ಸೋಮವಾರ, ಜುಲೈ 26, 2021
21 °C

WhatsApp Call: ಹೊಸ ಫೀಚರ್ ಪರಿಶೀಲನೆ ನಡೆಸುತ್ತಿದೆ ವಾಟ್ಸ್ಆ್ಯಪ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

WhatsApp. Representative Image. Credit: Reuters Photo

ಬೆಂಗಳೂರು: ಗ್ರೂಪ್ ಆಡಿಯೊ ಮತ್ತು ವಿಡಿಯೊ ಕರೆಗಳ ಸೌಲಭ್ಯ ಒದಗಿಸುವ ಮೂಲಕ ಜನಪ್ರಿಯತೆ ಪಡೆದಿರುವ ವಾಟ್ಸ್‌ಆ್ಯಪ್, ಮತ್ತೊಂದು ಹೊಸ ಫೀಚರ್ ಅನ್ನು ಬಳಕೆದಾರರಿಗೆ ಒದಗಿಸಲು ಮುಂದಾಗಿದೆ.

ವಾಟ್ಸ್ಆ್ಯಪ್‌ನಲ್ಲಿ ಗ್ರೂಪ್ ಆಡಿಯೊ ಕರೆ ಮಾಡುವ ಸಂದರ್ಭದಲ್ಲಿ ಕರೆಯನ್ನು ತಪ್ಪಿಸಿಕೊಂಡವರು, ಮತ್ತೆ ಅವರಾಗಿಯೇ ಕರೆಗೆ ಸೇರಿಕೊಳ್ಳಬಹುದು.

ಈ ಹೊಸ ಫೀಚರ್ ಅನ್ನು ವಾಟ್ಸ್‌ಆ್ಯಪ್ ಐಓಎಸ್ ಬೀಟಾ ಆವೃತ್ತಿಯಲ್ಲಿ ಪರಿಶೀಲಿಸುತ್ತಿದೆ.

ಈಗಿರುವ ಆಯ್ಕೆಯ ಪ್ರಕಾರ, ವಾಟ್ಸ್ಆ್ಯಪ್‌ನಲ್ಲಿ ಗ್ರೂಪ್ ಆಡಿಯೋ ಕರೆಯ ಸಂದರ್ಭ, ಯಾರಾದರೂ ಕರೆ ಸ್ವೀಕರಿಸದಿದ್ದರೆ, ಅವರನ್ನು ಮತ್ತೋರ್ವ ಸದಸ್ಯರು ಕರೆಯಲ್ಲಿ ಸೇರಿಸಿಕೊಳ್ಳಬಹುದು. 

ಆದರೆ ಹೊಸ ಫೀಚರ್ ಮೂಲಕ, ಕರೆ ತಪ್ಪಿಸಿಕೊಂಡ ವ್ಯಕ್ತಿ, ಮತ್ತೆ ಕೂಡ ಕರೆ ಚಾಲ್ತಿಯಲ್ಲಿದ್ದರೆ, ತಾನಾಗಿಯೇ ಸೇರಿಕೊಳ್ಳಬಹುದಾಗಿದೆ. ಅವರನ್ನು ಗ್ರೂಪ್ ಅಡಿಯೋ ಕರೆಯಲ್ಲಿರುವ ಸದಸ್ಯರು ಮತ್ತೊಮ್ಮೆ ಕರೆಯುವ ಆವಶ್ಯಕತೆಯಿರುವುದಿಲ್ಲ.

ಈ ನೂತನ ಆಯ್ಕೆಯ ಕುರಿತು ‘ವಾ ಬೀಟಾ ಇನ್ಫೊ’ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು