ಬುಧವಾರ, ಸೆಪ್ಟೆಂಬರ್ 28, 2022
26 °C

ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ

ಎಪಿ Updated:

ಅಕ್ಷರ ಗಾತ್ರ : | |

ಸ್ಯಾನ್ ಫ್ರಾನ್ಸಿಸ್ಕೊ: ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್‌ಗಳಲ್ಲಿ ಭದ್ರತಾ ದೋಷದ ಕುರಿತು ಆ್ಯಪಲ್ ಎಚ್ಚರಿಕೆ ನೀಡಿದೆ.

ಭದ್ರತಾ ದೋಷದಿಂದಾಗಿ ಹ್ಯಾಕರ್‌ಗಳಿಗೆ ಡಿವೈಸ್ ಮೇಲೆ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಹಾಗಾಗಿ ತುರ್ತಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಇನ್‌ಸ್ಟಾಲ್ ಮಾಡುವಂತೆ ಕಂಪನಿಯು ವಿನಂತಿಸಿದೆ.

ಇದನ್ನೂ ಓದಿ: 

ಐಫೋನ್ 6ಎಸ್ ಹಾಗೂ ನಂತರದ ಮಾದರಿಗಳು, ಐಪ್ಯಾಡ್‌ನ 5ನೇ ತಲೆಮಾರಿನ ಸೇರಿದಂತೆ ಹಲವು ಡಿವೈಸ್, ಐಪ್ಯಾಡ್ ಪ್ರೊ, ಐಪ್ಯಾಡ್ ಏರ್ 2, ಮ್ಯಾಕ್ ಕಂಪ್ಯೂಟರ್ (macos monterey)ಹಾಗೂ ಕೆಲವು ಐಪಾಡ್ ಡಿವೈಸ್‌ಗಳಲ್ಲಿ ದೋಷ ಕಂಡುಬರುವ ಭೀತಿಯಿದೆ.

ಈ ದೋಷದಿಂದಾಗಿ ಹ್ಯಾಕರ್‌ಗಳು ಡಿವೈಸ್ ಮೇಲೆ ಸಂಪೂರ್ಣ ಆಡ್ಮಿನ್ ಆಕ್ಸೆಸ್ ಪಡೆಯುವ ಸಾಧ್ಯತೆಯಿದೆ ಎಂದು ಸೋಷಿಯಲ್ ಫ್ರೂಫ್ ಸೆಕ್ಯೂರಿಟಿ ಸಿಇಒ ರಾಚೆಲ್ ಟೊಬ್ಯಾಕ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು