ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೊಸಾಫ್ಟ್ ಬಿಂಗ್‌‌ ಕೋವಿಡ್–19 ಟ್ರ್ಯಾಕರ್: ಭಾರತೀಯರಿಗಾಗಿ ಹೊಸ ಆಯ್ಕೆಗಳು

ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸಾಂಕ್ರಾಮಿಕ ಕೊರೊನಾ ವೈರಸ್‌ ಸೋಂಕು ಕುರಿತಾದ ಇತ್ತೀಚಿನ ಸುದ್ದಿಗಳನ್ನು ತಿಳಿಯಲು ಸಹಕಾರಿಯಾಗುವಂತೆ ಮೈಕ್ರೊಸಾಫ್ಟ್‌ ಬಿಂಗ್‌ನ ಕೋವಿಡ್‌–19 ಟ್ರ್ಯಾಕರ್‌ನಲ್ಲಿ ಹೊಸ ಸೌಲಭ್ಯಗಳನ್ನು ಹೊರತರಲಾಗಿದೆ.

ಸ್ವಯಂ ನಿರ್ಣಯಕ್ಕೆ ಅಪೊಲೊ ಆಸ್ಪತ್ರೆಗಳ ಬಾಟ್‌ನೊಂದಿಗೆ ಸಂಘಟನೆ ಮತ್ತು ಪ್ರಖ್ಯಾತ ಆರೋಗ್ಯ ಸೇವಾ ಸಂಸ್ಥೆಗಳಿಂದ ಟೆಲಿಮೆಡಿಸಿನ್ ಸೌಲಭಕ್ಕಾಗಿ ಒಂದು ಕೇಂದ್ರವೂ ಸೇರಿದೆ. ದೇಶದ ಜನರಿಗೆ ಈ ಪಿಡುಗಿನ ಬಗ್ಗೆ ಪ್ರಮುಖ ಮಾಹಿತಿಗಳನ್ನು ಸ್ಥಳೀಯ ಭಾಷೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಟ್ರ್ಯಾಕರ್‌ ಪ್ರಸ್ತುತ, ಒಂಬತ್ತು ಭಾರತೀಯ ಭಾಷೆಗಳಲ್ಲಿ ಮಾಹಿತಿ ಒದಗಿಸುತ್ತದೆ.

ಬಿಂಗ್ ಕೋವಿಡ್–19 ಟ್ರ್ಯಾಕರ್‌ ಈಗ ಸುದ್ದಿಯ ಮತ್ತು ಅಧಿಕೃತ ಸರ್ಕಾರಿ ಮಾಹಿತಿಯ ಒಂದು ಏಕೀಕೃತ, ವಿಶ್ವಾಸನೀಯ ಮೂಲವಾಗಿದೆ. ವಿಶ್ವಮಟ್ಟ ಮತ್ತು ಭಾರತದಲ್ಲಿ (www.bing.com/covid/local/india) ಸ್ಥಳೀಯ ಮಟ್ಟದಲ್ಲಿ ಕೊರೊನಾವೈರಸ್ ಸೋಂಕುಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಬಳಕೆದಾರರು ಈಗ ತಮ್ಮ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು, ಚೇತರಿಕ ಹಾಗೂ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ, ಅಂಕಿ–ಅಂಶಗಳನ್ನು ಪಡೆಯಬಹುದು.

ಒಂದೇ ಜಾಗದಲ್ಲಿ ತಮ್ಮ ಪ್ರೀತಿಪಾತ್ರರು ಇರುವ ಸ್ಥಳಗಳಲ್ಲಿ ಅಂಕಿ–ಅಂಶಗಳ ಅಪ್‌ಡೇಟ್‌ ನೋಡಲು ಆ ಸ್ಥಳಗಳನ್ನು ಸೇವ್ ಮಾಡಬಹುದು. ಟ್ರ್ಯಾಕರ್‌, ಸಹಾಯವಾಣಿ ಸಂಖ್ಯೆಗಳು ಮತ್ತು ಪರೀಕ್ಷೆ ಕೇಂದ್ರಗಳ ಬಗ್ಗೆ, ಮಾರ್ಗಸೂಚಿಗಳನ್ನು ಹಾಗೂ ಸಲಹೆಗಳ ವಿಶ್ವಾಸನೀಯ ಮೂಲವಾಗಿ ನೈಜ ಮಾಹಿತಿಯನ್ನು ಒದಗಿಸುತ್ತಿದೆ.

ಇದರಲ್ಲಿ ಭಾರತ ಸರ್ಕಾರ, ಐಸಿಎಂಆರ್ ಮಾಹಿತಿಗಳೂ ಸೇರಿದೆ. ಇದಲ್ಲದೆ, ಬಳಕೆದಾರರು ಇತ್ತೀಚಿನ ಸುದ್ದಿಗಳನ್ನೂ ಪಡೆಯಬಹುದು. ರಾಷ್ಟ್ರೀಯ ಮತ್ತು ಸ್ಥಳೀಯ ಸುದ್ದಿಗಳು, ಅಲ್ಲಿನ ಪರಿಸ್ಥಿತಿ; ಅಗ್ರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳಿಂದ ಲೈವ್ ಫೀಡ್‌ಗಳನ್ನೂ ಪಡೆಯಬಹುದು.

ಎಐ ಆಧಾರಿತ ಅಪೊಲೊ ಆಸ್ಪತ್ರೆಗಳ ಬಾಟ್, ಕೋವಿಡ್–19 ಸಂಭಾವ್ಯ ಲಕ್ಷಣಗಳು ಮತ್ತು ಅಪಾಯದ ಮಟ್ಟಗಳ ಬಗ್ಗೆ ಸ್ವಯಂ ನಿರ್ಣಯ ಮಾಡಲು ಸಾಧ್ಯವಾಗಿಸುತ್ತದೆ. ಇದು 4 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಟೆಲಿಮೆಡಿಸಿನ್ ನೆರವಿನ ಕೇಂದ್ರವು ಭಾರತದ ಅಗ್ರ ಸೇವಾದಾರರಾದ ಅಪೊಲೊ ಆಸ್ಪತ್ರೆಗಳು, ಪ್ರಾಕ್ಟೊ, 1mg, ಮತ್ತು ಎಂಫೈನ್‌ಗಳಲ್ಲಿ ಆನ್‌ಲೈನ್‌ ಸಮಾಲೋಚನೆಯ ಸೌಲಭ್ಯವನ್ನು ಒದಗಿಸುತ್ತದೆ.

ಟ್ರ್ಯಾಕರ್‌ ಈಗ ಹಿಂದಿ, ಬೆಂಗಾಲಿ, ಪಂಜಾಬಿ, ತಮಿಳು, ತೆಲುಗು, ಗುಜರಾತಿ, ಮರಾಠಿ, ಮಲಯಾಳಂ ಹಾಗೂ ಕನ್ನಡದಲ್ಲಿ ಲಭ್ಯವಿದೆ. ಪುಟದ ಮೇಲ್ಭಾಗದಲ್ಲಿ ಐಕಾನ್ ಒಂದು ಸರಳವಾದ ಡ್ರಾಪ್ ಡೌನ್ ಮೆನು ನೀಡುತ್ತದೆ. ಅಲ್ಲಿ ಭಾಷೆ ಬದಲಿಸುವ ಆಯ್ಕೆ ಇದೆ.

ಈ ಸೌಲಭ್ಯಗಳು Bing.comನಲ್ಲೂ ಲಭ್ಯವಿದೆ.

1990ರಲ್ಲಿ ಮೈಕ್ರೊಸಾಫ್ಟ್ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಿತು. ಇಂದು, ಭಾರತದಲ್ಲಿ ಮೈಕ್ರೊಸಾಫ್ಟ್ 11,000 ಉದ್ಯೋಗಿಗಳನ್ನು ಹೊಂದಿದೆ. ಇವರು ದೇಶಾದ 11 ನಗರಗಳಲ್ಲಿ ಮಾರಾಟ ಮತ್ತು ವ್ಯವಹಾರ, ಸಂಶೋಧನೆ, ಅಭಿವೃದ್ಧಿ ಹಾಗೂ ಗ್ರಾಹಕ ಸೇವೆಗಳಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT