ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸ್ಕೂಲು ಆ್ಯಪ್‌ಗಳಲ್ಲಲ್ವೆ, ಶೈಕ್ಷಣಿಕ ಆ್ಯಪ್‌ ಆಯ್ಕೆ ಹೇಗೆ? ಇಲ್ಲಿದೆ ವಿವರ

Last Updated 7 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಒಂದು ಕಾಲವಿತ್ತು. ಶಿಕ್ಷಕರಾಗಲೀ ವಿದ್ಯಾರ್ಥಿಗಳಾಗಲೀ, ಯಾವುದೇ ವಿಷಯದ ಪಾಠಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಶಾಲೆಯ ಗ್ರಂಥಾಲಯವನ್ನೇ ಸಂಪೂರ್ಣವಾಗಿ ಅವಲಂಬಿಸಬೇಕಿತ್ತು, ಇಲ್ಲವೇ, ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನು ಓದಿ ವಿಷಯ ಸಂಗ್ರಹಣೆ ಮಾಡಬೇಕಿತ್ತು. ಆದರೆ, ಕಳೆದ ಮೂರು ದಶಕಗಳಿಂದೀಚೆಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಅಗಾಧ ಬೆಳವಣಿಗೆಗಳಿಂದಾಗಿ ವಿಷಯ ಸಂಗ್ರಹಣೆ ಅತ್ಯಂತ ಸುಲಭವಾಗಿದೆ. ಅದರಲ್ಲಿಯೂ, ಗಣಕ ಯಂತ್ರಗಳ ಹಾಗೂ ಮೊಬೈಲ್ ಫೋನ್‍ಗಳ ನೆರವಿನಿಂದ ಅಂತರ್ಜಾಲದ ಮೂಲಕ ಬೆರಳ ತುದಿಯಲ್ಲೇ ಅಗತ್ಯ ಮಾಹಿತಿ ಪಡೆಯುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಆಂಡ್ರಾಯ್ಡ್ ಫೋನ್‍ಗಳ, ಟಾಬ್ಲೆಟ್‍ಗಳ ಹಾಗೂ ಐ ಪ್ಯಾಡ್‍ಗಳ ಬಳಕೆ ಪ್ರಾರಂಭವಾದ ಮೇಲೆ, ಅವುಗಳಲ್ಲಿ ವಿಶೇಷವಾಗಿ ರೂಪಿಸಲಾದ ಉಪಯುಕ್ತ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಪದ್ಧತಿ ಜಾರಿಗೆ ಬಂದಿದೆ. ಈ ರೀತಿಯ ತಂತ್ರಾಶಗಳಿಗೆ ’ಅಪ್ಲಿಕೇಷನ್ಸ್’ ಎಂದು ಕರೆಯಲಾಗುತ್ತದೆ. ಸಂಕ್ಷಿಪ್ತವಾಗಿ ಆ್ಯಪ್‌(apps) ಎಂದು ಕರೆಯಲಾಗುವ ಈ ತಂತ್ರಾಂಶಗಳನ್ನು ರೂಪಿಸಿ ನಮ್ಮ ಫೋನ್ ಅಥವಾ ಐ ಪ್ಯಾಡ್‍ಗಳಲ್ಲಿ ಅಳವಡಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಇಂಥ ಆಪ್‍ಗಳ ಬಳಕೆ ಇಂದು ಅನಿವಾರ್ಯ ಎಂಬ ಸ್ಥಿತಿಗೆ ನಾವು ತಲುಪಿದ್ದೇವೆ. ಒಂದು ಅಂದಾಜಿನ ಪ್ರಕಾರ, ಇಂದು ಲಭ್ಯವಿರುವ ಆಪ್‍ಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಆಪ್‍ಗಳು ಬಳಕೆಯಲ್ಲಿರುವುದು ಶಿಕ್ಷಣ ಕ್ಷೇತ್ರದಲ್ಲಿ! ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾದ ಐದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಶೈಕ್ಷಣಿಕ ಆಪ್‍ಗಳು ಇಂದು ಲಭ್ಯವಿವೆ !

ವಿದ್ಯಾರ್ಥಿಗಳು ಕೇಳಿಸಿಕೊಳ್ಳುವ, ನೋಡುವ, ಮಾತನಾಡುವ, ಯೋಚಿಸುವ, ಒಂಟಿಯಾಗಿ ಇಲ್ಲವೇ ಗುಂಪಿನಲ್ಲಿ ನೇರವಾಗಿ ಭಾಗವಹಿಸುವ ಮೂಲಕ ನಡೆಯುತ್ತಿದ್ದ ಕಲಿಕಾ ಪ್ರಕ್ರಿಯೆಯನ್ನು ಮೊಬೈಲ್ ಆ್ಯಪ್‌ಗಳು ಸಂಯೋಜಿಸಿ, ಸರಳ ಮತ್ತು ಸುಲಭಗೊಳಿಸಿವೆ. ಆಪ್‍ಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಭಿವ್ಯಕ್ತಿಯಲ್ಲಿ ಸುಧಾರಣೆ ತರಬಹುದು. ಅವರನ್ನು ಸಕ್ರಿಯವಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬಹುದು. ಜೊತೆಗೆ, ಪೋಷಕರು, ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಸಮನ್ವಯ ಸಾಧಿಸುವುದು ಸುಲಭವಾಗುತ್ತದೆ.

ಶೈಕ್ಷಣಿಕ ಆ್ಯಪ್‌ಗಳ ಆಯ್ಕೆ ಹೇಗೆ?
ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್‌ಗಳನ್ನು ಆಯ್ಕೆ ಮಾಡುವಾಗ ಕೆಲವು ಅಂಶಗಳ ಕಡೆಗೆ ಗಮನ ಹರಿಸಬೇಕಾಗುತ್ತದೆ. ಆ್ಯಪ್‌ನಲ್ಲಿ ಪ್ರತಿಯೊಂದು ತರಗತಿಯ, ಪ್ರತಿಯೊಂದು ವಿಷಯದ ಪಠ್ಯವಸ್ತುವನ್ನು ಪೂರ್ತಿಯಾಗಿ ಅಳವಡಿಸಿಕೊಂಡಿರಬೇಕು. ಅದಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಹೊಂದಿರಬೇಕು. ವಿದ್ಯಾರ್ಥಿಗೆ ವಿಷಯ ಗ್ರಹಣ ಸುಲಭವಾಗಿ ಆಗುವಂತಿರಬೇಕು. ಪಠ್ಯವಸ್ತುವಿಗೆ ಪೂರಕವಾದ ಹೆಚ್ಚಿನ ಮಾಹಿತಿ ಹೊಂದಿರಬೇಕು. ಹೊಸ ಕೌಶಲಗಳ ಬೆಳವಣಿಗೆಗೆ ಅವಕಾಶ ಮಾಡಿಕೊಡುವಂತಿರಬೇಕು. ವಿದ್ಯಾರ್ಥಿಯ ಸಂದೇಹಗಳನ್ನು ಪರಿಹರಿಸುವ ವ್ಯವಸ್ಥೆ ಇರಬೇಕು. ವಿವಿಧ ಬಗೆಯ ಪ್ರಶ್ನೆಗಳ ಕೋಶ ಇರಬೇಕು. ಇಂಟರ್‌ನೆಟ್ ಸೌಲಭ್ಯ ಇಲ್ಲದಾಗಲೂ ಬಳಸುವಂತಿರಬೇಕು. ವಿದ್ಯಾರ್ಥಿಯ ಸ್ವಯಂ ಮೌಲ್ಯಮಾಪನಕ್ಕೆ ಅವಕಾಶ ಇರಬೇಕು. ಚಟುವಟಿಕೆಗಳಿದ್ದಲ್ಲಿ, ವಿದ್ಯಾರ್ಥಿಯೇ ನೇರವಾಗಿ ಪಾಲ್ಗೊಳ್ಳುವಂಥ ((’hands on’ ) ಅನುಭವ ನೀಡುವಂತಿರಬೇಕು. ಒಟ್ಟಾರೆಯಾಗಿ, ಅದು ಬಳಕೆದಾರ-ಸ್ನೇಹಿಯಾಗಿರಬೇಕು.

ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಪ್ರಸ್ತುತ ಲಭ್ಯ ಇರುವ ಅಸಂಖ್ಯಾತ ಶೈಕ್ಷಣಿಕ ಆ್ಯಪ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚು ಉಪಯುಕ್ತವಾಗುವ ಕೆಲವು ಜನಪ್ರಿಯ ಆ್ಯಪ್‌ಗಳಗನ್ನು ಪರಿಚಯ ಮಾಡಿಕೊಳ್ಳೋಣ:
1. ಯುಡೆಮಿ (Udemy): ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸ್ವತಂತ್ರವಾಗಿ ಶಿಕ್ಷಣ ಮುಂದುವರೆಸುವ ಇಚ್ಛೆ ಉಳ್ಳವರಿಗೆ ಅತ್ಯಂತ ಉಪಯುಕ್ತವಾದ ಆ್ಯಪ್‌ ಇದು. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಕೋರ್ಸ್‍ಗಳು, ಏಳು ಲಕ್ಷ ಶಿಕ್ಷಕರು ಹಾಗೂ ಐವತ್ತು ಮಿಲಿಯನ್‌ಗಿಂತ ಹೆಚ್ಚು ಬಳಕೆದಾರರು ಈ ಆ್ಯಪ್‌ನ ಹೆಗ್ಗಳಿಕೆ. ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒದಗಿಸುವ ಈ ಆ್ಯಪ್‌ನಿಂದ, ಹಲವಾರು ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸಾಧ್ಯವಿದೆ. ವ್ಯಕ್ತಿಗತ ಬೆಳವಣಿಗೆ, ಯೋಗ ಮುಂತಾದ ವಿಷಯಗಳನ್ಣೂ ಈ ಆ್ಯಪ್‌ನಲ್ಲಿ ಅಳವಡಿಸಕೊಳ್ಳಲಾಗಿದೆ. ಸಮಯ ಹೊಂದಿಸಿಕೊಳ್ಳಲು ನಿಮಗೆ ಸಾಧ್ಯವಾದರೆ, ನಿಮ್ಮ ಶೈಕ್ಷಣಿಕ ಉನ್ನತಿಗೆ ಇದೊಂದು ಅತ್ಯಂತ ಉಪಯುಕ್ತವಾದ ಆ್ಯಪ್‌. ಬಳಕೆಯೂ ಸುಲಭ ಮತ್ತು ಸರಳ.

2. ಗೂಗಲ್ ಕ್ಲಾಸ್‍ರೂಮ್ (Google class room): ಇದೊಂದು ಗೂಗಲ್ ಸಂಸ್ಥೆ ರೂಪಿಸಿರುವ ಉಚಿತ ಆ್ಯಪ್‌; ಮೊಬೈಲ್ ಮತ್ತು ಐ-ಫೋನ್‍ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ತಮ್ಮ ಶಾಲೆಯ ಮೂಲಕವೂ ರಿಜಿಸ್ಟರ್ ಮಾಡಿಸಿಕೊಂಡು ಉಚಿತವಾಗಿ ಬಳಸಬಹುದು. ಅತ್ಯಂತ ಸರಳವಾಗಿರುವ ಈ ಆ್ಯಪ್‌ ಎಲ್ಲ ಹಂತದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮಧ್ಯೆ ಪರಸ್ಪರ ಸುಲಲಿತ ಸಂವಹನ ಮತ್ತು ಸಹಕಾರ ಏರ್ಪಡಿಸುತ್ತದೆ. ತರಗತಿಯ ವಿದ್ಯಾರ್ಥಿಗಳ ಪಟ್ಟಗೆ ಅನಗುಣವಾಗಿ, ಅವರನ್ನು ಶಿಕ್ಷಕರು ಸುಲಭವಾಗಿ ಸಂಪರ್ಕಿಸಬಹುದು. ಯಾವುದೇ ಒಂದು ತರಗತಿಗೆ ಅವಶ್ಯವಾದ ಶೈಕ್ಷಣಿಕ ವಿಷಯಗಳನ್ನು, ಪರಿಕರಗಳನ್ನು ಹಾಗೂ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಶಿಕ್ಷಕರು ಇದರ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬಹುದು. ವಿದ್ಯಾರ್ಥಿಗಳಿಂದ ಹಿಮ್ಮಾಹಿತಿ, ಅಸೈನ್ಮೆಂಟ್‌ಗಳಿಗೆ ಉತ್ತರಗಳನ್ನು ಪಡೆಯಬಹುದು. ಅವಶ್ಯ ಬಿದ್ದಲ್ಲಿ ವಿದ್ಯಾರ್ಥಿಗಳೊಂದಿಗೆ ವ್ಯಕ್ತಿಗತವಾಗಿ ಅಥವಾ ಗುಂಪಿನಲ್ಲಿ ಚರ್ಚೆ ನಡೆಸಬಹುದು. ರಸಪ್ರಶ್ನೆಯಂಥ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನೂ ನಡೆಸಬಹುದು.
ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಅಗತ್ಯವಾದ ಮಾಹಿತಿ ನೀಡುವ ಹಲವಾರು ಜಾಲತಾಣಗಳ ಜೊತೆಗೆ ಸಂಪರ್ಕ ಒದಗಿಸುವುದು ಈ ಆ್ಯಪ್‌ನ ಇನ್ನೊಂದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT