ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple: ಸ್ಮಾರ್ಟ್‌ಫೋನ್‌ಗಳಿಗೆ 6G ತಂತ್ರಜ್ಞಾನ ಪರಿಚಯಿಸಲು ಮುಂದಾದ ಆ್ಯಪಲ್

Last Updated 19 ಫೆಬ್ರುವರಿ 2021, 8:16 IST
ಅಕ್ಷರ ಗಾತ್ರ

ಬೆಂಗಳೂರು: ಕುಪರ್ಟಿನೊ ಮೂಲದ ಟೆಕ್ ಕಂಪನಿ ಆ್ಯಪಲ್, ವೈರ್‌ಲೆಸ್ ಸಿಸ್ಟಂ ರಿಸರ್ಚ್ ಇಂಜಿನಿಯರ್ಸ್ ನೇಮಕಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ 6G ತಂತ್ರಜ್ಞಾನವನ್ನು ಪರಿಚಯಿಸಲಿದೆ.

ನೆಟ್‌ವರ್ಕ್ ಮತ್ತು ವೈರ್‌ಲೆಸ್ ತಂತ್ರಜ್ಞಾನದಲ್ಲಿ ಪರಿಣತ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ, ಮಾಹಿತಿ ಮತ್ತು ಸಂಹವನ ತಂತ್ರಜ್ಞಾನ ಕ್ಚೇತ್ರದಲ್ಲಿ ಗ್ರಾಹಕರಿಗೆ ಇನ್ನಷ್ಟು ಆಕರ್ಷಕ ಆ್ಯಪಲ್ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ನಿಮಗೆ ಪರಿಣತಿ ಮತ್ತು ಉತ್ಸಾಹವಿದ್ದರೆ, ಅರ್ಜಿ ಸಲ್ಲಿಸಬಹುದು ಎಂದು ಆ್ಯಪಲ್ ಉದ್ಯೋಗದ ಕುರಿತ ಪೋಸ್ಟ್ ಹೇಳಿದೆ.

ಜಾಗತಿಕವಾಗಿ 5G ತಂತ್ರಜ್ಞಾನ ಕಳೆದ ಎರಡು ವರ್ಷಗಳಿಂದಷ್ಟೇ ಸದ್ದು ಮಾಡುತ್ತಿದೆ. ಅಲ್ಲದೆ, ಪ್ರಸ್ತುತ 5G ಮೊಬೈಲ್ ಮತ್ತು ಇತರ ಡಿವೈಸ್‌ಗಳು 5Gbps ನಿಂದ 10Gbps ವರೆಗೆ ವೇಗದ ಇಂಟರ್‌ನೆಟ್ ಒದಗಿಸುತ್ತಿದೆ. ಜತೆಗೆ ಆ್ಯಪಲ್ ಇತ್ತೀಚೆಗಷ್ಟೇ 5G ತಂತ್ರಜ್ಞಾನ ಬೆಂಬಲಿತ ಐಫೋನ್ ಸರಣಿ ಬಿಡುಗಡೆ ಮಾಡಿತ್ತು.

ಅದರ ಬೆನ್ನಲ್ಲೇ ಆ್ಯಪಲ್ ಹೊಸ ಜಾಬ್ ಪೋಸ್ಟಿಂಗ್ ಮಾಡಿರುವುದು ಮುಂದೆ 5G ಮತ್ತು 6G ತಂತ್ರಜ್ಞಾನ ಅಳವಡಿಸಲು, ತನ್ನದೇ ಸ್ವಂತ ಚಿಪ್ ಅಭಿವೃದ್ಧಿಪಡಿಸಲು ಮುಂದಾಗಿದೆ ಎನ್ನಲಾಗಿದೆ.

ಅದಕ್ಕೆ ಪೂರಕವಾಗಿ ಆ್ಯಪಲ್, ಕ್ವಾಲ್ಕಂ ಜತೆಗಿನ ಚಿಪ್ ಮತ್ತು ಮೋಡೆಮ್ ಪೂರೈಕೆ ಒಪ್ಪಂದವನ್ನು ಸ್ಥಗಿತಗೊಳಿಸಿದ್ದು, ಇಂಟೆಲ್ ಜತೆ ಸ್ಮಾರ್ಟ್‌ಫೋನ್ ಮೋಡೆಮ್ ಉದ್ಯಮದಲ್ಲಿ ಹೂಡಿಕೆ ಮಾಡಿದೆ. ಜತೆಗೆ 17,000ಕ್ಕೂ ಅಧಿಕ ವೈರ್‌ಲೆಸ್ ಟೆಕ್ನಾಲಜಿ ಪೇಟೆಂಟ್‌ಗಳನ್ನು ತನ್ನದಾಗಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT