ಭಾರತದ ಭೂಪಟ ತಪ್ಪಾಗಿ ತೋರಿಸಿದ ಟ್ವಿಟರ್

ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲನೆ ಮಾಡುವುದರ ಸಂಬಂಧ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ಮಧ್ಯೆ ಜಟಾಪಟಿ ನಡೆದಿತ್ತು. ಸುಳ್ಳು ಮಾಹಿತಿ ಪ್ರಸಾರವಾಗುವುದನ್ನು ತಡೆಯಲು ವಿಫಲವಾದ ಆರೋಪದಲ್ಲಿ ಟ್ವಿಟರ್ ವಿರುದ್ಧ ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿಯೇ ಟ್ವಿಟರ್‌ನಿಂದ ಈ ತಪ್ಪಾಗಿದೆ.

ಇದನ್ನೂ ಓದಿ |ಟ್ವಿಟರ್ ಇಂಡಿಯಾ ಕುಂದುಕೊರತೆ ಅಧಿಕಾರಿಯಾಗಿ ಕ್ಯಾಲಿಫೋರ್ನಿಯಾದ ಕೆಸೆಲ್ ನೇಮಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.