ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ತಿಂಡಿಗಳನ್ನು ಬಿಟ್ಟ ಆ್ಯಂಡ್ರಾಯ್ಡ್‌; ಹೊಸ ಆವೃತ್ತಿಗಳಲ್ಲಿ ಸಂಖ್ಯೆ ಬಳಕೆ

ಆ್ಯಂಡ್ರಾಯ್ಡ್‌ 10 ಬಿಡುಗಡೆ
Last Updated 23 ಆಗಸ್ಟ್ 2019, 14:58 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋಟ್‌ ಬಳಕೆಯನ್ನು ಸರಳ ಮತ್ತು ಸುಲಭಗೊಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಗ್ರಾಹಕರನ್ನು ಸೃಷ್ಟಿಸಿಕೊಂಡ ಆ್ಯಂಡ್ರಾಯ್ಡ್‌, ಇನ್ನು ಮುಂದೆ ತನ್ನ ಹೊಸ ಆವೃತ್ತಿಯ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌(ಒಎಸ್‌)ಗಳನ್ನು ಸಿಹಿ ತಿಂಡಿ ಹೆಸರಿನೊಂದಿಗೆ ಗುರುತಿಸುತ್ತಿಲ್ಲ. ಇತ್ತೀಚೆಗೆ ಹೊರತಂದಿರುವ ಆವೃತ್ತಿಯನ್ನು ಆ್ಯಂಡ್ರಾಯ್ಡ್‌ 10ಎಂದು ಕರೆದಿದೆ.

ಮುಂಬರುವ ಆ್ಯಂಡ್ರಾಯ್ಡ್‌ ಆವೃತ್ತಿಗಳು ಆ್ಯಂಡ್ರಾಯ್ಡ್‌ 11, ಆ್ಯಂಡ್ರಾಯ್ಡ್‌ 12,..ಎಂದು ಕರೆಸಿಕೊಳ್ಳಲಿವೆ. ಗೂಗಲ್‌ ಗುರುವಾರ ಅಧಿಕೃತವಾಗಿ ಆ್ಯಂಡ್ರಾಯ್ಡ್‌ 10ರ ಬಗ್ಗೆ ಪ್ರಕಟಿಸಿದ್ದು, ತಿನಿಸಿನ ಹೆಸರಿನ ಬದಲು ಸಂಖ್ಯೆಯನ್ನೇ ಬಳಸುವುದಾಗಿ ಹೇಳಿದೆ.

ಆ್ಯಂಡ್ರಾಯ್ಡ್‌ನ ಮೊದಲ ಆವೃತ್ತಿ 1.0 ಬಿಡುಗಡೆಯಾಗಿದ್ದು2008ರಲ್ಲಿ. ಆ್ಯಸ್ಟ್ರಾಯ್ಡ್‌ಎಂದು ಕರೆಯಲಾಗಿದ್ದ ಆ ತಂತ್ರಾಂಶ ಸಾಮಾನ್ಯ ಬಳಕೆದಾರರಿಗೆ ದೊರೆತಿರಲಿಲ್ಲ. ಹೊಸ ಆವೃತ್ತಿಗಳನ್ನು ಬಳಕೆಗೆ ತರುವ ಜತೆಗೆ ಗ್ರಾಹಕರನ್ನು ಸೆಳೆಯಲು ಸಿಹಿ ತಿಂಡಿಗಳ ಹೆಸರನ್ನು ಪ್ರಯೋಗಿಸಿತು. ಈವರೆಗೆ ಒಟ್ಟು 14 ತಿಂಡಿಗಳ ಹೆಸರು ಆ್ಯಂಡ್ರಾಯ್ಡ್‌ ಆವೃತ್ತಿಗಳಲ್ಲಿ ಬಳಕೆಯಾಗಿದೆ.

ಕಪ್‌ಕೇಕ್‌(ಆ್ಯಂಡ್ರಾಯ್ಡ್‌ 1.5), ಡೋನಟ್‌(1.6), ಎಕ್ಲೇರ್‌(2.0, 2.0.1, 2.1), ಫ್ರೋಯೊ(2.2), ಜಿಂಜರ್‌ಬ್ರೆಡ್‌(2.3, 2.3.3), ಹನಿ ಕಾಂಬ್‌(3.0, 3.1, 3.2), ಐಸ್‌ ಕ್ರೀಂ ಸ್ಯಾಂಡ್ವಿಚ್‌(4.0, 4.0.3), ಕಿಟ್‌ಕ್ಯಾಟ್‌(4.4), ಲಾಲಿಪಾಪ್‌(5.0, 5.1), ಮಾರ್ಷ್‌ಮಲೊ(6.0), ನೋಗಟ್‌(7.0, 7.1), ಓರಿಯೊ(8.0, 8.1) ಹಾಗೂ 2018ರಲ್ಲಿ ಬಿಡುಗಡೆಯಾದ ಪೈ(9.0) ಆ್ಯಂಡ್ರಾಯ್ಡ್‌ ಪೈಕಿ ಸಿಹಿ ತಿಂಡಿ ಹೆಸರಿನ ಕೊನೆಯ ಒಎಸ್‌ ಆಗಿದೆ.

ಹೊಸ ಆವೃತ್ತಿ ಬಿಡುಗಡೆಗೂ ಮುನ್ನ ‘ಆ್ಯಂಡ್ರಾಯ್ಡ್‌ ಕ್ಯು'ಎಂದು ಕರೆಯಲಾಗಿತ್ತು. ಆ್ಯಂಡ್ರಾಯ್ಡ್‌ ಬಳಕೆದಾರರು, ಇಂಗ್ಲಿಷ್‌ನ ಕ್ಯು(Q) ಅಕ್ಷರದಿಂದ ಆರಂಭವಾಗುವ ಸಿಹಿ ತಿಂಡಿಗಳ ಹೆಸರುಗಳನ್ನು ಹುಡುಕಿ, ಹೊಸ ಸಾಫ್ಟ್‌ವೇರ್‌ ಹೆಸರನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದರು. ಆದರೆ, ಆ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಸಂಸ್ಥೆ ಸಂಖ್ಯೆಯ ಸೂತ್ರವನ್ನೇ ನೆಚ್ಚಿಕೊಂಡಿದೆ. ಆ್ಯಂಡ್ರಾಯ್ಡ್‌ ಜಾಗತಿಕ ಬಳಕೆದಾರರನ್ನು ಹೊಂದಿರುವ ಕಾರಣ, ತಿಂಡಿಗಳ ಹೆಸರು ಎಲ್ಲ ಪ್ರದೇಶದ ಜನರಿಗೂ ತಲುಪುದಿಲ್ಲ ಎಂಬುದನ್ನು ಗಮನಿಸಿದೆ. ತಾನು ಬಳಸುತ್ತಿರುವ ಆವೃತ್ತಿಯ ಬಗೆಗೆ ತಿಂಡಿಗಳ ಮೂಲಕ ಗುರುತಿಸುವುದನ್ನು ಬಹಳಷ್ಟು ಜನರಿಗೆ ಕ್ಲಿಷ್ಟಕರವಾಗಿ ತೋರಿದೆ. ಬಳಕೆದಾರರ ಅಭಿಪ್ರಾಯ ಪಡೆದು ಗೂಗಲ್‌ ‘ಆ್ಯಂಡ್ರಾಯ್ಡ್‌ 10‘ಎಂದು ಹೆಸರಿಸಿದೆ.

250 ಕೋಟಿ ಬಳಕೆದಾರರನ್ನು ಹೊಂದಿರುವ ಆ್ಯಂಡ್ರಾಯ್ಡ್‌ ತನ್ನ ಲೋಗೊ ಸಹ ಬದಲಿಸಿಕೊಂಡಿದೆ. ಹೊಸ ಆವೃತ್ತಿಯಲ್ಲಿ ಖಾಸಗಿ ಮಾಹಿತಿ ಸುರಕ್ಷತೆಗೆ ಒತ್ತು ನೀಡಲಾಗಿದೆ.

* ಡಾರ್ಕ್‌ ಥೀಮ್‌: ಇದರಿಂದಾಗಿ ಸ್ಮಾರ್ಟ್‌ಫೋಟ್‌ ಬ್ಯಾಟರಿ ಬಾಳಿಕೆ ದೀರ್ಘವಾಗಲಿದೆ. ನೋಡಲೂ ಭಿನ್ನ ಅನುಭವ ನೀಡುತ್ತದೆ.

* ಲೈವ್‌ ವಿಡಿಯೊಗೆ ಯೂಟ್ಯೂಬ್‌ ಮತ್ತು ಇತರೆ ಆ್ಯಪ್‌ಗಳಲ್ಲಿ ಅಡಿಬರಹ ನೀಡುವ ಅವಕಾಶ.

* ಖಾಸಗಿತನದ ಆಯ್ಕೆಗಳು ಒಂದೇ ಕಡೆ ಲಭ್ಯ. ಲೈವ್‌ ಲೊಕೇಶನ್‌ ಹಂಚಿಕೊಳ್ಳುವುದು ಸೇರಿದಂತೆ ಇತರೆ ಆಯ್ಕೆಗಳು

* ಆ್ಯಂಡ್ರಾಯ್ಡ್‌ ಮೆಸೇಜ್‌ ಆ್ಯಪ್‌ನಲ್ಲಿ ಸ್ಮಾರ್ಟ್‌ ರಿಪ್ಲೇ ಆಯ್ಕೆ ಸಿಗಲಿದೆ. ಉದಾಹರಣೆಗೆ, ಸಂದೇಶದಲ್ಲಿ ವಿಳಾಸ ಕಳುಹಿಸಿದರೆ ಗೂಗಲ್‌ ಮ್ಯಾಪ್‌ನೊಂದಿಗೆ ಸಂಪರ್ಕಿಸುವ ಅವಕಾಶವಿರಲಿದೆ. ಇನ್ನಷ್ಟು ವಿಶೇಷಗಳನ್ನು ಆ್ಯಂಡ್ರಾಯ್ಡ್‌ 10 ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT