ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ವರ್ಷಗಳ ಹಿಂದಿನ ಆ್ಯಪಲ್‌ ಕಂಪ್ಯೂಟರ್‌ ಹರಾಜು; ₹3.7 ಕೋಟಿಗೆ ಮಾರಾಟ

Last Updated 10 ನವೆಂಬರ್ 2021, 16:37 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಆ್ಯಪಲ್‌ ಕಂಪನಿಯ ಅತಿ ಅಪರೂಪದ 'ಆ್ಯಪಲ್‌–1 ಕಂಪ್ಯೂಟರ್‌' ಹರಾಜಿನಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಆ್ಯಪಲ್ ಸಂಸ್ಥೆಯ ಸಹ–ಸಂಸ್ಥಾಪಕ ಸ್ಟೀವ್‌ ವಜ್ನಿಯಾಕ್‌ ಅವರು ತಯಾರಿಸಿದ್ದ ಕಂಪ್ಯೂಟರ್‌ ಸುಮಾರು ₹3.7 ಕೋಟಿಗೆ (5 ಲಕ್ಷ ಡಾಲರ್‌) ಮಾರಾಟವಾಗಿರುವುದಾಗಿ ವರದಿಯಾಗಿದೆ.

1976ರಲ್ಲಿ ಚಾಫೆ ಕಾಲೇಜಿನ ಪ್ರೊಫೆಸರ್‌ ಆ್ಯಪಲ್‌–1 ಪರ್ಸನಲ್‌ ಕಂಪ್ಯೂಟರ್‌ ಖರೀದಿಸಿದ್ದರು. ಆ ಕಂಪ್ಯೂಟರ್‌ 666.66 ಡಾಲರ್‌ಗೆ ಮಾರಾಟವಾಗಿತ್ತು. ಈಗಿನ ಬೆಲೆಗೆ ಅನ್ವಯಿಸುವುದಾದರೆ ಸುಮಾರು 3,211 ಡಾಲರ್‌ಗೆ (ಸುಮಾರು ₹2.9 ಲಕ್ಷ) ಸಮವಾಗುತ್ತದೆ ಎಂದು ಆ್ಯಪಲ್‌ಇನ್‌ಸೈಡರ್‌ ವರದಿ ಮಾಡಿದೆ.

ಕ್ಯಾಲಿಫೋರ್ನಿಯಾದ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರಂಭಿಕ ಬಿಡ್‌ 2,00,000 ಡಾಲರ್‌ ನಿಗದಿಯಾಗಿತ್ತು. ಅಂತಿಮವಾಗಿ 5 ಲಕ್ಷ ಡಾಲರ್‌ಗಳಿಗೆ 45 ವರ್ಷಗಳಷ್ಟು ಹಳೆಯದಾದ ಕಂಪ್ಯೂಟರ್‌ ಮಾರಾಟವಾಗಿದೆ.

ಕಂಪ್ಯೂಟರ್‌ ಅಭಿವೃದ್ಧಿ ಪಡಿಸುವಾಗ ಬಳಕೆಯಾಗಿದ್ದ 'ಎನ್‌ಟಿಐ' ಮದರ್‌ಬೋರ್ಡ್‌, ಹಲವು ಕೇಬಲ್‌ಗಳು, ಪ್ರೋಗ್ರಾಮಿಂಗ್‌ ಮ್ಯಾನ್ಯುವಲ್‌ಗಳು, ಕೈಬರಹದಲ್ಲಿರುವ ವಿಷಯಸೂಚಕ ಕಾರ್ಡ್‌ಗಳು ಹಾಗೂ ಪ್ಯಾನಸೋನಿಕ್‌ ಮಾನಿಟರ್‌ ಅನ್ನು ಈ ಕಂಪ್ಯೂಟರ್ ಒಳಗೊಂಡಿದೆ. ಕೋವಾ ಮರದಿಂದ ಕಂಪ್ಯೂಟರ್‌ ಹೊರ ಭಾಗ ರೂಪಿಸಲಾಗಿದ್ದು, ಅದು ಕಾರ್ಯನಿರ್ಹಣೆಯ ಸ್ಥಿತಿಯಲ್ಲಿದೆ.

2014ರಲ್ಲಿ ಆ್ಯಪಲ್‌–1 ಕಂಪ್ಯೂಟರ್‌ ದಾಖಲೆಯ 9,05,000 ಡಾಲರ್‌ಗೆ (ಅಂದಿನ ಬೆಲೆ ಸುಮಾರು ₹5.6 ಕೋಟಿ) ಹರಾಜಿನಲ್ಲಿ ಮಾರಾಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT