ಮಂಗಳವಾರ, ಮೇ 26, 2020
27 °C

ಡಾಕ್ಟರ್ಸ್, ನರ್ಸ್, ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ಥ್ಯಾಂಕ್ಯೂ ಎಂದ ಗೂಗಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಣದ ಹಂಗು ತೊರೆದು ಕೋವಿಡ್‌–19 ವಿರುದ್ಧದ ಹೋರಾಟದಲ್ಲಿರುವ ವೈದ್ಯರು, ನರ್ಸ್‌ಗಳು ಹಾಗೂ ಮೆಡಿಕಲ್‌ ಸಿಬ್ಬಂದಿಗಳಿಗೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.

ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕಿತರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ಗೂಗಲ್ ಸಂಸ್ಥೆ ಆನಿಮೇಟೆಡ್‌ ಡೂಡಲ್‌ನಲ್ಲಿ ಹೃದಯದ ಎಮೋಜಿ ಮೂಲಕ ಧನ್ಯವಾದಗಳನ್ನು ಅರ್ಪಿಸಿದೆ.

ಕೊವೀಡ್‌–19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆಗಳನ್ನು ಅರ್ಪಿಸುವ ಡೂಡಲ್‌ ಸರಣಿಯನ್ನು ಪ್ರಾರಂಭಿಸಲಾಗಿದೆ ಎಂದು ಗೂಗಲ್‌ ಸಂಸ್ಥೆ ತಿಳಿಸಿದೆ.

ಡೂಡಲ್‌ ಮೇಲೆ ಮೌಸ್‌ ಪಾಯಿಂಟ್‌ ಇಟ್ಟರೆ, ಥ್ಯಾಂಕ್ಯೂ ಎಂಬ ಸಂದೇಶ ಕಾಣುತ್ತದೆ. ಅದರಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಎಲ್ಲ ಆರೋಗ್ಯ ಸಿಬ್ಬಂದಿಗೆ ಥ್ಯಾಂಕ್ಯೂ ಎಂಬ ಮೆಸೇಜ್‌ ಗೋಚರಿಸುತ್ತದೆ

ಈ ಡೂಡಲ್‌ ಸರಣಿಯಲ್ಲಿ ರೈತರು ಮತ್ತು ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಡೆಲಿವರಿ ಬಾಯ್‌ಗಳಿಗೆ ಗೌರವ ಸಲ್ಲಿಸುವುದಾಗಿ ಗೂಗಲ್‌ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು