5G Network | ಸಾಫ್ಟ್‌ವೇರ್ ಅಪ್‌ಡೇಟ್ ಒದಗಿಸಲು ಸೂಚಿಸಲಿದೆ ಸರ್ಕಾರ

ನವದೆಹಲಿ: ದೇಶದಲ್ಲಿ ಈಗಾಗಲೇ 5G ನೆಟ್‌ವರ್ಕ್ ಅನಾವರಣಗೊಂಡಿದೆ. ಪ್ರಮುಖ ಎಂಟು ನಗರಗಳಲ್ಲಿ ಈಗಾಗಲೇ 5G ನೆಟ್‌ವರ್ಕ್ ಅನ್ನು ಪರಿಚಯಿಸಲಾಗಿದ್ದು, ಮುಂದಿನ ಹಂತದಲ್ಲಿ ಇತರ ನಗರಗಳಿಗೆ ವಿಸ್ತರಿಸಲು ಟೆಲಿಕಾಂ ಕಂಪನಿಗಳು ನಿರ್ಧರಿಸಿವೆ.
ಆದರೆ 5G ನೆಟ್‌ವರ್ಕ್ ಒದಗಿಸಿದ್ದರೂ, 5G ಸ್ಮಾರ್ಟ್‌ಫೋನ್‌ಗಳಿಗೆ ಸೂಕ್ತ ಸಾಫ್ಟ್‌ವೇರ್ ಅಪ್‌ಡೇಟ್ ಲಭ್ಯವಾಗಿಲ್ಲ. 5G ಫೋನ್ ಇದ್ದರೂ, ಅಪ್‌ಡೇಟ್ ಆಗದೆ ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಹೀಗಾಗಿ ಶೀಘ್ರದಲ್ಲೇ ಸಾಫ್ಟ್‌ವೇರ್ ಅಪ್‌ಡೇಟ್ ಒದಗಿಸಿ, 5G ಬಳಸಲು ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಭಾರತಕ್ಕೂ ಬಂತು 5ಜಿ: ಈ ಸೂಪರ್ ಟೆಕ್ನಾಲಜಿ ಬಳಸುವ ವಿಶ್ವದ ಟಾಪ್ 10 ದೇಶಗಳಿವು
ಆ್ಯಪಲ್, ಸ್ಯಾಮ್‌ಸಂಗ್ ಸಹಿತ ಪ್ರಮುಖ ಮೊಬೈಲ್ ತಯಾರಿಕ ಕಂಪನಿಗಳ ಪ್ರತಿನಿಧಿಗಳ ಜತೆ ಬುಧವಾರ ಸರ್ಕಾರ ಸಭೆ ನಡೆಸಲಿದೆ. ಈ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳ ಅಧಿಕಾರಿಗಳೂ ಉಪಸ್ಥಿತರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
5G Service: ನಿಮ್ಮ ಸ್ಮಾರ್ಟ್ಫೋನ್ನಲ್ಲಿ 5G ಬಳಸುವುದು ಹೇಗೆ?
ಹೊಸದಾಗಿ ಬಿಡುಗಡೆಯಾದ ಫೋನ್‌ಗಳಲ್ಲಿ ಹಾರ್ಡ್‌ವೇರ್ ಬೆಂಬಲವಿದ್ದರೂ, ಸಾಫ್ಟ್‌ವೇರ್ ಅಪ್‌ಗ್ರೇಡ್ ಇಲ್ಲದೆ, 5G ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೀಘ್ರದಲ್ಲೇ ಹೊಸ ಅಪ್‌ಡೇಟ್ ಒದಗಿಸುವಂತೆ ಸರ್ಕಾರ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಗಳನ್ನು ಒತ್ತಾಯಿಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.