ಸೋಮವಾರ, ಡಿಸೆಂಬರ್ 6, 2021
23 °C

Whatsapp Update: ವಾರದ ಬಳಿಕ ಮೆಸೇಜ್ ಡಿಲೀಟ್- ಶೀಘ್ರ ಲಭ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಬಳಕೆದಾರರು ಕಳುಹಿಸಿದ ಮೆಸೇಜ್ ಅನ್ನು ವಾರದೊಳಗೆ ಡಿಲೀಟ್ ಮಾಡುವ ಆಯ್ಕೆಯನ್ನು ವಾಟ್ಸ್‌ಆ್ಯಪ್ ಶೀಘ್ರದಲ್ಲೇ ಒದಗಿಸಲಿದೆ.

ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವ ಯಾವುದೇ ಮೆಸೇಜ್ ಅನ್ನು ಡಿಲೀಟ್ ಮಾಡುವ ಅವಕಾಶವಿದೆ.

ಆದರೆ ಈಗ ಇರುವ ಆಯ್ಕೆಯಲ್ಲಿ ಒಂದು ಗಂಟೆ, ಎಂಟು ನಿಮಿಷ ಮತ್ತು 16 ಸೆಕೆಂಡ್ ಅವಧಿಯೊಳಗೆ ಮಾತ್ರ ಮೆಸೇಜ್ ಡಿಲೀಟ್ ಮಾಡಬಹುದು.

ಈ ಬಗ್ಗೆ ವಾಟ್ಸ್‌ಆ್ಯಪ್ ಪರಿಶೀಲಿಸುತ್ತಿದ್ದು, ಹೊಸ ಆಯ್ಕೆಯಡಿ ಬಳಕೆದಾರರು ಏಳು ದಿನ, ಎಂಟು ನಿಮಿಷ ಮತ್ತು 16 ಸೆಕೆಂಡ್‌ವರೆಗಿನ ಅವಧಿಯಲ್ಲಿ ಮೆಸೇಜ್ ಡಿಲೀಟ್ ಮಾಡಬಹುದಾಗಿದೆ.

ವಾಟ್ಸ್‌ಆ್ಯಪ್ 'ಡಿಲೀಟ್ ಮೆಸೇಜ್ ಫಾರ್ ಆಲ್' ಆಯ್ಕೆ ಬೀಟಾ ಆವೃತ್ತಿಯಲ್ಲಿ ಪರಿಶೀಲನೆಯಲ್ಲಿದ್ದು, ಮುಂದೆ ಎಲ್ಲ ಬಳಕೆದಾರರಿಗೆ ದೊರೆಯುವ ನಿರೀಕ್ಷೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು