ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 31ರೊಳಗೆ ಪ್ಯಾನ್–ಆಧಾರ್ ಜೋಡಿಸದಿದ್ದರೆ; ನಿಷ್ಕ್ರಿಯಗೊಳ್ಳಲಿದೆ ಪ್ಯಾನ್‌

Last Updated 15 ಫೆಬ್ರುವರಿ 2020, 9:43 IST
ಅಕ್ಷರ ಗಾತ್ರ

ನವದೆಹಲಿ:2020ರ ಮಾರ್ಚ್‌ 31ರೊಳಗೆಆಧಾರ್‌ಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಿಸದಿದ್ದರೆ, ಪ್ಯಾನ್‌ ನಿಷ್ಕ್ರಿಯಗೊಳ್ಳಲಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಪ್ಯಾನ್‌ ಮತ್ತು ಆಧಾರ್‌ ಜೋಡಣೆಗಾಗಿ ನಿಗದಿಪಡಿಸಲಾಗಿದ್ದ ಗಡುವು ಈಗಾಗಲೇ ಹಲವು ಬಾರಿ ವಿಸ್ತರಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ವಿಸ್ತರಿಸಲಾದ ಗಡುವು ಇದೇ ಮಾರ್ಚ್‌ 31ಕ್ಕೆ ಕೊನೆಯಾಗಲಿದೆ.

2020ರ ಜನವರಿ 27ರ ವರೆಗೂ 30.75 ಕೋಟಿ ಪ್ಯಾನ್‌ ಸಂಖ್ಯೆಗಳು ಆಧಾರ್‌ನೊಂದಿಗೆ ಜೋಡಿಸಲಾಗಿದೆ. ಆದರೆ, 17.58 ಕೋಟಿ ಪ್ಯಾನ್‌ಗಳು ಇನ್ನೂ ಆಧಾರ್‌ ಜೊತೆ ಸಂಪರ್ಕಿಸಲಾಗಿಲ್ಲ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 139 ಎಎ(2)ರ ಪ್ರಕಾರ, ಪ್ಯಾನ್‌ ಹೊಂದಿರುವ ವ್ಯಕ್ತಿಯು ಆಧಾರ್‌ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ತೆರಿಗೆ ಇಲಾಖೆಗೆ ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿ ತಂದು, 114ಎಎಎ ನಿಯಮವನ್ನು ಸೇರಿಸಿ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಮೂಲಕ ಪ್ಯಾನ್‌ ಸಂಖ್ಯೆ ನಿಷ್ಕ್ರಯಗೊಳ್ಳುವ ಷರತ್ತು ವಿಧಿಸಲು ಅನುವಾಗಿದೆ.

ಕೇಂದ್ರ ಸರ್ಕಾರದ ಆಧಾರ್‌ ಕಾರ್ಯಕ್ರಮ ಸಂವಿಧಾನ ಸಿಂಧುತ್ವ ಹೊಂದಿರುವುದಾಗಿ 2018ರ ಸೆಪ್ಟೆಂಬರ್‌ನಲ್ಲಿಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಪ್ಯಾನ್‌ ಪಡೆಯಲು ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಆಧಾರ್‌ ಕಡ್ಡಾಯ ಮುಂದುವರಿಯಲಿದೆ ಎಂದು ಕೋರ್ಟ್‌ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT