ಶುಕ್ರವಾರ, ಮಾರ್ಚ್ 31, 2023
26 °C

Alexa: ಅಮೆಜಾನ್‌ ಅಲೆಕ್ಸಾ ಪರಿಚಯಿಸುತ್ತಿದೆ ಪುರುಷ ಧ್ವನಿ ಆಯ್ಕೆ

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆಜಾನ್‌ ಕಂಪನಿಯ ವರ್ಚುವಲ್ ಸಹಾಯಕ ತಂತ್ರಜ್ಞಾನ ‘ಅಲೆಕ್ಸಾ’ (Alexa) ಭಾರತದಲ್ಲಿ ಐದು ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ, ಅಲೆಕ್ಸಾದಲ್ಲಿ ಪುರುಷ ಧ್ವನಿ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ.

ಈ ಕುರಿತು ಪ್ರಕಟಣೆ ನೀಡಿರುವ ಅಮೆಜಾನ್ ಇಂಡಿಯಾ, ‘ಮೊಟ್ಟಮೊದಲ ಬಾರಿಗೆ ಭಾರತೀಯ ಬಳಕೆದಾರರು ಅಲೆಕ್ಸಾಳ ಮೂಲ ಧ್ವನಿ ಹಾಗೂ ಹೊಸದಾಗಿ ಪರಿಚಯಿಸಲ್ಪಡುವ ಒಂದು ಪುರುಷ ಧ್ವನಿ ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ’ ಎಂದು ತಿಳಿಸಿದೆ.

ಈ ಹೊಸ ಪುರುಷ ಧ್ವನಿಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಉತ್ತರಿಸಲಿದೆ. ‘Alexa change your voice’ ಎಂದು ಹೇಳುವ ಮೂಲಕ ಧ್ವನಿ ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.

ಭಾರತದ ಉದ್ದಗಲಕ್ಕೂ ಲಕ್ಷಾಂತರ ಗ್ರಾಹಕರು ಈ ಎಕೊ ಡಿವೈಸ್‌ಗಳನ್ನು ಖರೀದಿಸಿರುವುದಾಗಿ Amazon ಪ್ರಕಟಿಸಿದೆ.

2022 ರಿಂದ Amazon Prime Music, Spotify, JioSavan, ಮತ್ತು Apple Music ಮೂಲಕ ಸಂಗೀತಕ್ಕಾಗಿ ಅಲೆಕ್ಸಾ ಬಳಿ ಶೇ 53 ರಷ್ಟು ಕೋರಿಕೆಗಳು ಹೆಚ್ಚಿವೆ. ಸ್ಮಾರ್ಟ್ ಹೋಮ್‌ ಉಪಕರಣಗಳ ನಿಯಂತ್ರಣಗಳಿಗೆ ಅಲೆಕ್ಸಾ ಬಳಿ ಬಂದ ಕೋರಿಕೆಗಳು ಶೇ 513 ಹೆಚ್ಚಾಗಿದೆ ಎಂದು ತಿಳಿಸಿದೆ.

‘ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತೀಯ ಬಳಕೆದಾರರು ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಅಲೆಕ್ಸಾಳನ್ನು ತಮ್ಮ ಜೀವನದ ಭಾಗವಾಗಿಸಿಕೊಂಡು ಅದರೊಂದಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ಕೃತಾರ್ಥಕ ಭಾವನೆ ಮೂಡಿಸುವ ಸಂಗತಿ’ ಎಂದು ಅಲೆಕ್ಸಾ ಇಂಡಿಯಾ ವ್ಯವಸ್ಥಾಪಕ ದಿಲೀಪ್ ಆರ್ ಎಸ್ ತಿಳಿಸಿದ್ದಾರೆ.

ಅಲೆಕ್ಸಾ ಐದನೇ ವಾರ್ಷಿಕೋತ್ಸವ ಪ್ರಯುಕ್ತ ಮಾರ್ಚ್ 2 ರಿಂದ ಮಾರ್ಚ್ 4 ರವರೆಗೆ ಈಕೋ ಸ್ಮಾರ್ಟ್ ಸ್ಪೀಕರ್ಸ್ ಹಾಗೂ ಫೈರ್ ಟಿವಿ ಸಾಧನಗಳು ಸೇರಿದಂತೆ, ಅತ್ಯಂತ ಹೆಚ್ಚು ಮಾರಾಟವಾಗುವ Alexa ಸಾಧನಗಳ ಮೇಲೆ Amazon ಕೊಡುಗೆ ಪ್ರಕಟಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು