ಭಾನುವಾರ, ಆಗಸ್ಟ್ 14, 2022
24 °C

ಇನ್‌ಸ್ಟಾಗ್ರಾಂನಲ್ಲಿ ಈಗ ಡೆಸ್ಕ್‌ಟಾಪ್‌ ಮೂಲಕವೂ ಫೋಟೊ ಪೋಸ್ಟ್ ಮಾಡಬಹುದು.. ಹೇಗೆ?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Instagram AFP Photo

ಬೆಂಗಳೂರು: ಫೋಟೊ ಮತ್ತು ಕಿರು ವಿಡಿಯೊ, ರೀಲ್ಸ್ ಹಂಚಿಕೊಳ್ಳುವ ಜನಪ್ರಿಯ ವೇದಿಕೆ ಇನ್‌ಸ್ಟಾಗ್ರಾಂ, ಈಗ ಡೆಸ್ಕ್‌ಟಾಪ್ ಅಪ್‌ಲೋಡಿಂಗ್ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಿದೆ.

ಈಗಾಗಲೇ ಡೆಸ್ಕ್‌ಟಾಪ್‌ನಲ್ಲಿ ಹೊಸ ಫೀಚರ್ ಅನ್ನು ಹೆಚ್ಚಿನ ಸಂಖ್ಯೆಯ ಬಳಕೆದಾರರಿಗೆ ಒದಗಿಸಿದ್ದೇವೆ ಎಂದು ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಹೇಳಿದೆ.

ಬಹಳಷ್ಟು ಸಂಖ್ಯೆಯ ಜನರು ಡೆಸ್ಕ್‌ಟಾಪ್ ಮೂಲಕ ಇನ್‌ಸ್ಟಾಗ್ರಾಂ ಬಳಕೆ ಮಾಡುತ್ತಿದ್ದಾರೆ. ಅವರಿಗೆ ಅನುಕೂಲವಾಗಲಿ ಎಂದು ಡೆಸ್ಕ್‌ಟಾಪ್ ಅಪ್‌ಲೋಡಿಂಗ್ ಪರಿಚಯಿಸಲಾಗಿದೆ. 

ಪ್ರಸ್ತುತ ಮ್ಯಾಕ್ ಓಎಸ್ ಕಂಪ್ಯೂಟರ್‌ಗಳಲ್ಲಿ ಸಫಾರಿ ಮತ್ತು ಗೂಗಲ್ ಕ್ರೋಮ್ ಬ್ರೌಸರ್‌ಗಳಲ್ಲಿ ಹೊಸ ಫೀಚರ್ ಬಳಕೆದಾರರಿಗೆ ದೊರೆಯುತ್ತಿದೆ. ಶೀಘ್ರದಲ್ಲೇ ಎಲ್ಲ ವಿಂಡೋಸ್ ಕಂಪ್ಯೂಟರ್ ಬಳಕೆದಾರರಿಗೂ ಲಭ್ಯವಾಗಲಿದೆ.


ಡೆಸ್ಕ್‌ಟಾಪ್ ಅಪ್‌ಲೋಡಿಂಗ್ ಆಯ್ಕೆ

ಡೆಸ್ಕ್‌ಟಾಪ್‌ನಲ್ಲಿ ಇನ್‌ಸ್ಟಾಗ್ರಾಂ ಫೋಟೊ ಪೋಸ್ಟ್ ಮಾಡುವುದು ಹೇಗೆ?

ಬ್ರೌಸರ್‌ನಲ್ಲಿ ಇನ್‌ಸ್ಟಾಗ್ರಾಂ ತೆರೆಯಿರಿ.

ಪುಟದ ಮೇಲ್ಭಾದಲ್ಲಿ ಕಾಣಸಿಗುವ + ಐಕಾನ್ ಒತ್ತಿ.

ಅಲ್ಲಿ, ಸೆಲೆಕ್ಟ್ ಫ್ರಮ್ ಕಂಪ್ಯೂಟರ್ ಆಯ್ಕೆ ಮಾಡಿ.

ನಂತರ, ಫೋಟೊ/ವಿಡಿಯೊ ಆಯ್ಕೆ ಮಾಡಿ.


ಫಿಲ್ಟರ್, ಫೋಟೊ ಎಡಿಟಿಂಗ್ ಆಯ್ಕೆ

ನಿಮ್ಮ ಫೋಟೊಗೆ ಸೂಕ್ತವಾದ ಫ್ರೇಮ್ ಆಯ್ಕೆ ಮಾಡಿ. ಚೌಕಾಕಾರದ ಚಿತ್ರವಾದರೆ (1:1), ಪೋಟ್ರೇಟ್ ಮೋಡ್ (4:5) ಮತ್ತು ಲ್ಯಾಂಡ್‌ಸ್ಕೇಪ್ ಆಗಿದ್ದರೆ (16:9)

ನಂತರ, ನೆಕ್ಸ್ಟ್ ಕೊಡಿ, ಅಲ್ಲಿನ ಫಿಲ್ಟರ್, ಫೋಟೊ ಎಡಿಟಿಂಗ್ ಆಯ್ಕೆ ಕಾಣಿಸುತ್ತದೆ.

ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ಇರುವಂತೆಯೇ, ಅಡಿಬರಹ, ಲೊಕೇಷನ್, ಟ್ಯಾಗ್ ವಿವರ ನೀಡಬಹುದು.

ನಂತರ ಶೇರ್ ಮಾಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು