ಸೋಮವಾರ, ಜನವರಿ 18, 2021
15 °C

ಮಾಸ್ಕ್ ಇದ್ದರೂ ಕೆಲಸ ಮಾಡಲಿದೆ ಫೇಸ್ ರೆಕಗ್ನಿಷನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Representative image. Credit: iStockPhoto

ಜಾಗತಿಕವಾಗಿ ಅಪಾರ ಸಮಸ್ಯೆ ಸೃಷ್ಟಿಸಿದ ಕೋವಿಡ್ 19, ಜನರಿಗೆ ಹಲವು ಅಭ್ಯಾಸಗಳನ್ನು ಕೂಡ ಮಾಡಿಸಿದೆ. ಅದರಲ್ಲೂ ಮಾಸ್ಕ್ ‌ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಇಂದು ಸಾಮಾನ್ಯ ಮತ್ತು ಅಗತ್ಯವಾಗಿದೆ. ಆದರೆ ಮಾಸ್ಕ್ ಧರಿಸುವುದರಿಂದ ಹಲವು ಮಂದಿ ಬಳಕೆದಾರರು ತೊಂದರೆ ಕೂಡ ಎದುರಿಸಿದ್ದಾರೆ.

ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಇಂದು ಹಲವು ಕ್ಷೇತ್ರಗಳಲ್ಲಿ ಬಳಕೆಯಲ್ಲಿ ಇರುವುದರಿಂದ ಮತ್ತು ಫೋನ್ ಅನ್ ಲಾಕ್ ಮಾಡಲು ಬಳಸುವುದರಿಂದ ಮಾಸ್ಕ್ ಧರಿಸಿದಾಗ ಅದು ಕೆಲಸ ಮಾಡದೆ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಅದಕ್ಕಾಗಿ ಜಪಾನ್ ಮೂಲದ ಎನ್‌ಇಸಿ ಕಾರ್ಪ್ ಹೊಸ ವ್ಯವಸ್ಥೆ ಪರಿಚಯಿಸಿದೆ.

ಮಾಸ್ಕ್ ಧರಿಸಿದರೂ ಫೇಸ್ ರೆಕಗ್ನಿಷನ್ ಕೆಲಸ ಮಾಡುತ್ತದೆ!

ಜನರು ಮಾಸ್ಕ್ ಧರಿಸಿದ್ದು, ಯಾವುದಾದರೂ ಸಂದರ್ಭ‌ದಲ್ಲಿ ಫೇಸ್ ರೆಕಗ್ನಿಷನ್ ಬಳಸಬೇಕಾಗಿ ಬಂದಲ್ಲಿ, ಮಾಸ್ಕ್ ತೆಗೆಯಬೇಕಾಗಿಲ್ಲ. ಅದರ ಬದಲು, ಮಾಸ್ಕ್ ಧರಿಸಿದ್ದರೂ, ಫೇಸ್ ರೆಕಗ್ನಿಷನ್ ಸುಲಭದಲ್ಲಿ ಕೆಲಸ ಮಾಡಲಿದೆ.

ಜಪಾನ್ ಅಭಿವೃದ್ಧಿಪಡಿಸಿರುವ ಹೊಸ ಫೇಸ್ ರೆಕಗ್ನಿಷನ್ ವ್ಯವಸ್ಥೆ, ಇಂದಿನ ಯುಗದಲ್ಲಿ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸಲಿದೆ ಎಂದು NEC ಸಂಸ್ಥೆಯ ಶಿನ್ಯಾ ತಕಶಿಮಾ ತಿಳಿಸಿದ್ದಾರೆ. ನೂತನ ತಂತ್ರಜ್ಞಾನ, ವ್ಯಕ್ತಿ ಮಾಸ್ಕ್ ಧರಿಸಿದ್ದರೂ, ಅವರ ಮುಖವನ್ನು ಸುಲಭದಲ್ಲಿ ಗುರುತು ಹಿಡಿಯುತ್ತದೆ. ಫೋನ್ ಅನ್ ಲಾಕ್ ಮಾಡುವುದು, ಸೆಕ್ಯುರಿಟಿ ಚೆಕಿಂಗ್, ಸ್ಟೋರ್ ಪೇಮೆಂಟ್ ಗೇಟ್, ಕಚೇರಿಯ ಪ್ರವೇಶ ಮತ್ತು ಉದ್ಯೋಗದ ಸ್ಥಳದಲ್ಲಿ ಸಹಿತ ವಿವಿಧ ಅಗತ್ಯಕ್ಕೆ ತಕ್ಕಂತೆ ನೂತನ ಫೇಸ್ ರಿಕಗ್ನಿಷನ್ ವ್ಯವಸ್ಥೆ ಕೆಲಸ ಮಾಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು