ಗುರುವಾರ , ಡಿಸೆಂಬರ್ 8, 2022
18 °C
ವಾಟ್ಸ್‌ಆ್ಯಪ್ ನೂತನ ಅಪ್‌ಡೇಟ್ ಶೀಘ್ರದಲ್ಲೇ ಲಭ್ಯ

ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್‌ಆ್ಯಪ್ ಖಾತೆ: ಶೀಘ್ರದಲ್ಲಿ ಹೊಸ ಅಪ್‌ಡೇಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಟ್ಸ್‌ಆ್ಯಪ್, ಹೊಸ ಅಪ್‌ಡೇಟ್‌ಗಳನ್ನು ಬಳಕೆದಾರರಿಗೆ ಕಾಲಕಾಲಕ್ಕೆ ನೀಡುವ ಮೂಲಕ ಹೊಸತನವನ್ನು ಪರಿಚಯಿಸುತ್ತಿದೆ. ಈ ಬಾರಿ ಆ್ಯಂಡ್ರಾಯ್ಡ್ ಬೀಟಾ ವಾಟ್ಸ್‌ಆ್ಯಪ್ ಬಳಕೆ ಮಾಡುತ್ತಿರುವವರಿಗೆ ‘ಲಿಂಕ್ ವಿತ್ ಯುವರ್ ಫೋನ್‘ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.

ವಾಟ್ಸ್‌ಆ್ಯಪ್‌ನ ಒಂದು ಖಾತೆಯನ್ನು ಮತ್ತೆ ನಾಲ್ಕು ಸ್ಮಾರ್ಟ್‌ಫೋನ್‌ನಲ್ಲಿ ಜೋಡಿಸಿ ಬಳಸುವ ಆಯ್ಕೆಯನ್ನು ಪರಿಶೀಲಿಸಲಾಗುತ್ತಿದೆ.

ಈಗಾಗಲೇ ಬಳಕೆದಾರರು ಪ್ರೈಮರಿ ಫೋನ್‌ನಲ್ಲಿ ವಾಟ್ಸ್ಆ್ಯಪ್ ಆನ್ ಇಲ್ಲದಿದ್ದರೂ, ಮತ್ತೊಂದು ಡಿವೈಸ್‌ನಲ್ಲಿ ವಾಟ್ಸ್‌ಆ್ಯಪ್ ವೆಬ್ ಆವೃತ್ತಿ ಬಳಸುವ ಅವಕಾಶ ಹೊಂದಿದ್ದಾರೆ. ಅದೇ ಮಾದರಿಯಲ್ಲಿ, ಮತ್ತೆ ನಾಲ್ಕು ಡಿವೈಸ್‌ಗಳನ್ನು ಲಿಂಕ್ ಮಾಡುವ ಅವಕಾಶ ಹೊಸ ಅಪ್‌ಡೇಟ್‌ನಲ್ಲಿ ಲಭ್ಯವಾಗಲಿದೆ.

ಪ್ರಸ್ತುತ ಹೊಸ ಫೀಚರ್ ಪರಿಶೀಲನೆಯಲ್ಲಿದ್ದು, ಮುಂದೆ ಒಂದು ಫೋನ್‌ನಲ್ಲಿಯೇ ಹಲವು ವಾಟ್ಸ್‌ಆ್ಯಪ್ ಖಾತೆಗಳನ್ನು ಲಿಂಕ್ ಮಾಡಿಕೊಂಡು ಬಳಸುವ ಅವಕಾಶ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು