ಬುಧವಾರ, ಮಾರ್ಚ್ 3, 2021
19 °C

ಬ್ರಷ್ ಕಟರ್‌ಗೊಂದು ‘ಟ್ರಾಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಲ, ಗದ್ದೆ, ತೋಟಗಳಲ್ಲಿ ಬೆಳೆದ ಕಳೆ ತೆಗೆಯುವುದಕ್ಕಾಗಿ ಕೆಲವು ಕಂಪನಿಗಳು ಮೋಟಾರ್ ಚಾಲಿತ ಕಳೆ ಕೊಚ್ಚುವ ಯಂತ್ರಗಳನ್ನು (ಬ್ರಷ್ ಕಟರ್‌) ಪರಿಚಯಿಸಿವೆ. ಆದರೆ, ಕಳೆ ತೆಗೆಯುವುದು ಯಂತ್ರವಾದರೂ, ‌‌ಅದನ್ನು ನಿರ್ವಹಿಸುವುದು ತುಸು ಶ್ರಮದಾಯಕ.

ಈ ಶ್ರಮವನ್ನು ಕಡಿಮೆಗೊಳಿಸಲು ನೆರವಾಗುವ ಟ್ರಾಲಿಯೊಂದನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಗೌರಿ ಭಾರ್ಗವ ಕಂಪನಿ ಅಭಿವೃದ್ಧಿಪಡಿಸಿದೆ.

ಈ ಟ್ರಾಲಿಯಲ್ಲಿ ಸೈಕಲ್‌ನಲ್ಲಿದ್ದಂತೆ ಎರಡು ಹ್ಯಾಂಡಲ್‌ಗಳಿವೆ. ಎರಡು ಚಕ್ರಗಳನ್ನು ಒಂದು ಆ್ಯಕ್ಸೆಲ್‌ಗೆ ಜೋಡಿಸಿದ್ದಾರೆ. ಚಕ್ರಗಳ ನಡುವೆ ಕಳೆ ತೆಗೆಯುವ ಯಂತ್ರ (ಸೈಡ್‌ ಪ್ಯಾಕ್‌ ಮಾದರಿಯದ್ದು) ಕೂಡಿಸಲು ಜಾಗವಿದೆ. ಕಳೆ ಚೂರು ಕಣ್ಣಿಗೆ ಹಾರದಂತೆ ತಡೆಯಲು ಹ್ಯಾಂಡಲ್‌ಗಳ ನಡುವೆ ಪ್ಲಾಸ್ಟಿಕ್ ಶೀಲ್ಡ್‌ ಇದೆ. ಯಂತ್ರ ಚಾಲನೆ ಮಾಡಿ, ಹ್ಯಾಂಡಲ್ ಹಿಡಿದು ಜಮೀನಿನಲ್ಲಿ ತಳ್ಳುಗಾಡಿಯಂತೆ ತೆಗೆದುಕೊಂಡು ಹೋದರೆ ಆಯಿತು. ಮುಂಭಾಗದ ಕತ್ತರಿ ಕಳೆ ತೆಗೆಯುತ್ತಿರುತ್ತದೆ.

ಹೆಗಲಿಗೆ ಯಂತ್ರ ತೂಗು ಹಾಕಿಕೊಂಡು ಕಳೆ ಕತ್ತರಿಸುವಾಗ ಬೆನ್ನು ನೋಯಿಸುತ್ತದೆ. ಫೇಸ್‌ಷೀಲ್ಡ್‌/ ಕನ್ನಡಕ ಧರಿಸಿ ಕಳೆ ತೆಗೆಯುವಾಗ ಉಸಿರಿನ ಹಬೆ ಗಾಜಿನ ಮೇಲೆ ಹರಡಿಕೊಂಡು, ಮುಂದಿನ ದಾರಿ ಕಾಣದಂತಾಗುವುದುಂಟು. ಆದರೆ ಈ ಸಾಧನದಲ್ಲಿ ಆ ತಾಪತ್ರಯವಿಲ್ಲ.

ಅರವಿಂದ ಮತ್ತು ಗೌರವ್ ಭಾರ್ಗವ ಸೇರಿ ಈ ಸಾಧನ ತಯಾರಿಸಿದ್ದಾರೆ. ‘ಬ್ರಷ್ ಕಟರ್ ಯಂತ್ರ ಇದ್ದರೆ, ಅದಕ್ಕೆ ತಕ್ಕಂತೆ ಈ ಸಾಧನವನ್ನು ರೂಪಿಸಿಕೊಡುತ್ತೇವೆ’ ಎನ್ನುತ್ತಾರೆ ಅರವಿಂದ್.

ಈ ಉಪಕರಣ(ಟ್ರಾಲಿ) ದ ಬೆಲೆ ₹3,500. ಸಾಗಾಟ ವೆಚ್ಚ ಪ್ರತ್ಯೇಕ. ಹೆಚ್ಚಿನ ಮಾಹಿತಿಗೆ ದೂರವಾಣಿ: 8277009667ಗೆ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು