ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ಗೆ ಸ್ಯಾಮ್ಸಂಗ್‌ ಫೋಲ್ಡ್‌

Last Updated 31 ಜುಲೈ 2019, 19:30 IST
ಅಕ್ಷರ ಗಾತ್ರ

ಸ್ಯಾಮ್ಸಂಗ್‌ ಕಂಪನಿಯ ಬಹುನಿರೀಕ್ಷಿತ ಸ್ಯಾಮ್ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಮೊಬೈಲ್‌ ಫೋನ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ.

‘ಫೋಲ್ಡ್ ಫೋನ್‌ನಲ್ಲಿ ಕಂಡುಬಂದಿದ್ದ ಸಮಸ್ಯೆಗಳೆಲ್ಲವನ್ನೂ ನಿವಾರಿಸಲಾಗಿದೆ. 1,980 ಡಾಲರ್‌ನ ಹೈಬ್ರಿಡ್‌ ಸ್ಮಾರ್ಟ್‌ಫೋನ್‌ ಸಿದ್ಧವಾಗಿದೆ’ ಎಂದು ಕಂಪನಿ ಹೇಳಿಕೊಂಡಿದೆ.

ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಕಠಿಣ ಪರೀಕ್ಷೆಗಳಿಗೆ ಒಳಪಡಿಸಿ ಬದಲಾವಣೆಗಳನ್ನು ಮಾಡಲಾಗಿದೆ. ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಸೆಪ್ಟೆಂಬರ್‌ನಿಂದ ಖರೀದಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಏಪ್ರಿಲ್‌ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲವು ಪತ್ರಕರ್ತರಿಗೆ ರಿವ್ಯೂಗೆಂದು ನೀಡಿದ್ದ ಹ್ಯಾಂಡ್‌ಸೆಟ್‌ನ ಡಿಸ್‌ಪ್ಲೇನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ಕಾರಣಕ್ಕಾಗಿ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಏನಾಗಿತ್ತು: ಫೋನ್ ಪರದೆಗೆ ಪ್ರೊಟೆಕ್ಟಿವ್ ಲೇಯರ್ ಒಂದನ್ನು ಅಳವಡಿಸಲಾಗಿದೆ. ಆದರೆ, ಫೋನ್ ಬಳಸಲು ಆರಂಭಿಸುತ್ತಿದ್ದಂತೆಯೇ ಪರದೆಯ ಕೆಳ ಭಾಗದಲ್ಲಿ ಅದು ಕಿತ್ತು ಬರುತ್ತಿದೆ. ಅಂದರೆ ಸ್ಕ್ರೀನ್ ಗಾರ್ಡ್ ಹಾಕಿಸಿದ ಬಳಿಕ ಹೆಚ್ಚು ದಿನ ಕಳೆದಂತೆ ಅದು ಒಂದು ಬದಿಯಿಂದ ಕಿತ್ತುಕೊಂಡು ಬರುತ್ತದಲ್ಲಾ ಹಾಗೆ. ಅದರಲ್ಲಿಯೂ ಫೋನ್ ಬಿಡಿಸಿದಾಗ ಎರಡೂ ಪರದೆಗಳನ್ನು ಮಡಚುವ ಜಾಗದಿಂದ ಹೀಗೆ ಆ ಪ್ರೊಟೆಕ್ಟಿವ್ ಲೇಯರ್ ಸ್ವಲ್ಪವೇ ಕಿತ್ತು ಬರುವಂತೆ ಆಗಿತ್ತು. ಅದನ್ನು ತೆಗೆದಿದ್ದರಿಂದ ಪರದೆಗೆ ಹಾನಿಯಾಗಿತ್ತು. ‘ಎರಡು ಪರದೆಗಳು ಸೇರಿಸಿರುವ ಅಥವಾ ಎರಡು ಪರದೆಗಳು ಮಡಚುವ ಜಾಗದಲ್ಲಿ ಸಮಸ್ಯೆ ಕಂಡುಬಂದಿತ್ತು.

ಏನೆಲ್ಲಾ ಬದಲಾವಣೆ ಆಗಿದೆ

* ಫೋಲ್ಡಿಂಗ್‌ ಎಕ್ಸ್‌ಪೀರಿಯನ್ಸ್‌ಗೆ ಯಾವುದೇ ಧಕ್ಕೆ ಉಂಟಾಗದಂತೆ ಹ್ಯಾಂಡ್‌ಸೆಟ್‌ಗೆ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ.

* ಪ್ರೊಟೆಕ್ಷನ್‌ ಕ್ಯಾಪ್‌ ಅಳವಡಿಸುವ ಮೂಲಕ ಫೋಲ್ಡಿಂಗ್‌ ಜಾಗವನ್ನು ಬಲಪಡಿಸಲಾಗಿದೆ.

* ಬಾಗುವ ಡಿಸ್‌ಪ್ಲೇ ಕೆಳಭಾಗಕ್ಕೆ ಹೆಚ್ಚುವರಿಯಾಗಿ ಲೋಹದ ಪದರ ಅಳವಡಿಸಲಾಗಿದೆ.

* ಫೋನ್‌ನ ದೇಹ ಮತ್ತು ತಿರುಗಣಿ ಮಧ್ಯೆ ಇದ್ದ ಅಂತರವನ್ನು ಕಡಿಮೆ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT