ಮಂಗಳವಾರ, ಸೆಪ್ಟೆಂಬರ್ 21, 2021
20 °C

ಎಸ್‌ಎಂಎಸ್‌ನಲ್ಲಿ ಲಸಿಕೆ ಮಾಹಿತಿ!

ಗೋವರ್ಧನ ಎಸ್‌.ಎನ್‌. Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೋವಿಡ್‌ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಆದರೆ ಲಸಿಕೆ ಪಡೆಯುವ ಸಮಯ ಲಭ್ಯತೆ ಕಂಡುಕೊಳ್ಳುವ ಬಗ್ಗೆ ಹಲವರಿಗೆ ತಿಳಿವಳಿಕೆ ಇಲ್ಲ. ಇದನ್ನು ನೀಗಿಸಲೆಂದೇ VaccinateMe.in  ಆ್ಯಪ್ ಕನ್ನಡ ಸೇರಿದಂತೆ ಭಾರತದ 11 ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ.

ಈ ಆ್ಯಪ್‌ ಬಳಸಿ ಲಸಿಕೆ ಪಡೆಯುವ ಸಮಯ ಕಂಡುಕೊಳ್ಳಬಹುದು. ಒಂದು ವೇಳೆ ಸದ್ಯದ ಮಟ್ಟಿಗೆ ಲಸಿಕೆ ಪಡೆಯುವ ಸಮಯ ಲಭ್ಯವಿಲ್ಲದಿದ್ದಲ್ಲಿ, ಸೈನ್‌ಅಪ್ ಮಾಡಿಕೊಂಡಲ್ಲಿ ಸಮಯ ಲಭ್ಯವಾಗುತ್ತಿದ್ದಂತೆ ಎಸ್‌ಎಂಎಸ್‌ ಅಲರ್ಟ್ ಸಹ ನೀಡುತ್ತದೆ. ಆಯಾ ಭಾಷೆಯಲ್ಲಿ ಮಾಹಿತಿ ಲಭ್ಯವಾಗುವುದರಿಂದ ಜನರಿಗೆ ಸುಲಭವಾಗಿ ಮಾಹಿತಿ ಸಿಗುತ್ತದೆ.

ಹೆಚ್ಚು ಜನರು ಗೊಂದಲವಿಲ್ಲದಂತೆ ಲಸಿಕಾ ಅಭಿಯಾನದಲ್ಲಿ ಭಾಗವಹಿಸುವಂತೆ ಮಾಡಲು ಕೃತಕ ಬುದ್ಧಿಮತ್ತೆ ಹಾಗೂ ಫಿಟ್‌ನೆಸ್‌ ಆ್ಯಪ್‌ ಹೆಲ್ತಿಫೈಮಿ ಈ ಆ್ಯ‍ಪ್ ಅನ್ನು ಅಭಿವೃದ್ಧಿಪಡಿಸಿದೆ. ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ಗುಜರಾತಿ, ತೆಲುಗು, ತಮಿಳು, ಬಂಗಾಳಿ, ಒಡಿಯಾ, ಪಂಜಾಬಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ. ಇಂಗ್ಲಿಷ್‌ ಭಾಷೆಯಲ್ಲಿ ವೆಬ್‌ಸೈಟ್‌ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಈಗಾಗಲೇ ಅಲರ್ಟ್‌ ನೀಡಲಾಗುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಎಸ್‌ಎಂಎಸ್‌ ಮಾಹಿತಿಯನ್ನೂ ಸೇರ್ಪಡೆ ಮಾಡಲಾಗಿದೆ.

‘ದೇಶದಾದ್ಯಂತ 700 ಕ್ಕೂ ಅಧಿಕ ಜಿಲ್ಲೆಗಳಲ್ಲಿ 3 ದಶಲಕ್ಷ ಜನರು ಇದರ ನೆರವು ಪಡೆದಿದ್ದಾರೆ. ಮೈಸೂರು, ಕೊಚ್ಚಿ, ಕೊಯಮತ್ತೂರು, ತಿರುವನಂತಪುರ, ವಿಶಾಖಪಟ್ಟಣ, ಮಂಗಳೂರು, ಕೊಟ್ಟಾಯಂ, ತಿರುಪತಿ ಮೊದಲಾದ ಮಹಾನಗರಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ್ಯಪ್ ಆರಂಭವಾದ ಮೊದಲ ದಿನವೇ 2.5 ಲಕ್ಷ ಜನರು ನೋಂದಾಯಿಸಿಕೊಂಡಿದ್ದರು. ಸುಮಾರು 5 ಲಕ್ಷ ಜನರು ಪ್ರತಿನಿತ್ಯ ಆ್ಯಪ್ ಬಳಸುತ್ತಿದ್ದಾರೆ. 21 ಲಕ್ಷ ಜನರಿಗೆ ಲಸಿಕೆ ಪಡೆಯುವ ಸಮಯದ ಲಭ್ಯತೆಯನ್ನು ಎಸ್‌ಎಂಎಸ್‌ ಮೂಲಕ ರವಾನಿಸಲಾಗಿದೆ’ ಎನ್ನುತ್ತಾರೆ ಹೆಲ್ತಿಫೈಮಿಯ ಸಹ ಸಂಸ್ಥಾಪಕ ಹಾಗೂ ಸಿಇಒ ತುಷಾರ್‌ ವಸಿಷ್ಠ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು