ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇಂಟರ್ನೆಟ್ ವ್ಯತ್ಯಯ ಸುದ್ದಿ': ಕ್ಲಿಕ್ ಬೈಟ್‍ಗೆ ಆತಂಕಗೊಂಡ ನೆಟ್ಟಿಗರು

Last Updated 12 ಅಕ್ಟೋಬರ್ 2018, 14:04 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ 48 ಗಂಟೆಗಳಲ್ಲಿ ಇಂಟರ್ನೆಟ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಸುದ್ದಿ ಬಗ್ಗೆ ಸ್ಪಷ್ಟೀಕರಣ ನೀಡಿದ ಐಸಿಎಎನ್‍ಎನ್, ಈ ರೀತಿ ವ್ಯತ್ಯಯ ಉಂಟಾದರೆ ಶೇ. 1ರಷ್ಟು ಬಳಕೆದಾರರಿಗೆ ಮಾತ್ರ ಸಮಸ್ಯೆ ಎದುರಾಗಲಿದೆ ಎಂದು ಹೇಳಿದೆ.

ಇಂಟರ್ನೆಟ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ ಎಂಬ ಸುದ್ದಿಯ ಫ್ಯಾಕ್ಟ್ ಚೆಕ್ ಮಾಡಿದ ಇಂಡಿಯನ್ ಎಕ್ಸ್‌ಪ್ರೆಸ್‌ ಡಾಟ್ ಕಾಂಗೆ ಐಸಿಎಎನ್‍ಎನ್ ಈ ರೀತಿ ಉತ್ತರಿಸಿದೆ.

ರೂಟ್ ಕೀ ಸೈನಿಂಗ್ ಕೀ (ಕೆಎಸ್‍ಕೆ) ಬದಲಾವಣೆ ಕಾರ್ಯನಡೆಯುತ್ತಿದ್ದು, ಇದರಿಂದ ಜಾಗತಿಕ ಅಂತರ್ಜಾಲ ಸಂಪರ್ಕ ವ್ಯವಸ್ಥೆಯಲ್ಲಿ ಸಣ್ಣ ಪ್ರಮಾಣದ ಪರಿಣಾಮ ಸಂಭವಿಸಲಿದೆ.ಕ್ರಿಪ್ಟೋಗ್ರಾಫಿಕ್ ಕೀ ಬದಲಾವಣೆ ಬಗ್ಗೆ ಆಗಸ್ಟ್ ನಲ್ಲಿಯೇ ತಿಳಿಸಲಾಗಿತ್ತು.ಈ ಬದಲಾವಣೆ ನಡೆಯುತ್ತಿದ್ದರೂ ಅಂತರ್ಜಾಲ ಸೇವೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಆದಾಗ್ಯೂ, 48 ಗಂಟೆಗಳಲ್ಲಿ ಅಂತರ್ಜಾಲ ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯ ಸಾಧ್ಯತೆ ಎಂಬ ಸುದ್ದಿ ಶುಕ್ರವಾರ ವೈರಲ್ ಆಗಿತ್ತು. ರಷ್ಯಾ ಟುಡೇ ವರದಿಯನ್ನು ಉಲ್ಲೇಖಿಸಿ ಎಎನ್‍ಐ ಸುದ್ದಿ ಸಂಸ್ಥೆ ಈ ಸುದ್ದಿ ಪ್ರಕಟಿಸಿತ್ತು.ಆದರೆ ಸುದ್ದಿಗಳ ಶೀರ್ಷಿಕೆ ಕ್ಲಿಕ್ ಬೈಟ್ ಎಂದು ಐಸಿಎಎನ್ಎನ್ ಡಾಟ್ ಆರ್ಗ್ ವಕ್ತಾರ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರಹ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ರೀತಿಯ ಕಾರ್ಯ ನಡೆಯುವಾಗ ಶೇ.99ರಷ್ಟು ಇಂಟರ್ನೆಟ್ ಬಳಕೆದಾರರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ದತ್ತಾಂಶ ವಿಶ್ಲೇಷಕರು ಹೇಳಿರುವುದಾಗಿಎಂದು ಐಸಿಎನ್ಎನ್ ವಕ್ತಾರ ಹೇಳಿದ್ದಾರೆ.2018 ಜುಲೈ ತಿಂಗಳಲ್ಲಿ ಐಸಿಎಎನ್ಎನ್ ಬ್ಲಾಗ್‍ನಲ್ಲಿ ಇದೇ ಉತ್ತರ ನೀಡಲಾಗಿತ್ತು.

ಇಂಟರ್ನೆಟ್ ವ್ಯತ್ಯಯದಿಂದ ಸಮಸ್ಯೆ ಉಂಟಾಗುವುದು ಯಾರಿಗೆ?
ಹೊಸ ಕೆಎಸ್‍ಕೆ ಇಲ್ಲದೇ ಇರುವ ಬಳಕೆದಾರರಿಗೆ ಇಂಟರ್ನೆಟ್ ಬಳಸುವಾಗ ರೆಸಲ್ಯೂಷನ್ ಫೈಲ್ಯೂರ್ ಎಂಬ ಸಂದೇಶ ಕಾಣಿಸುತ್ತದೆ.ಆದರೆ ಇಂಥಾ ಸಂದೇಶ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ಹೇಳುವುದು ಅಸಾಧ್ಯ.ಕೆಎಸ್‌‍ಕೆ ಬದಲಾವಣೆಯಾಗುವಾಗ ಕೇವಲ ಶೇ.1 ರಷ್ಟು ಬಳಕೆದಾರರಿಗೆ ಮಾತ್ರ ಇಂಟರ್ನೆಟ್ ಸಮಸ್ಯೆ ಉಂಟಾಗುತ್ತದೆ.

****

ಏನಿದು ಕ್ಲಿಕ್ ಬೈಟ್?

ಆನ್‍ಲೈನ್‍ನಲ್ಲಿ ಸುದ್ದಿ ಅಥವಾ ಬರಹಕ್ಕೆಆಕರ್ಷಕ ಶೀರ್ಷಿಕೆ ನೀಡಿ, ಜನರ ಗಮನ ಸೆಳೆಯುವ ತಂತ್ರವನ್ನು ಕ್ಲಿಕ್ ಬೈಟ್ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT