ಗುರುವಾರ , ನವೆಂಬರ್ 26, 2020
19 °C

ವೊಲ್ಟ್‌ಬೆಕ್: ತಂತ್ರಜ್ಞಾನದ ಬಳಕೆ ಹೇಳುವ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಯ ಕೆಲಸಗಳು ಹಾಗೂ ಮನೆಯಿಂದಲೇ ಕಚೇರಿಯ ಕೆಲಸಗಳನ್ನೂ ನಿಭಾಯಿಸಬೇಕಾದ ಸ್ಥಿತಿ ಎದುರಿಸುತ್ತಿರುವ ಮಹಿಳೆಯರು, ಕೆಲಸದ ಒತ್ತಡವನ್ನು ನಿಭಾಯಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ವಿಡಿಯೊ ಒಂದನ್ನು ವೊಲ್ಟ್‌ಬೆಕ್‌ ಹೋಮ್‌ ಅಪ್ಲಯೆನ್ಸಸ್ ಕಂಪನಿ ಸಿದ್ಧಪಡಿಸಿದೆ. ಇದನ್ನು ಯೂಟ್ಯೂಬ್‌ ಮೂಲಕ ವೀಕ್ಷಿಸಬಹುದು.

ಲಾಕ್‌ಡೌನ್‌ ಕಾರಣದಿಂದಾಗಿ ಮನೆಯಲ್ಲೇ ಇರಬೇಕಾದ ಸ್ಥಿತಿ ಎದುರಿಸುತ್ತಿರುವ ನಾಲ್ವರು ಮಹಿಳೆಯರು, ತಾವು ಕುಟುಂಬದ ಕೆಲಸ ಹಾಗೂ ಮನೆಯಿಂದಲೇ ಮಾಡಬೇಕಾದ ಕಚೇರಿ ಕೆಲಸಗಳನ್ನು ಹೇಗೆ ನಿಭಾಯಿಸುತ್ತಿದ್ದೇವೆ ಎಂಬುದನ್ನು ಹೇಳಿಕೊಳ್ಳುತ್ತ ಈ ವಿಡಿಯೊ ಆರಂಭವಾಗುತ್ತದೆ. ವೊಲ್ಟ್‌ಬೆಕ್ ಕಂಪನಿಯ ಪಾತ್ರೆ‌ ತೊಳೆಯುವ ಯಂತ್ರವು ತೀರಾ ಜಿಡ್ಡಾದ ಪಾತ್ರೆಗಳು, ಗಾಜಿನ ಲೋಟ ಸೇರಿದಂತೆ ಇತರ ಪಾತ್ರೆಗಳನ್ನು ಹೇಗೆ ತೊಳೆದುಕೊಡುತ್ತದೆ ಎಂಬುದನ್ನು ಪಾತ್ರವೊಂದು ವಿವರಿಸುತ್ತದೆ. ವಿಶೇಷವೆಂದರೆ, ವಿಡಿಯೊಕ್ಕೆ ಅಗತ್ಯವಿದ್ದ ದೃಶ್ಯಗಳನ್ನು ಈ ಮಹಿಳೆಯರು ತಮ್ಮ ಸ್ಮಾರ್ಟ್‌ಫೋನ್‌‌ಗಳಿಂದಲೇ ಸೆರೆಹಿಡಿದಿದ್ದಾರೆ. ಇದರ ನಿರ್ದೇಶಕರು ಆ್ಯಕ್ಷನ್–ಕಟ್ ಹೇಳುವುದನ್ನೂ ವಿಡಿಯೊ ಕರೆಯ ಮೂಲಕ ನಿಭಾಯಿಸುತ್ತಿದ್ದರು ಎಂದು ಕಂಪನಿ ಹೇಳಿದೆ.

‘ನಮ್ಮ ಟೇಬಲ್‌ ಟಾಪ್‌ ಪಾತ್ರೆ ತೊಳೆಯುವ ಯಂತ್ರ ಸೇರಿದಂತೆ ಎರಡು ಮಾದರಿಯ ಯಂತ್ರಗಳ ಬೇಡಿಕೆಯು ಕಳೆದ ಎರಡು ತಿಂಗಳ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ದಿನನಿತ್ಯದ ಬದುಕಿನಲ್ಲಿ ಎದುರಾಗುತ್ತಿರುವ ಹಲವು ಬಗೆಯ ಕೆಲಸಗಳನ್ನು ನಿಭಾಯಿಸಲು ಜನ ತಂತ್ರಜ್ಞಾನದ ನೆರವು ಪಡೆದುಕೊಳ್ಳುತ್ತಿದ್ದಾರೆ’ ಎಂದು ಕಂಪನಿಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಪ್ರಸೆನ್‌ಜಿತ್‌ ಬಸು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು