ಲಂಡನ್: ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬದ ಪಾರ್ಟಿ ಆಚರಿಸುತ್ತಿರುವ ವಿಡಿಯೊವನ್ನು ಐಪಿಎಲ್ ರೂವಾರಿ ಲಲಿತ್ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

'ಭಾರತದಿಂದ ಪರಾರಿಯಾದವರು' ಎಂದು ಅವರು ಬರೆದುಕೊಂಡಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಎರಡನೇ ಸಲ ಮಲ್ಯ ಅವರೊಂದಿಗಿನ ವಿಡಿಯೊವನ್ನು ಲಲಿತ್ ಮೋದಿ ಹಂಚಿಕೊಂಡಿದ್ದಾರೆ.
.ಭಾರತ ತೊರೆದು ಲಂಡನ್ನಲ್ಲಿ ನೆಲೆಸಿರುವ ಮಲ್ಯ ಜನ್ಮದಿನಕ್ಕೆ ಲಲಿತ್ ಮೋದಿ ಆತಿಥ್ಯ.ನೀವು ಭಾರತಕ್ಕೆ ಯಾವಾಗ ಬರುತ್ತೀರಿ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನೆ.
'ಭಾರತದಲ್ಲಿ ಇಂಟರ್ನೆಟ್ ಮತ್ತೊಮ್ಮೆ ಬ್ರೇಕ್ ಮಾಡೋಣ. ನಾವಿಬ್ಬರು ಭಾರತದಿಂದ ಪರಾರಿಯಾಗಿದ್ದೇವೆ. ನನ್ನ ಸ್ನೇಹಿತನಿಗೆ ಹುಟ್ಟಹಬ್ಬದ ಶುಭಾಶಯಗಳು' ಎಂದು ಲಲಿತ್ ಮೋದಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಡಿಸೆಂಬರ್ 18ರಂದು ಮಲ್ಯ 70ನೇ ವರ್ಷಕ್ಕೆ ಕಾಲಿರಿಸಿದ್ದರು. ಪಾಲುದಾರ ಪಿಂಕಿ ಲಾಲ್ವಾನಿ ವಿಡಿಯೊದಲ್ಲಿ ಕಾಣಬಹುದಾಗಿದೆ.

ತೆರಿಗೆ ಹಾಗೂ ಹಣಕಾಸಿನ ಅವ್ಯವಹಾರ ಹಾಗೂ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ಎದುರಿಸುತ್ತಿದ್ದಾರೆ. ಭಾರತದಿಂದ ಪರಾರಿಯಾಗಿರುವ ಇಬ್ಬರು ಲಂಡನ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಲಲಿತ್ ಮೋದಿ ಅವರು 2010ರಲ್ಲೇ ದೇಶವನ್ನು ತೊರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.