ಬುಧವಾರ, ಏಪ್ರಿಲ್ 21, 2021
23 °C

ಸ್ಮಾರ್ಟ್‌ಫೋನ್‌ನಲ್ಲಿ ಮಲ್ಟಿ–ಕ್ಯಾಮೆರಾ ಶೂಟಿಂಗ್‌ಗಾಗಿ ಫೈರ್‌ವರ್ಕ್‌ನ ಹೊಸ ಟೂಲ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಶಾರ್ಟ್‌ ವಿಡಿಯೊ ಮೇಕಿಂಗ್‌ ಆ್ಯಪ್‌

ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಬಾರಿಗೆ ಸೆಲ್ಫಿ ಕ್ಯಾಮೆರಾ ಮತ್ತು ಹಿಂಬದಿಯ ಕ್ಯಾಮೆರಾ ಎರಡರ ಮೂಲಕವೂ ವಿಡಿಯೊ ರೆಕಾರ್ಡ್‌ ಮಾಡಲು ಅನುವಾಗುವ ಹೊಸ ಟೂಲ್‌ 'ಜೆಮಿ' (Gemi) ಬಿಡುಗಡೆ ಮಾಡಿರುವುದಾಗಿ 'ಫೈರ್‌ವರ್ಕ್‌' ಆ್ಯಪ್‌ ಪ್ರಕಟಿಸಿದೆ. 

ಚಿಕ್ಕ ವಿಡಿಯೊಗಳನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಅಥವಾ ಅಂಥ ವಿಡಿಯೊಗಳಿಗಾಗಿಯೇ ರೂಪಿಸಲಾಗಿರುವ ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ಸಾಲು ಸಾಲು ವಿಡಿಯೊಗಳನ್ನು ನೋಡುವುದು ಯುವಜನತೆ ಬೆಳೆಸಿಕೊಂಡಿರುವ ಅಭ್ಯಾಸಗಳಲ್ಲೊಂದು. ಪ್ರತಿಭೆಯ ಅನಾವರಣ, ಕ್ರೀಯಾಶೀಲತೆಗೆ ವೇದಿಕೆಯಾಗಿ ಹಾಗೂ ಮನರಂಜನೆಯ ಮತ್ತೊಂದು ಸಾಧ್ಯತೆಯಾಗಿ ಶಾರ್ಟ್‌ ವಿಡಿಯೊ–ಮೇಕಿಂಗ್‌ ಆ್ಯಪ್‌ಗಳು ಬಳಕೆಯಾಗುತ್ತಿವೆ. ಇಂಥದ್ದೇ ಒಂದು ಆ್ಯಪ್‌ ಫೈರ್‌ವರ್ಕ್‌. ಒಂದೇ ಬಾರಿಗೆ ಹಿಂದಿನ ಮತ್ತು ಮುಂದಿನ ಕ್ಯಾಮೆರಾಗಳು ಕಾರ್ಯನಿರ್ವಹಿಸುವಂತೆ ಮಾಡವ ಜೆಮಿ ಟೂಲ್‌ ಸಹಕಾರಿಯಾಗಲಿದೆ. 

30 ಸೆಕೆಂಡ್‌ನಷ್ಟು ಚಿಕ್ಕ ಅವಧಿಯ ವಿಡಿಯೊಗಳನ್ನು ರೆಕಾರ್ಡ್‌ ಮಾಡುವ ವ್ಲಾಗರ್‌ಗಳಿಗೆ ಈ ಟೂಲ್‌ ಹಲವು ಸಾಧ್ಯತೆಗಳನ್ನು ತೆರೆದುಕೊಡಲಿದೆ. ಎರಡು ಬೇರೆ ಬೇರೆ ಕ್ಯಾಮೆರಾ ಬಳಸುವುದನ್ನು ತಪ್ಪಿಸಬಹುದು ಹಾಗೂ ಒಂದೇ ದೃಶ್ಯದ ಎರಡು ಭಿನ್ನ ಆ್ಯಂಗಲ್‌ಗಳು ಸಿಗುವುದರಿಂದ ವಿಡಿಯೊ ಮೇಕಿಂಗ್‌ ಮತ್ತಷ್ಟು ಸ್ವಾರಸ್ಯ ಹೆಚ್ಚಿಸಿಕೊಳ್ಳಲಿದೆ. 

ಪ್ರಸ್ತುತ ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ಟೂಲ್‌ ಬಿಡುಗಡೆಯಾಗಿದೆ. ಫೈರ್‌ವರ್ಕ್ ಆ್ಯಪ್‌ ಉಚಿತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಐಫೋನ್‌ ಬಳಕೆದಾರರು ಇನ್ನು ಮುಂದೆ ಸ್ಪ್ಲಿಟ್‌ ಸ್ಕ್ರೀನ್‌ ವಿಡಿಯೊ ಚಿತ್ರೀಕರಿಸಬಹುದು. 

ಕ್ಯಾಲಿಫೋರ್ನಿಯಾ ಮೂಲದ ಫೈರ್‌ವರ್ಕ್‌, 30 ಸೆಕೆಂಡ್‌ಗಳಲ್ಲಿ ಮಾಡಬಹುದಾದ ವಿಡಿಯೊಗಳಿಗೆ ಹಲವು ಕ್ರಿಯೇಟರ್‌ಗಳೊಂದಿಗೆ ಮಾತುಕತೆಯಲ್ಲಿದೆ. ಮನರಂಜಿಸುವ ವಿಡಿಯೊಗಳನ್ನು ಹರಿಯಬಿಡುವ ಮೂಲಕ ಮತ್ತಷ್ಟು ಜನರನ್ನು ಸೆಳೆದುಕೊಳ್ಳಲು ಯೋಜನೆ ರೂಪಿಸಿದೆ. ಮುಂಬರುವ ದಿನಗಳಲ್ಲಿ ಭಾರತದ ಬಳಕೆದಾರರಿಗೆ ಇನ್ನಷ್ಟು ಹೊಸ ಟೂಲ್‌ಗಳನ್ನು ಒದಗಿಸುವುದಾಗಿ ಹೇಳಿದೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು