ಮಂಗಳವಾರ, ಜನವರಿ 25, 2022
28 °C

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್‌ ಖಾತೆ ಹ್ಯಾಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್‌ ಖಾತೆ

ನವದೆಹಲಿ: ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್‌ ಖಾತೆ ಬುಧವಾರ ಹ್ಯಾಕ್‌ ಆಗಿತ್ತು. ಆ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಹ್ಯಾಕರ್‌ಗಳು, ಖಾತೆಯ ಹೆಸರನ್ನು ಅಮೆರಿಕದ ಉದ್ಯಮಿ 'ಇಲಾನ್‌ ಮಸ್ಕ್‌' ಎಂದು ಬದಲಿಸಿ, 'ಗ್ರೇಟ್‌ ಜಾಬ್‌' (ಅತ್ಯುತ್ತಮ ಕೆಲಸ) ಎಂದು ಟ್ವೀಟಿಸಿದ್ದರು.

ಕೆಲ ಸಮಯದಲ್ಲೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್‌ ಖಾತೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ಹ್ಯಾಕರ್‌ಗಳು ಮಾಡಿದ್ದ ಪೋಸ್ಟ್‌ಗಳ‌ನ್ನು ಅಳಿಸಿ ಹಾಕಲಾಗಿದೆ. '@Mib_india ಖಾತೆ ಪುನಃ ಸ್ಥಾಪಿಸಲಾಗಿದೆ. ಖಾತೆಯನ್ನು ಫಾಲೋ ಮಾಡುತ್ತಿರುವ ಎಲ್ಲರ ಮಾಹಿತಿಗಾಗಿ...' ಎಂದು ಸಚಿವಾಲಯದ ಖಾತೆಯು ಪ್ರಕಟಿಸಿದೆ.

ಆ ಟ್ವಿಟರ್‌ ಖಾತೆಯನ್ನು 14 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ.

 

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್‌ ಖಾತೆ ಸಹ ಹ್ಯಾಕ್‌ ಆಗಿತ್ತು ಹಾಗೂ ಹ್ಯಾಕರ್‌ಗಳು, 'ಭಾರತದಲ್ಲಿ ಬಿಟ್‌ಕಾಯಿನ್‌ ಅನ್ನು ಅಧಿಕೃತಗೊಳಿಸಲಾಗಿದೆ...' ಎಂದು ಪ್ರಕಟಿಸಿದ್ದರು.

 

'ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್‌ ಖಾತೆಯು ಕೆಲ ಸಮಯ ನಿಯಂತ್ರಣ ಕಳೆದುಕೊಂಡಿತ್ತು. ಟ್ವಿಟರ್‌ ಸಂಸ್ಥೆಯೊಂದಿಗೆ ವಿಷಯ ಪ್ರಸ್ತಾಪಿ, ತಕ್ಷಣವೇ ಖಾತೆಯನ್ನು ಸುರಕ್ಷಿತಗೊಳಿಸಲಾಯಿತು. ನಿಯಂತ್ರಣ ಕಳೆದುಕೊಂಡಿದ್ದ ಅವಧಿಯಲ್ಲಿ ಪ್ರಕಟಿಸಿರುವ ಟ್ವೀಟ್‌ಗಳನ್ನು ಕಡೆಗಣಿಸುವಂತೆ' ಪ್ರಧಾನಿ ಕಾರ್ಯಾಲಯವು ‌ಪ್ರಕಟಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು