ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಯುಸಿ ಬ್ರೌಸರ್‌ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಔಟ್!

Last Updated 16 ಮಾರ್ಚ್ 2021, 14:40 IST
ಅಕ್ಷರ ಗಾತ್ರ

ಚೀನಾದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಆ್ಯಪ್‌ಗಳನ್ನು ಒದಗಿಸುವ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಅಲಿಬಾಬಾ ಸಂಸ್ಥೆಯ ಒಡೆತನದ ಯುಸಿ ಬ್ರೌಸರ್ ಅನ್ನು ಮಂಗಳವಾರ ತೆಗೆದುಹಾಕಲಾಗಿದೆ.

ಚೀನಾದ ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವಾರ್ಷಿಕ ಗ್ರಾಹಕ ಹಕ್ಕುಗಳ ಕಾರ್ಯಕ್ರಮವನ್ನು ಯುಸಿ ಬ್ರೌಸರ್ ಟೀಕಿಸಿದ ಮರುದಿನವೇ ಈ ಕ್ರಮ ಕೈಗೊಳ್ಳಲಾಗಿದೆ.

ಆ್ಯಪ್ ಅನ್ನು ಚೀನಾದಲ್ಲಿ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಯುಸಿ ಬ್ರೌಸರ್ ದೊರೆಯುತ್ತಿತ್ತು.

ಚೀನಾದ ಸೆಂಟ್ರಲ್ ಟೆಲಿವಿಶನ್‌ನ ಜನಪ್ರಿಯ 2 ಗಂಟೆಗಳ ‘315’ ಕಾರ್ಯಕ್ರಮ ಸೋಮವಾರ ರಾತ್ರಿ ಪ್ರಸಾರವಾಗಿತ್ತು. ಆ ಕಾರ್ಯಕ್ರಮವನ್ನು ಟೀಕಿಸಿದ ಯುಸಿ ಬ್ರೌಸರ್ ಮತ್ತು ಇತರ ವಿದೇಶಿ ಕಂಪನಿಗಳನ್ನು ಚೀನಾ ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುತ್ತಿದೆ.

ಈ ಬಗ್ಗೆ ಯುಸಿ ಬ್ರೌಸರ್ ಕ್ಷಮೆ ಕೋರಿದ್ದು, ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT