ಗುರುವಾರ , ಏಪ್ರಿಲ್ 9, 2020
19 °C

ವಾಟ್ಸ್‌ಆ್ಯಪ್‌ ಸುರಕ್ಷತೆಗೆ ಟಿಪ್ಸ್

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

prajavani

ವಾಟ್ಸ್‌ಆ್ಯಪ್‌, ಭಾರತದಲ್ಲಿ ಅತ್ಯಂತ ಜನಪ್ರಿಯ ಮೆಸೆಜಿಂಗ್‌ ಆ್ಯಪ್‌ ಆಗಿದ್ದು, 40 ಕೋಟಿಗೂ ಅಧಿಕ ಬಳಕೆದಾರರಿದ್ದಾರೆ. ಹೀಗಾಗಿ ವೈಯಕ್ತಿಕ ಸುರಕ್ಷತೆ ಒದಗಿಸಲು ಕಂಪನಿ ಕಾಲಕಾಲಕ್ಕೆ ಹಲವು ವೈಶಿಷ್ಟ್ಯಗಳನ್ನು ನೀಡತ್ತಾ ಬಂದಿದೆ. ಕೆಲವರಿಗೆ ಇವುಗಳ ಅರಿವಿರುವುದಿಲ್ಲ. ಈ ಕಾರಣಕ್ಕಾಗಿ ಕೆಲವೊಂದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬ್ಲಾಕ್‌ ಯೂಸರ್

ವಾಟ್ಸ್ಆ್ಯಪ್‌ನಲ್ಲಿ ಯಾರಾದರೂ ಅನಗತ್ಯ ವಿಷಯಗಳನ್ನು ಹಂಚಿಕೊಂಡು ರಗಳೆ ಮಾಡುತ್ತಿದ್ದರೆ ಅಂತಹವರನ್ನು ಬ್ಲಾಕ್‌ ಮಾಡಲು ಅವಕಾಶ ಇದೆ. ವಾಟ್ಸ್‌ಆ್ಯಪ್‌ ಮೂಲಕ ಯಾರಿಂದ ಮೆಸೇಜ್, ವಾಯ್ಸ್‌, ವಿಡಿಯೊ ಸ್ವೀಕರಿಸಬಹುದು ಎನ್ನುವುದನ್ನು ನಿಯಂತ್ರಿಸಬಹುದು.

ಕಾಂಟ್ಯಾಕ್ಟ್‌ ಸೇವ್‌ ಆಗಿರದೇ ಇದ್ದರೆ, ಮೆಸೇಜ್‌ ಬಂದ ತಕ್ಷಣ ಅಲ್ಲಿಯೇ ಬ್ಲಾಕ್‌ ಮಾಡುವ ಅಥವಾ ಕಾಂಟ್ಯಾಕ್ಟ್‌ಗೆ ಸೇರಿಸುವ ಆಯ್ಕೆ ಕಾಣಿಸುತ್ತದೆ. ಆ ನಂಬರ್‌ ಈಗಾಗಲೇ ಸೇವ್‌ ಆಗಿದ್ದರೆ, ಬ್ಲಾಕ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

ವಾಟ್ಸ್‌ಆ್ಯಪ್‌ನಲ್ಲಿ ‘ಎ’ ವ್ಯಕ್ತಿಯನ್ನು ಬ್ಲಾಕ್‌ ಮಾಡಬೇಕಾದರೆ, ಹೆಸರಿನ ಮೆಲೆ ಕ್ಲಿಕ್‌ ಮಾಡಿದರೆ ಚಾಟ್‌ ಆಯ್ಕೆ ತೆರೆದುಕೊಳ್ಳುತ್ತದೆ. ಆಗ ಬಲತುದಿಯ ಮೇಲ್ಭಾಗದಲ್ಲಿ ಮೂರು ಚುಕ್ಕಿಗಳು ಕಾಣಿಸುತ್ತವೆ. ಅದರ ಮೇಲೆ ಕ್ಲಿಕ್‌ ಮಾಡಿದಾಗ ‘More’ ಮೇಲೆ ಕ್ಲಿಕ್‌ ಮಾಡಿ ‘block’ ಮೇಲೆ ಕ್ಲಿಕ್‌ ಮಾಡಿ.

ಐಫೋನ್‌ನಲ್ಲಿ: · Go to WhatsApp and select the name of the person whom you want to block
· Tap on the Top Bar · The Second last option on the page is 'Block'.

ಬಯೋಮೆಟ್ರಿಕ್‌ ಲಾಕ್‌: ಹೆಚ್ಚುವರಿ ಸುರಕ್ಷತೆ ಒದಗಿಸಲು ಬಯೋಮೆಟ್ರಿಕ್‌ ಲಾಕ್‌ ಸಕ್ರಿಯಗೊಳಿಸಿ. ಆಂಡ್ರಾಯ್ಡ್‌ ಫೋನ್‌ಗಳಲ್ಲಿ settings-Account-Privacy-Fingerprint lock.

ಐಫೋನ್‌ನಲ್ಲಿ Touch ID ಮತ್ತು Face ID ಆಯ್ಕೆ ಇದೆ. settings-Account-Privacy-Screen Lock-Enable

ಯಾರೆಲ್ಲಾ ನೋಡಬಹುದು?

ಡಿಸ್‌ಪ್ಲೇ ಪಿಕ್ಷರ್‌, ಸ್ಟೇಟಸ್‌ ಮತ್ತು ಸ್ಟೇಟಸ್‌ ಸ್ಟೋರಿಗಳನ್ನು ಯಾರೆಲ್ಲಾ ನೋಡಬಹುದು ಅಥವಾ ನೋಡಬಾರದು ಎಂದು ಬಳಕೆದಾರ ನಿರ್ಧರಿಸಬಹುದು. ಇದಲ್ಲದೆ, ಯಾರು ಪ್ರೊಫೈಲ್‌ ಪಿಕ್ಚರ್ ನೋಡಬಹುದು ಎಂಬುದನ್ನು ನಿರ್ಧರಿಸಬಹುದಾಗಿದೆ.

Settings– Account– Privacy option–Profile Photo– ಇಲ್ಲಿ ಕಾಣುವ ಮೂರರಲ್ಲಿ ಒಂದನ್ನು ಆಯ್ಕೆ ಮಾಡಬಹುದು- Everyone, My Contacts, Nobody

ಐಫೋನ್‌ನಲ್ಲಿ: Status– Privacy-ಇಲ್ಲಿ ಕಾಣುವ ಮೂರರಲ್ಲಿ ಒಂದನ್ನು ಆಯ್ಕೆ ಮಾಡಬಹುದು-My contact, My Contacts Except…., Only Share With….

ಗ್ರೂಪ್‌ಗೆ ಸೇರಿಸುವುದು: ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸುವುದಕ್ಕೂ ಅನುಮತಿ ನೀಡಬೇಕೇ ಬೇಡವೇ ಎನ್ನುವುದನ್ನು ನಿಯಂತ್ರಿಸಬಹುದು. Settings-Account-Privacy-Groups ಇಲ್ಲಿ ‘Everyone’, ‘My Contacts’, and ‘My contacts Except...’ ಆಯ್ಕೆ ಮಾಡಿ.

ರೀಡ್‌ ಮೆಸೇಜ್‌ ಆಯ್ಕೆ

ಒಬ್ಬರು ಮೆಸೇಜ್‌ ಕಳುಹಿಸಿದ್ದನ್ನು ಇನ್ನೊಬ್ಬರು ಓದಿದ್ದಾರೆ ಎಂದಾದರೆ ಬ್ಲೂ ಟಿಕ್‌ ಬರುತ್ತದೆ. ಓದಿರುವುದು ತಿಳಿಯದಂತೆ ಮಾಡಬೇಕಾದರೆ ಹೀಗೆ ಮಾಡಿ.

Settings–Account–Privacy option– Turn off Read Receipts

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು