ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿಕಂಪ್ಯೂಟರ್ ಬಳಕೆದಾರರಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಎಚ್‌ಪಿ ಇಂಡಿಯಾ ಕಂಪನಿ ಉಚಿತವಾಗಿ ರಿಮೋಟ್ ನೆರವು ನೀಡಲು ಸಹಾಯವಾಣಿ ಆರಂಭಿಸಿದೆ.

ವೈಯಕ್ತಿಕವಾಗಿ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಡೆಸುತ್ತಿರುವವರು ಕಂಪ್ಯೂಟರ್ ಬಳಸುವ ವೇಳೆಯಲ್ಲಿ ಸಮಸ್ಯೆಗೆ ಸಿಲುಕಿದರೆ, ಈ ರಿಮೋಟ್ ಸಹಾಯವಾಣಿ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದು ಸೀಮಿತ ಅವಧಿಯ ಉಚಿತ ಹೆಲ್ಪ್ ಡೆಸ್ಕ್.

ಎಲ್ಲ ಬ್ರಾಂಡ್‌ಗಳಿಗೂ ಅನ್ವಯ

ಇದು ಎಲ್ಲಾ ಬ್ರ್ಯಾಂಡ್‌ಗಳ ಪರ್ಸನಲ್ ಕಂಪ್ಯೂಟರ್‌ಗಳ ಆಪರೇಷನಲ್ ಸಮಸ್ಯೆಗಳನ್ನು ಪರಿಹರಿಸಲು ಈ ಸಹಾಯವಾಣಿ ನೆರವಾಗಲಿದೆ. ಲಾಕ್‌ಡೌನ್‌ನಿಂದಾಗಿ ವರ್ಕ್ ಫ್ರಂ ಹೋಮ್ (ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವ) ನಲ್ಲಿದ್ದು ಕಂಪ್ಯೂಟರ್ ಬಳಸುವವರಿಗೆ ಐಟಿ ಸಂಬಂಧಿತ ಸವಾಲುಗಳು ಎದುರಾಗುತ್ತವೆ. ಇಂಥ ವೇಳೆ ಸಹಾಯವಾಣಿಗೆ ಸಂಪರ್ಕಿಸಿ, ರಿಮೋಟ್ ನೆರವಿ ನೊಂದಿಗೆ ಈ ಸವಾಲುಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ನಿಯಮಿತ ಬೆಂಬಲ ಮತ್ತು ಸರ್ವೀಸ್ ಚಾನೆಲ್‌ಗಳ ಅಲಭ್ಯತೆಯ ಹಿನ್ನೆಲೆಯಲ್ಲಿ ಎಚ್ ಪಿ ಈ ಸೇವೆಯನ್ನು ಎಲ್ಲಾ ಬ್ರ್ಯಾಂಡ್‌ಗಳ ಪಿಸಿ ಬಳಕೆದಾರರಿಗೆ ನೀಡಲಿದೆ.

ವೈಯಕ್ತಿಕ ಕಂಪ್ಯೂಟರ್ ಬಳಕೆದಾರರಿಗೆ ಈ ಸೇವೆ ಮೇ 31ರವರೆಗೆ ಸಂಪೂರ್ಣ ಉಚಿತ. ಇನ್ನು ಸಣ್ಣ ಮತ್ತು ಮಧ್ಯಮ ವ್ಯವಹಾರಗಳ (ಎಸ್ ಎಂ ಬಿ) ಬಳಕೆದಾರರಿಗೆ ನೋಂದಣಿ ಮಾಡಿಕೊಂಡ ದಿನದಿಂದ ಒಂದು ತಿಂಗಳವರೆಗೆ ಈ ಸೇವೆ ಲಭ್ಯವಾಗಲಿದೆ.

ತಜ್ಞರಿಂದ ನೆರವು

ಹೆಲ್ಪ್ ಡೆಸ್ಕ್‌ನಲ್ಲಿ ಎಚ್ ಪಿ ಪ್ರಮಾಣೀಕೃತ ತಾಂತ್ರಿಕ ಸಿಬ್ಬಂದಿ ಇರಲಿದ್ದು, ಇವರು ರಿಮೋಟ್ ಮೂಲಕ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಇವರೆಲ್ಲ ಮನೆಯಿಂದಲೇ ಕೆಲಸ ಮಾಡುತ್ತಾರೆ. ಎಚ್‌ಪಿ ಕಂಪನಿ ಅಂಥ ತಂತ್ರಜ್ಞಾನವನ್ನು ತಮ್ಮ ಏಜೆಂಟರಿಗೆ ಒದಗಿಸಿದೆ. ಸಾಮಾನ್ಯ ಕಾರ್ಯದಕ್ಷತೆ, ಸೆಕ್ಯೂರಿಟಿ ಕಾನ್ಫಿಗರೇಷನ್, ಕನೆಕ್ಟಿವಿಟಿ, ಆಪರೇಟಿಂಗ್ ಸಿಸ್ಟಂ, ಮೀಡಿಯಾ ಸಪೋರ್ಟ್, ಮೊಬಿಲಿಟಿ, ಸಾಫ್ಟ್‌ವೇರ್ ಆಪರೇಷನ್ ಮತ್ತು ಇನ್‌ಸ್ಟಾಲೇಷನ್ ಸೇರಿದಂತೆ ಇನ್ನೂ ಹಲವು ಸೇವೆಗಳನ್ನು ನೀಡಲಿದ್ದಾರೆ.

‘ಪ್ರಸ್ತುತ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಅಧಿಕವಾಗಿದೆ. ಇಂಥವರಿಗೆ ಈ ಸಂದರ್ಭದಲ್ಲಿ ನಿರಂತರವಾಗಿ ಸೇವೆ ಒದಗಿಸುವುದು ಹೆಲ್ಪ್‌ಡೆಸ್ಕ್‌ನ ಉದ್ದೇಶವಾಗಿದೆ. ಕಂಪ್ಯೂಟರ್ ಕ್ಷೇತ್ರದ ಮುಂಚೂಣಿ ಕಂಪನಿಯಾಗಿ ಈ ಸಂದರ್ಭದಲ್ಲಿ ನೆರವಾಗುವುದು ನಮ್ಮ ಕರ್ತವ್ಯ ’ ಎಂದುಬಾಂಗ್ಲಾದೇಶ ಮತ್ತು ಶ್ರೀಲಂಕಾದ ಎಚ್ ಪಿ ಇಂಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿನಯ್ ಅವಸ್ತಿ ಹೇಳಿದ್ದಾರೆ.

ರಿಮೋಟ್ ಸರ್ವೀಸ್ ಪಡೆಯುವುದು ಹೇಗೆ ?

ಬ್ಯುಸಿನೆಸ್ ಬಳಕೆದಾರರು:hpindiaservices@hp.comಗೆ ಇಮೇಲ್ ಮಾಡುವ ಮೂಲಕ ನೋಂದಣಿ ಮಾಡಿಕೊಂಡು, ಮಾಹಿತಿಯನ್ನು ಪಡೆಯಬಹುದಾಗಿದೆ.

ವೈಯಕ್ತಿಕ ಬಳಕೆದಾರರು : ಟೋಲ್ ದೂರವಾಣಿ ಸಂಖ್ಯೆ1800 258 7140ಗೆ ಕರೆ ಮಾಡಿ ನೋಂದಣಿ ಮಾಡಿಕೊಂಡು, ಮಾಹಿತಿಯನ್ನು ಪಡೆಯಬಹುದು.hpindiaservices@hp.comಮೂಲಕ ಸಾಮಾನ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.