ಮಂಗಳವಾರ, ಆಗಸ್ಟ್ 3, 2021
23 °C

ನಿಷೇಧಿತ 59 ಆ್ಯಪ್‌ಗಳಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ತಾತ್ಕಾಲಿಕ ನಿರ್ಬಂಧ

ಪಿಟಿಐ Updated:

ಅಕ್ಷರ ಗಾತ್ರ : | |

ಚೀನಾ ಮೂಲದ ಆ್ಯಪ್‌ಗಳ ಬಳಕೆ ನಿಲ್ಲಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ–ಎಫ್‌ಪಿ ಸಂಗ್ರಹ ಚಿತ್ರ

ನವದೆಹಲಿ: ಭಾರತ ಸರ್ಕಾರ ನಿಷೇಧಿಸಿರುವ 59 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿರುವುದಾಗಿ ಗೂಗಲ್‌ ಗುರುವಾರ ಹೇಳಿದೆ. ಸರ್ಕಾರ ಆ್ಯಪ್‌ಗಳನ್ನು ನಿಷೇಧಿಸಿ ಆದೇಶೀಸಿದ್ದರೂ, ನಿಗದಿತ ಆ್ಯಪ್‌ಗಳಲ್ಲಿ ಕೆಲವು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಿತ್ತು.

'ಭಾರತ ಸರ್ಕಾರ ಆ್ಯಪ್‌ಗಳ ನಿಷೇಧದ ಬಗ್ಗೆ ನೀಡಿರುವ ಆದೇಶಗಳನ್ನು ಪರಿಶೀಲಿಸುತ್ತಿದ್ದು, ಭಾರತದಲ್ಲಿ ಪ್ಲೇ ಸ್ಟೋರ್‌ನಲ್ಲಿ ನಿಗದಿತ ಆ್ಯಪ್‌ಗಳನ್ನು ತಾತ್ಕಾಲಿವಾಗಿ ನಿರ್ಬಂಧಿಸುವ ಜೊತೆಗೆ ಆ್ಯಪ್‌ ಡೆವಲಪರ್‌ಗಳಿಗೆ ಸೂಚನೆ ನೀಡಲಾಗಿದೆ' ಎಂದು ಗೂಗಲ್‌ ವಕ್ತಾರ ಹೇಳಿದ್ದಾರೆ.

ಗೂಗಲ್‌ ನಿರ್ಬಂಧಿಸಿರುವ ಆ್ಯಪ್‌ಗಳ ವಿವರಗಳನ್ನು ವಕ್ತಾರ ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ: TikTok, ShareIt, CamScanner: ನಿಷೇಧಿತ ಚೀನಾ ಆ್ಯಪ್‌ಗಳಿಗೆ ಪರ್ಯಾಯ ಇಲ್ಲಿದೆ

ಮೂಲಗಳ ಪ್ರಕಾರ, ಸರ್ಕಾರ ನಿಷೇಧಿಸಿರುವ 59 ಆ್ಯಪ್‌ಗಳ ಡೆವಲಪರ್‌ಗಳು ಸ್ವಯಂ ಪ್ರೇರಿತರಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಹಿಂಪಡೆದಿದ್ದಾರೆ.

ದೇಶದ ಸಾರ್ವಭೌಮತೆ, ಭದ್ರತೆಗೆ ಧಕ್ಕೆ ಉಂಟಾಗುತ್ತಿರುವ ಕಾರಣದಿಂದ ಟಿಕ್‌ಟಾಕ್‌, ಯುಸಿ ಬ್ರೌಸರ್‌, ಶೇರ್‌ಇಟ್‌ ಹಾಗೂ ವಿಚ್ಯಾಟ್‌ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸುತ್ತಿರುವುದಾಗಿ ಭಾರತ ಸರ್ಕಾರ ಸೋಮವಾರ ಪ್ರಕಟಿಸಿತು. 

ಇದನ್ನೂ ಓದಿ: ಮೊಬೈಲಿನಲ್ಲಿ TikTok, Shareit ಹಾಗೂ ನಿಷೇಧಿತ ಚೀನಾ ಆ್ಯಪ್‌ಗಳು: ಏನಾಗಲಿವೆ ಅವು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು