ಸೋಮವಾರ, ಮೇ 23, 2022
21 °C

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 5ಜಿ ಪ್ರಯೋಗ: ನೋಕಿಯಾ ಜತೆ 'ವಿ' ಪಾಲುದಾರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೂರ ಸಂಪರ್ಕ ಸೇವಾ ಸಂಸ್ಥೆಯಾದ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ತನ್ನ ತಂತ್ರಜ್ಞಾನ ಪಾಲುದಾರ ನೋಕಿಯಾ ಜೊತೆಗೆ 5ಜಿ ಪ್ರಯೋಗವನ್ನು ನಡೆಸಿರುವುದಾಗಿ ಘೋಷಿಸಿದೆ. ಈ ಪ್ರಯೋಗವು ಸರ್ಕಾರದಿಂದ 5ಜಿ ಪ್ರಯೋಗಕ್ಕಾಗಿ ಹಂಚಿಕೆಯಾಗಿರುವ 3.5ಜಿಎಚ್‌ಝಡ್ ಸ್ಪೆಕ್ಟ್ರಮ್ ಬ್ಯಾಂಡ್‌ನಲ್ಲಿ 5ಜಿ ಬಳಸಿಕೊಂಡು, ಗುಜರಾತ್‌ನ ಗಾಂಧಿನಗರದಲ್ಲಿ ಗ್ರಾಮೀಣ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ನೋಕಿಯಾದ ತಂತ್ರಜ್ಞಾನ ಬಳಸಿಕೊಂಡು, 17.1 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ 100ಎಂಬಿಪಿಎಸ್‌ಗಿಂತ ಹೆಚ್ಚಿನ ವೇಗದೊಂದಿಗೆ 5ಜಿ ಸಂಪರ್ಕವನ್ನು ಒದಗಿಸುವುದನ್ನು ವಿ ಪ್ರಯೋಗಿಸಿದೆ.

ಈ 5ಜಿ ಪ್ರಯೋಗವು ಗ್ರಾಮೀಣ ಪ್ರದೇಶಗಳಲ್ಲಿ ವಿಶ್ವಾಸಾರ್ಹ ಮತ್ತು ಹೆಚ್ಚಿನ ವೇಗದ ಸಂಪರ್ಕವನ್ನು ಒದಗಿಸುವ ಭಾರತೀಯ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಸಹಕಾರಿಯಾಗಿರುವುದಾಗಿ ಕಂಪನಿ ಹೇಳಿದೆ.

ವೊಡಾಫೋನ್ ಐಡಿಯಾ ಲಿಮಿಟೆಡ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಜಗಬೀರ್ ಸಿಂಗ್ ಈ ಬಗ್ಗೆ ವಿವರಿಸಿದ್ದು, 'ಕಳೆದ ಎರಡು ವರ್ಷಗಳಲ್ಲಿ ವೇಗವರ್ಧಿತ ಡಿಜಿಟಲೀಕರಣವು ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್‌ನ ಮೇಲೆ ಅವಲಂಬನೆಯನ್ನು ಹೆಚ್ಚಿಸಿದೆ. ವಿ ಗಿಗಾನೆಟ್, ಭಾರತದ ಅತ್ಯಂತ ವೇಗದ ನೆಟ್‌ವರ್ಕ್ ಆಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಳಕೆದಾರರಿಗೆ ಮತ್ತು ಉದ್ಯಮಗಳಿಗೆ ಈ ಡಿಜಿಟಲ್ ಯುಗದಲ್ಲಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ' ಎಂದಿದ್ದಾರೆ.

ನೋಕಿಯಾದ ಭಾರತೀಯ ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಸಂಜಯ್ ಮಲಿಕ್ ಮಾತನಾಡಿ, 'ನಮ್ಮ ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ 5ಜಿ ಪರಿಹಾರವು ವೊಡಾಫೋನ್ ಐಡಿಯಾದಂತಹ ಸೇವಾ ಪೂರೈಕೆದಾರರಿಗೆ 5ಜಿ ವ್ಯಾಪ್ತಿಯನ್ನು ದೂರದ ಪ್ರದೇಶಗಳಿಗೆ ವಿಸ್ತರಿಸಲು, ಕವರೇಜ್ ಅಂತರವನ್ನು ಪ್ಲಗ್ ಮಾಡಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇವಾ ಮಟ್ಟವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ' ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು