ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

WhatsApp: ಫೋನ್ ಆನ್‌ಲೈನ್ ಇಲ್ಲದಿದ್ದರೂ ಮತ್ತೊಂದು ಫೋನ್‌ನಲ್ಲಿ ವಾಟ್ಸ್‌ಆ್ಯಪ್!

Last Updated 8 ನವೆಂಬರ್ 2021, 5:50 IST
ಅಕ್ಷರ ಗಾತ್ರ

ಬೆಂಗಳೂರು: ವಾಟ್ಸ್‌ಆ್ಯಪ್ ಬಳಸುತ್ತಿರುವ ಫೋನ್‌ನಲ್ಲಿ ಇಂಟರ್‌ನೆಟ್ ಆಫ್ ಆಗಿದ್ದರೂ, ಮತ್ತೊಂದು ಫೋನ್‌ ಅಥವಾ ಡಿವೈಸ್‌ನಲ್ಲಿ ನಿಮ್ಮ ವಾಟ್ಸ್‌ಆ್ಯಪ್ ಇನ್ನು ಕೆಲಸ ಮಾಡಲಿದೆ. ಮಲ್ಟಿ ಡಿವೈಸ್ ಸಪೋರ್ಟ್ ಎನ್ನುವ ಫೀಚರ್ ಅನ್ನು ವಾಟ್ಸ್‌ಆ್ಯಪ್ ಪರಿಚಯಿಸುತ್ತಿದ್ದು, ಬಳಕೆದಾರರಿಗೆ ಹೊಸ ಅಪ್‌ಡೇಟ್ ದೊರೆಯುತ್ತಿದೆ.

ಈವರೆಗೆ ವಾಟ್ಸ್‌ಆ್ಯಪ್ ವೆಬ್ ಆಯ್ಕೆಯ ಮೂಲಕ ಮತ್ತೊಂದು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ವಾಟ್ಸ್‌ಆ್ಯಪ್ ಬಳಸಬಹುದಾಗಿತ್ತು. ಆದರೆ ನಿಮ್ಮ ಫೋನ್‌ನಲ್ಲಿ ಇಂಟರ್‌ನೆಟ್ ಆನ್ ಆಗಿರುವುದು ಮುಖ್ಯವಾಗಿತ್ತು.

ಹೊಸ ಅಪ್‌ಡೇಟ್‌ನಲ್ಲಿ ನಿಮ್ಮ ವಾಟ್ಸ್‌ಆ್ಯಪ್ ಖಾತೆ ಇರುವ ಮೂಲ ಫೋನ್ ಆನ್‌ಲೈನ್‌ ಇಲ್ಲದಿದ್ದರೂ, ಸೆಕೆಂಡರಿ ಡಿವೈಸ್ ಮೂಲಕ ಮತ್ತೊಂದು ಫೋನ್‌ನಲ್ಲಿ ವಾಟ್ಸ್‌ಆ್ಯಪ್ ಬಳಸಬಹುದಾಗಿದೆ.

ವಾಟ್ಸ್‌ಆ್ಯಪ್ ವೆಬ್ ಮಾದರಿಯಲ್ಲೇ, ಸೆಕೆಂಡರಿ ಡಿವೈಸ್ ಅನ್ನು ನಮ್ಮ ಖಾತೆಗೆ ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಸ ಅಪ್‌ಡೇಟ್‌ನಲ್ಲಿ ವಾಟ್ಸ್‌ಆ್ಯಪ್ ಪರಿಚಯಿಸಿದೆ.

ಇದರಿಂದಾಗಿ ಪ್ರೈಮರಿ ಫೋನ್ ಇಂಟರ್‌ನೆಟ್ ಇಲ್ಲದಿದ್ದರೂ, ಅಥವಾ ಸ್ವಿಚ್ ಆಫ್ ಆಗಿದ್ದರೂ, ಮತ್ತೊಂದು ಡಿವೈಸ್‌ನಲ್ಲಿ ಲಾಗಿನ್ ಆಗಿದ್ದರೆ, ಅಲ್ಲಿಯೇ ವಾಟ್ಸ್‌ಆ್ಯಪ್ ಬಳಸುವ ಅವಕಾಶ ಜನರಿಗೆ ದೊರೆಯಲಿದೆ.

ಹಲವು ಹಂತದ ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಹೊಸ ಅಪ್‌ಡೇಟ್ ಅನ್ನು ಬಳಕೆದಾರರಿಗೆ ವಾಟ್ಸ್‌ಆ್ಯಪ್ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT