ಶನಿವಾರ, ಜುಲೈ 31, 2021
28 °C

ಲ್ಯಾಪ್‌ಟಾಪ್‌ ಖರೀದಿಗೂ ಮುನ್ನ...

ವಿನೋದ್ ರಾವ್ Updated:

ಅಕ್ಷರ ಗಾತ್ರ : | |

Deccan Herald

ನೀವು ಲ್ಯಾಪ್‌ಟಾಪ್‌ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಯಾವ ಕಂಪನಿಯ ಹಾಗೂ ಎಷ್ಟು ಸಾಮರ್ಥ್ಯದ (ಕಾನ್ಫಿಗರೇಷನ್) ಲ್ಯಾಪ್‌ಟಾಪ್‌ ಖರೀದಿಸಬೇಕು. ಯಾರನ್ನು ವಿಚಾರಿಸುವುದು ಸೂಕ್ತ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ, ಇಲ್ಲಿದೆ ನಿಮ್ಮ ಗೊಂದಲಗಳಿಗೆ ಪರಿಹಾರ ಸೂಚಿಸುವ ಒಂದಷ್ಟು ಅಂಶಗಳು.

ಮೊದಲಿಗೆ, ನೀವು ಯಾವ ಉದ್ದೇಶಕ್ಕಾಗಿ ಲ್ಯಾಪ್‌ಟಾಪ್ ಖರೀದಿಸಬೇಕೆಂದಿದ್ದಿರಿ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ನಂತರ ಹಾರ್ಡ್‌ವೇರ್ (ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳು ಯಾವಾಗಲೂ ಒಂದಕ್ಕೊಂದು ಪೂರಕವಾಗಿರುವ ಕಾರಣ ಎರಡನ್ನು ಒಟ್ಟಿಗೆ ಪರಿಗಣಿಸಬೇಕು), ಪರದೆ ಮತ್ತು ಮಲ್ಟಿಮೀಡಿಯಾ ಕನೆಕ್ಟಿವಿಟಿ ಅಪ್ಲಿಕೇಶನ್ ಬಳಕೆ ಮತ್ತು ವೃತ್ತಿಯ ಆಧಾರವಾಗಿ, ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್‌ ಮತ್ತು ಪರದೆಯನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ನಿಮಗೆ ಯಾವುದು ಅನುಕೂಲಕರ ಎಂಬುದನ್ನು ತೀರ್ಮಾನಿಸಿ, ಆಯ್ಕೆ ಮಾಡಿಕೊಳ್ಳಿ.

ಟೆಕ್ಸ್ಟ್ ಮತ್ತು ಇಂಟರ್ನೆಟ್

ಕೇವಲ ಟೈಪಿಂಗ್ ಮತ್ತು ಇಂಟರ್‌ನೆಟ್‌ ಬಳಸುವ ಉದ್ದೇಶವಿದ್ದರೆ ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಸಾಧಾರಣ ಸಾಮರ್ಥ್ಯದ ಹಾರ್ಡ್‌ವೇರ್‌ ಇದ್ದರೂ ಕಾರ್ಯ ನಿರ್ವಹಿಸಬಹುದಾಗಿದೆ. ಉದಾಹರಣೆಗೆ; 6ನೇ ಜನರೇಷನಿನ (ಪ್ರಸ್ತುತ 8ನೇ ಜನರೇಷನ್ ಮಾರುಕಟ್ಟೆಯಲ್ಲಿ ಲಭ್ಯವಿದೆ) ಸೆಕೆಂಡಿಗೆ 2.0 ghz ಸ್ಪೀಡ್ ಇರುವ ಐ-3 ಪ್ರೊಸೆಸರ್, 3ಜಿಬಿ ರಾಮ್, ನಿಮ್ಮ ಅವಶ್ಯಕತೆಗೆ ಬೇಕಾದ ಸಾಮರ್ಥ್ಯದ ಹಾರ್ಡ್ ಡ್ರೈವ್ (ಕಡಿಮೆ ಎಂದರೆ 500 ಜಿಬಿ ಅಥವಾ ಹೆಚ್ಚು ಬೇಕಾದಲ್ಲಿ 1 ಟಿಬಿ), ಇನ್‌ಬಿಲ್ಟ್ ಗ್ರಾಫಿಕ್ಸ್ ಇದ್ದರೆ ಸಾಕು.

ಲ್ಯಾಪ್‌ಟಾಪ್‌ನ ಪರದೆ: ಟೆಕ್ಸ್ಟ್ ಬಳಕೆದಾರರಿಗೆ 13ಇಂಚಿನ, ರೆಡಿ ಎಚ್‌ಡಿ (730x 1280) ಇದ್ದರೆ ಸಾಕು. ಹೆಚ್ಚು ಸಿನಿಮಾ ನೋಡುವ ಆಸಕ್ತಿ ಉಳ್ಳವರು ಎಚ್‌ಡಿ (1090x1920) ಪರದೆಯ ಲ್ಯಾಪ್‌ಟಾಪ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಫೋಟೊ ವರ್ಕ್ ಮತ್ತು ಡಿಸೈನಿಂಗ್

ಫೋಟೊ ಹಾಗೂ ಡಿಸೈನಿಂಗ್ ವಿಚಾರಕ್ಕೆ ಬಳಸುವ ಉದ್ದೇಶವಿದ್ದರೆ ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಹೆಚ್ಚು ಸಾಮರ್ಥ್ಯದ ಹಾರ್ಡ್ ವೇರ್ ಅಗತ್ಯವಿರುತ್ತದೆ. ಉದಾಹರಣೆಗೆ : 6ರಿಂದ 8 ನೇ ಜನರೇಷನ್‌ನಿನ ಸೆಕೆಂಡಿಗೆ 2.7 ghz ಅಥವಾ ಅದಕ್ಕಿಂತ ಅಧಿಕ ಕ್ಲಾಕ್ ಸ್ವೀಡಿರುವ ಐ–5 ಅಥವಾ ಐ– 7 ಪ್ರೊಸೆಸರ್, 4 ರಿಂದ 8 ಜಿಬಿ ರಾಮ್, 1 ಟಿಬಿ ಹಾರ್ಡ್ ಡ್ರೈವ್ ಮತ್ತು 1 ಅಥವಾ 2 ಜಿಬಿ ಗ್ರಾಫಿಕ್ಸ್ ಅವಶ್ಯಕತೆ ಇರುತ್ತದೆ.

ಲ್ಯಾಪ್‌ಟಾಪ್‌ನ ಪರದೆ : ಫೋಟೊ ಹಾಗೂ ಡಿಸೈನಿಂಗ್ ಬಳಕೆಗೆ 15 ಇಂಚಿನ ಎಚ್‌ಡಿ (1090x1920) ಪರದೆ ಅವಶ್ಯಕ.

ವಿಡಿಯೊ ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್

ವಿಡಿಯೊ ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಗೇಮಿಂಗ್ ಕೆಲಸಕ್ಕೆ ಬಳಸುವ ಉದ್ದೇಶವಿದ್ದರೆ ನೀವು ಬಳಸುವ ಸಾಫ್ಟ್‌ವೇರ್‌ಗಳಿಗೆ ಅತಿ ಹೆಚ್ಚು ಸಾಮರ್ಥ್ಯದ ಹಾರ್ಡ್‌ವೇರ್ ಅಗತ್ಯವಿರುತ್ತದೆ. ಉದಾಹರಣೆಗೆ : 7 ಅಥವಾ 8ನೇ ಜನರೇಷನ್‌, ಸೆಕೆಂಡಿಗೆ 2.8ghz ಸ್ಪೀಡ್ ಇರುವ (ಅಥವಾ ಅದಕ್ಕಿಂತ ಹೆಚ್ಚಿನ) ಐ–7 ಅಥವಾ ಕ್ಸಿಯಾನ್ ಪ್ರೊಸೆಸರ್, 8 ರಿಂದ 16 ಜಿಬಿ ರಾಮ್, 500 ಜಿಬಿ ಎಸ್ಎಸ್‌ಡಿ ಹಾರ್ಡ್ ಡ್ರೈವ್ ಮತ್ತು 2ಜಿಬಿ ಗ್ರಾಫಿಕ್ಸ್ (ಎಕ್ಸ್‌ಟರ್ನಲ್‌ ಇ-ಜಿಪಿಯೂ ಬಳಸಿದರೆ ವಿಡಿಯೊ ಎಡಿಟಿಂಗ್ ಮತ್ತು ಈ ಗ್ರಾಫಿಕ್ಸ್ ವೇಳೆ ಪ್ಲೇಬ್ಯಾಕ್ ಉತ್ತಮವಾಗಿರುತ್ತದೆ ಹಾಗೂ ಕಾರ್ಯನಿರ್ವಹಣೆ ಸರಳ) ಅವಶ್ಯಕತೆ.

ಲ್ಯಾಪ್‌ಟಾಪ್‌ ಪರದೆ: ಗ್ರಾಫಿಕ್ಸ್ ಮತ್ತು ಗೇಮಿಂಗ್ ಬಳಕೆಗೆ 15 ಇಂಚಿನ ಎಚ್‌ಡಿ (1090x1920) ಅಥವಾ 2ಕೆ ಪರದೆ ಅವಶ್ಯಕ.

ಕೇವಲ ರಾಮ್ ಮತ್ತು ಹಾರ್ಡ್‌ಡ್ರೈವ್‌ ಸಾಮರ್ಥ್ಯವನ್ನು ಪರಿಗಣಿಸಿ ಲ್ಯಾಪ್‌ಟಾಪ್‌ ಖರೀದಿಸುವುದನ್ನು ಬಿಟ್ಟು ಪ್ರೊಸೆಸರ್ ಮತ್ತು ಅದರ ಜೆನರೇಷನ್ ಹಾಗೂ ಕ್ಲಾಕ್ ಸ್ಪೀಡನ್ನು ಗಮನಿಸಬೇಕು. ಗ್ರಾಫಿಕ್ಸ್ ಮತ್ತು ಡಿಸೈನಿಂಗ್ ಕ್ಷೇತ್ರದವರು ಇದರೊಟ್ಟಿಗೆ ಗ್ರಾಫಿಕ್ಸ್ ಕಾರ್ಡ್ ಮತ್ತು ಪರದೆಯ ಅಳತೆ ಹಾಗೂ ರೆಸಲ್ಯೂಶನನ್ನು ಸಹ ಗಮನಿಸ ಬೇಕು. ಇವುಗಳಲ್ಲಿನ ಒಂದೊಂದು ಸಣ್ಣ ಬದಲಾವಣೆಯೂ ಲ್ಯಾಪ್‌ಟಾಪ್‌ನ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. 

ಇನ್ನು ಮಲ್ಟಿಮೀಡಿಯಾ ಅಥವಾ ಕನೆಕ್ಟಿವಿಟಿ ಸಂಬಂಧಿಸಿದಂತೆ ಡಿವಿಡಿ ಡ್ರೈವ್, ಎಚ್‌ಡಿಎಂಐ, ಯುಎಸ್‌ಬಿ 3, ಹೆಡ್‌ಫೋನ್‌ ಮತ್ತು ಮೈಕ್ ಪಿನ್ ಸಾಮಾನ್ಯವಾಗಿ ಲಭ್ಯವಿರಲಿದೆಯೇ ಎಂದು ಗಮನಿಸಬೇಕು.

**

ಪ್ರೊಸೆಸರಿನ ಜೆನರೇಷನ್ ಮತ್ತು ಕ್ಲಾಕ್ ಸ್ಪೀಡ್ ತಿಳಿದುಕೊಳ್ಳುವುದು ಹೇಗೆ?

ಲ್ಯಾಪ್‌ಟಾಪ್‌ನಲ್ಲಿರುವ ಮೈ-ಕಂಪ್ಯೂಟರ್ (ಮೈ–ಪಿಸಿ) ಐಕಾನ್‌ ಮೇಲೆ ರೈಟ್ ಕ್ಲಿಕ್ ಮಾಡಿ. ಪ್ರಾಪರ್ಟಿಸ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರದಲ್ಲಿ ತೋರಿಸಿದಂತೆ ಒಂದು ವಿಂಡೋ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ಸುಲಭವಾಗಿ ಪ್ರೊಸೆಸರ್ ಮತ್ತು ಕ್ಲಾಕ್ ಸ್ಪೀಡ್‌ ಅನ್ನು ಗಮನಿಸಬಹುದು. ಆದರೆ, ಜನರೇಷನ್ ತಿಳಿಯಲೂ ಪ್ರೊಸೆಸರ್ ಇಂಟೆಲ್ ಐ7 ನ ನಂತರದ ಮೊದಲ ಸಂಖ್ಯೆಯನ್ನು ಗಮನಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು