ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಟಿಕ್‌ಟಾಕ್‌ಗೆ ಸಡ್ಡು ಹೊಡೆದ ದೇಸಿ ‘ಚಿಂಗಾರಿ‘

ಟಿಕ್‌ಟಾಕ್ ಬದಲು ಈಗ ಚಿಂಗಾರಿ ಹವಾ ಬಲು ಜೋರು
Last Updated 30 ಜೂನ್ 2020, 12:52 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಚೀನಾದ 59 ಅಪ್ಲಿಕೇಷನ್‌ಗಳನ್ನು ನಿಷೇಧಿಸಿದ ನಂತರ ಆ ದೇಶದ ಜನಪ್ರಿಯ ಆ್ಯಪ್‌ ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿ ‘ಚಿಂಗಾರಿ’ ಎಂಬ ದೇಸಿ ಅಪ್ಲಿಕೇಷನ್‌ ಹುಟ್ಟಿಕೊಂಡಿದೆ.

‘ಮೇಕ್ ಇನ್‌ ಇಂಡಿಯಾ’ ಯೋಜನೆ ಅಡಿ ಬೆಂಗಳೂರು ಮೂಲದ ಡೆವಲಪರ್‌ಗಳುಅಭಿವೃದ್ಧಿಪಡಿಸಿರುವ ಸಂಪೂರ್ಣ ಸ್ವದೇಶಿ ಆ್ಯಪ್‌ ‘ಚಿಂಗಾರಿ’ (chingari)ಚೀನಾದ ಟಿಕ್‌ಟಾಕ್‌ಗೆ ತೀವ್ರ ಪೈಪೋಟಿ ಒಡ್ಡಿದೆ.

ಚೀನಾ ಆ್ಯಪ್‌ಗಳನ್ನು ನಿಷೇಧಿಸಿದ ನಂತರ ‘ಚಿಂಗಾರಿ’‌ಗೆ ಸಿಕ್ಕಾಪಟ್ಟೆ ಬೇಡಿಕೆ ಕುದುರಿದೆ.ಡೌನ್‌ಲೋಡ್‌ ಮತ್ತು ಬಳಕೆದಾರರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಗಂಟೆಗೆ ಒಂದು ಲಕ್ಷದಂತೆ ಡೌನ್‌ಲೋಡ್ ಆಗುತ್ತಿರುವ ಚಿಂಗಾರಿ‌ ಇದುವರೆಗೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ‌ಡೌನ್‌ಲೋಡ್ ಆಗಿದೆ. ಅಂದರೆ, ಇದರ ಜನಪ್ರಿಯತೆ ಅರ್ಥವಾಗುತ್ತದೆ.

ಕೇವಲ 72 ಗಂಟೆಯಲ್ಲಿ 5 ಲಕ್ಷ ಅಪ್ಲಿಕೇಶನ್ ಡೌನ್‌ಲೋಡ್‌ ಕಂಡಿದೆ ಎನ್ನುತ್ತಾರೆ ಚಿಂಗಾರಿ ಆ್ಯಪ್‌ ಸಹ ಸಂಸ್ಥಾಪಕ ಮತ್ತು ಸಿಇಒ ಸುಮಿತ್‌ ಘೋಷ್. ‘ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದಕ್ಕೆ ಧನ್ಯವಾದಗಳು ಭಾರತ. ಈಗ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಮ್ಮ ವೇಗ ನಮಗೆ ಆಶ್ಚರ್ಯ ಮೂಡಿಸಿದೆ. ನಾಳೆ ಹೊಸ ದಿನ. ಗುಡ್ ಮಾರ್ನಿಂಗ್ ಭಾರತ’ ಎಂದು ಅವರು‌ ಟ್ವೀಟ್ ಮಾಡಿದ್ದಾರೆ.

‘ಇದು ಭಾರತ ಸರ್ಕಾರ ಮತ್ತು ಭಾರತ ಐ.ಟಿ ಸಚಿವಾಲಯ ಕೈಗೊಂಡ ಉತ್ತಮ ನಿರ್ಧಾರ’ ಎಂದು ಅವರು ಚೀನಾ ಆ್ಯಪ್‌ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.ಭಾರತೀಯರಿಗಾಗಿಯೇ ತಯಾರಿಸಿದ ನಮ್ಮ‘ಚಿಂಗಾರಿ’ಯನ್ನು ಅಪ್ಪಿಕೊಳ್ಳುವಂತೆ ಟಿಕ್‌ಟಾಕ್‌ನ‌ ಎಲ್ಲ ಬಳಕೆದಾರರನ್ನು ಅವರು ಸ್ವಾಗತಿಸುತ್ತಿದ್ದಾರೆ.

ಈ ಮಧ್ಯೆ, ಗೂಗಲ್ ಪ್ಲೇ ಸ್ಟೋರ್‌ ಮತ್ತು ಆಪಲ್ ಆ್ಯಪ್‌ ಸ್ಟೋರ್‌ಗಳಿಂದ ಟಿಕ್‌ಟಾಕ್ ಕಣ್ಮರೆಯಾಗಿದೆ. ಆದರೆ, ನಿಷೇಧಿತ ಇತರ ಕೆಲವು ಅಪ್ಲಿಕೇಶನ್‌ಗಳು ಇನ್ನೂ ಗೂಗಲ್‌ ಸ್ಟೋರ್‌ನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT