ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಸಿಬ್ಬಂದಿ ಶಾಶ್ವತವಾಗಿ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ

Last Updated 13 ಮೇ 2020, 7:24 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಕೊರೊನಾ ವೈರಸ್‌ ಲಾಕ್‌ಡೌನ್‌ ಮುಗಿದ ನಂತರವೂ ಉದ್ಯೋಗಿಗಗಳು ಮನೆಯಿಂದಲೇ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ಸೆಪ್ಟೆಂಬರ್‌ಗೂ ಮುನ್ನ ಕಚೇರಿ ತೆರೆಯುವ ಸಾಧ್ಯತೆ ಇರುವುದಾಗಿ ಸಾಮಾಜಿಕ ಸಂಪರ್ಕ ಮಾಧ್ಯಮ ಸಂಸ್ಥೆ ಟ್ವಿಟರ್‌ ಹೇಳಿದೆ.

ಕಾರ್ಯಾಚರಣೆ ಹಂಚಿಕೆಯಾಗಿರುವುದರಿಂದ ಟ್ವಿಟರ್‌ ಉದ್ಯೋಗಿಗಳು ಯಾವುದೇ ಸ್ಥಳದಿಂದ ಕಾರ್ಯನಿರ್ವಹಿಸಬಹುದಾಗಿದೆ. ಬಹುತೇಕ ಎಲ್ಲರೂ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬಹುದಾದ ವ್ಯವಸ್ಥೆ ರೂಪಿಸಲಾಗಿದೆ ಎಂದು ಟ್ವಿಟರ್‌ ವಕ್ತಾರ ಹೇಳಿದ್ದಾರೆ.

'ಕಳೆದ ಕೆಲವು ತಿಂಗಳಿಂದ ಮನೆಯಿಂದಲೇ ಕಾರ್ಯನಿರ್ವಹಣೆ ಸಾಧ್ಯವೆಂಬುದು ಸಾಬೀತಾಗಿದೆ. ಹಾಗಾಗಿ, ನಮ್ಮ ಸಿಬ್ಬಂದಿ ಇಚ್ಛಿಸಿದರೆ ಮನೆಯಿಂದಲೇ ಕಾರ್ಯಾಚರಣೆ ಮುಂದುವರಿಸಬಹುದು. ಅದನ್ನು ನಾವು ಸಾಧ್ಯವಾಗಿಸುತ್ತೇವೆ' ಎಂದಿದ್ದಾರೆ.

ನಿಯಮಗಳ ಅನ್ವಯ ಒಂದಾದ ಮೇಲೆ ಒಂದರಂತೆ ಸಕಲ ಮುನ್ನೆಚ್ಚರಿಕೆಗಳೊಂದಿಗೆ ಕಚೇರಿಗಳನ್ನು ಪುನರಾರಂಭಿಸಲಾಗುತ್ತದೆ. ಕಚೇರಿ ಮತ್ತೆ ತೆರೆಯುವುದು ನಮ್ಮ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಿದ್ದಾರೆ.

ಈ ವರ್ಷದ ಅಂತ್ಯದ ವರೆಗೂ ಫೇಸ್‌ಬುಕ್‌ ಮತ್ತು ಗೂಗಲ್‌ ಕಂಪನಿಯ ಬಹುತೇಕ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಟೆಲಿವರ್ಕ್‌ ವ್ಯವಸ್ಥೆಯನ್ನೇ ಜಾಗತಿಕ ಬಹುತೇಕ ಕಂಪನಿಗಳು ಅನ್ವಯಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT