ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Facebook AI: ಕೋವಿಡ್-19 ಪತ್ತೆಗೆ ವಿಶೇಷ ತಂತ್ರಜ್ಞಾನ ಪರಿಚಯಿಸಿದ ಫೇಸ್‌ಬುಕ್

Last Updated 19 ಜನವರಿ 2021, 9:58 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳ ಪೈಕಿ ಜನಪ್ರಿಯ ಸಂಸ್ಥೆ ಫೇಸ್‌ಬುಕ್, ಕೋವಿಡ್-19 ಲಕ್ಷಣ ಪತ್ತೆಹಚ್ಚಲು ಮತ್ತು ಚಿಕಿತ್ಸೆಯ ಅಗತ್ಯತೆ ತಿಳಿಯಲು ನೆರವಾಗುವಂತೆ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಹೊಸ ಸಂಶೋಧನೆ ಕೈಗೊಂಡಿದೆ. ಈ ಕುರಿತು ಫೇಸ್‌ಬುಕ್ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದ್ದು, ಫೇಸ್‌ಬುಕ್‌ನ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್ ‘(ಎಐ) ತಂಡ ಈ ಸಂಶೋಧನೆ ಕೈಗೊಂಡಿದೆ.

ರೋಗ ಲಕ್ಷಣ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯನ್ನು ತ್ವರಿತವಾಗಿ ನೀಡಬೇಕು ಹಾಗೂ ಕೋವಿಡ್-19 ಹರಡುವಿಕೆಯನ್ನು ತಡೆಯಬೇಕು ಎನ್ನುವ ಉದ್ದೇಶದಿಂದ ಫೇಸ್‌ಬುಕ್ ಎಐ ತಂಡ ಎರಡು ಮಾದರಿಗಳನ್ನು ಅಭಿವೃದ್ಧಿಪಡಿಸಿದೆ. ಒಂದು ಮಾದರಿ, ವ್ಯಕ್ತಿಯ ಎದೆಭಾಗದ ಎಕ್ಸ್-ರೇ ಮತ್ತು ಇನ್ನೊಂದು ಸರಣಿ ಎಕ್ಸ್‌ರೇ ಮೂಲಕ ಕೋವಿಡ್ ಬಾಧಿತ ರೋಗಿಯ ಸ್ಥಿತಿಯನ್ನು ತಿಳಿಸಲಿದೆ. ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಅದನ್ನು ತಿಳಿಯಲು ಅನುಕೂಲವಾಗಲಿದೆ. ಮತ್ತೊಂದು ಮಾದರಿಯಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿದ್ದಲ್ಲಿ, ಅದನ್ನು ತಿಳಿಸುತ್ತದೆ.

ಹೊಸ ಸಂಶೋಧನೆ, ಕೋವಿಡ್ ರೋಗ ಪತ್ತೆಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಅಲ್ಲದೆ, ‘ನ್ಯೂಯಾರ್ಕ್ ಯೂನಿವರ್ಸಿಟಿ ಲಾಂಗೂನ್ ಹೆಲ್ತ್ ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಯುನಿಟ್ ಮತ್ತು ರೇಡಿಯಾಲಜಿ ವಿಭಾಗ’ ಸಹಯೋಗದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿದೆ.

ಫೇಸ್‌ಬುಕ್ ಅಭಿವೃದ್ಧಿಪಡಿಸಿರುವ ಎಐ ಆಧಾರಿತ ಮಾದರಿ, ರೋಗಿಗೆ ಚಿಕಿತ್ಸೆ ಮತ್ತು ತೀವ್ರ ನಿಗಾ ಅಗತ್ಯವಿದ್ದಲ್ಲಿ ಅದನ್ನು ನಾಲ್ಕು ದಿನ ಮುಂಚಿತವಾಗಿ ಪತ್ತೆಹಚ್ಚುವಲ್ಲಿ ಸಹಕರಿಸಿದ್ದು, ಮನುಷ್ಯರಿಗಿಂತ ಹೆಚ್ಚು ನಿಖರ ಮತ್ತು ಸ್ಪಷ್ಟವಾಗಿ ಅಂದಾಜಿಸುವಲ್ಲಿ ಸಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT