ಶುಕ್ರವಾರ, ಮೇ 27, 2022
26 °C

ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಕಾಣಿಸಲಿದೆ ವಾಟ್ಸ್‌ಆ್ಯಪ್ ಲಾಸ್ಟ್ ಸೀನ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ವಾಟ್ಸ್‌ಆ್ಯಪ್ ಬಳಕೆದಾರರು ತಮ್ಮ ಲಾಸ್ಟ್ ಸೀನ್ ಅನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ತೋರಿಸದೇ ಇರುವಂತಹ ಆಯ್ಕೆಯನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ಇದರಿಂದಾಗಿ ಬಳಕೆದಾರರು ಬಯಸಿದ ವ್ಯಕ್ತಿಗಳಿಗೆ ಮಾತ್ರವೇ ಲಾಸ್ಟ್ ಸೀನ್ ಕಾಣಿಸಲಿದೆ.

ಮೆಟಾ ಸಮೂಹ ಒಡೆತನದ ವಾಟ್ಸ್‌ಆ್ಯಪ್, ಈಗಾಗಲೇ ಲಾಸ್ಟ್ ಸೀನ್ ಹೈಡ್ ಆಯ್ಕೆಯನ್ನು ಪರೀಕ್ಷಾರ್ಥವಾಗಿ ಬೀಟಾ ಆವೃತ್ತಿಯಲ್ಲಿ ಬಳಸುತ್ತಿದೆ.

ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಬಳಕೆದಾರರಿಗೆ ಹೊಸ ಆಯ್ಕೆ ಲಭ್ಯವಾಗಲಿದೆ. ಪ್ರಸ್ತುತ, ಲಾಸ್ಟ್ ಸೀನ್, ನೋಬಡಿ, ಓನ್ಲಿ ಮೈ ಕಾಂಟಾಕ್ಟ್ ಮತ್ತು ಎವರಿಬಡಿ ಎಂಬ ಮೂರು ಆಯ್ಕೆಗಳನ್ನು ನೀಡಲಾಗಿದೆ.

ಅಂದರೆ, ಲಾಸ್ಟ್ ಸೀನ್ ಅನ್ನು ಮುಂದೆ, ಆಯ್ದ ವ್ಯಕ್ತಿಗಳಿಗೆ ತೋರಿಸದೇ ಇರುವಂತಹ ಫೀಚರ್ ಅನ್ನು ಹೊಸ ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಒದಗಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು