ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೂಮ್ ಸೋರಿಕೆ ಆಗುತ್ತೆ!

Last Updated 17 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುವವರು, ಕಂಪನಿಯ ತಂಡದ ಜೊತೆ ಸಮಾಲೋಚನೆಗೆ ಬಳಸುವ ಝೂಮ್ ಆ್ಯಪ್ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಆದರೆ, ಇದು ಸೈಬರ್ ದಾಳಿಗಳಿಗೆ ಈಡಾಗುವ ಸಾಧ್ಯತೆಗಳಿವೆ ಎಂದು ಇತ್ತೀಚೆಗೆ ಸೈಬರ್ ಸುರಕ್ಷಾ ವಿಭಾಗವಾಗಿರುವ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT) ಎಚ್ಚರಿಸಿತ್ತು.

ಅದರ ಬೆನ್ನಿಗೇ, ಝೂಮ್ ಮೀಟಿಂಗ್ ತಾಣವು ವಿಡಿಯೊ ಕಾನ್ಫರೆನ್ಸ್‌ಗೆ ಸುರಕ್ಷಿತ ತಾಣವಲ್ಲ ಎಂದು ಕೇಂದ್ರ ಗೃಹ ಸಚಿವಾಲಯವೂ ಹೇಳಿದ್ದು, ಸರ್ಕಾರಿ ನೌಕರರು, ಅಧಿಕಾರಿಗಳು ಇದನ್ನು ಬಳಸುವಂತಿಲ್ಲ ಎಂದು ಹೇಳಿದೆ. ಜನ ಸಾಮಾನ್ಯರು ಈ ಆ್ಯಪ್ ಬಳಸಲೇಬೇಕೆಂದಿದ್ದರೆ, ಆನ್‌ಲೈನ್ ಮೀಟಿಂಗ್ ರೂಂ ಅನ್ನು ಲಾಕ್ ಮಾಡುವುದು, ಪ್ರಬಲವಾದ ಪಾಸ್‌ವರ್ಡ್ ಬಳಕೆ ಸೇರಿದಂತೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಲೇಬೇಕೆಂದು ಸಲಹೆ ಮಾಡಿದೆ.

ಆನ್‌ಲೈನ್ ಕಾನ್ಫರೆನ್ಸ್ ರೂಂನಲ್ಲಿ ಸಭೆ ನಡೆಸಲು ನೆರವಾಗುವ, ಅಮೆರಿಕ ಮೂಲದ ಈ ಆ್ಯಪ್ ಚೀನಾದಲ್ಲಿ ನಿರ್ಮಾಣವಾಗಿದೆ ಮತ್ತು ಕೆಲವು ಸರ್ವರ್‌ಗಳು ಚೀನಾದಲ್ಲಿವೆ. ಝೂಮ್ ಮೂಲಕ ನಡೆದ ಮೀಟಿಂಗ್ ವಿಡಿಯೊಗಳು ಬಹಿರಂಗಗೊಂಡಿದ್ದು, ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಇಂತಹ ಅಪಾಯಕಾರಿ ತಂತ್ರಾಂಶಗಳ ಬದಲಾಗಿ, ಗೂಗಲ್ ಮೀಟ್, ಮೈಕ್ರೋಸಾಫ್ಟ್ ಟೀಂ ಮುಂತಾದ ಪರ್ಯಾಯ ವಿಡಿಯೊ ಕಾನ್ಫರೆನ್ಸ್ ಆಯ್ಕೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT